
ಶಿರಸಿ :: ಬಿಜೆಪಿ ಸರ್ಕಾರದಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದ ಮಾಜಿ ಕೇಂದ್ರ ಸಚಿವರು, ಸತತ 6 ಬಾರಿ ಉತ್ತರ ಕನ್ನಡದ ಸಂಸದರಾಗಿರುವ ಬಿಜೆಪಿಯ ಫೈರ್ ಬ್ರಾಂಡ್, ಹಿಂದೂ ನಾಯಕ ಅನಂತ್ ಕುಮಾರ್ ಹೆಗಡೆಯವರನ್ನು ಶಿರಸಿಯ ಅವರ ಮನೆಯಲ್ಲಿ ನಿನ್ನೆ ರಾತ್ರಿ ಬೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಭೇಟಿ ಮಹತ್ವ ಪಡೆದುಕೊಂಡಿದೆ…
ಬಿಜೆಪಿಯ ಫೈರ್ ಬ್ರಾಂಡ್ ಎಂದು ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಇತ್ತೀಚಿಗೆ ತಮ್ಮ ಅನಾರೋಗ್ಯದಿಂದ ಸಕ್ರಿಯ ರಾಜಕಾರಣದಿಂದ ಕೊಂಚ ಹಿಂದೆ ಸರಿದಿದ್ದರು…
ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಭೇಟಿ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅವರ ಆರೋಗ್ಯ ವಿಚಾರಿಸಿ ಒಂದಷ್ಟು ಹೊತ್ತು ಪ್ರಸ್ತುತ ರಾಜಕೀಯದ ಬಗ್ಗೆ ಹಾಗೂ ಮುಂದಿನ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದರು….
ರಘುರಾಜ್ ಹೆಚ್.ಕೆ…9449553305….