ಶಿವಮೊಗ್ಗ : ಅಧಿಕ ಮಳೆ ಬಂದು ಅತಿವೃಷ್ಟಿ ಆದ ಪರಿಣಾಮ ಮನೆಗಳು ಬೀಳುವುದರಿಂದ ಆಗುವ ನಷ್ಟವನ್ನು ಪರಿಹಾರ ಮಾಡುವ ಉದ್ದೇಶದಿಂದ ಸರ್ಕಾರ ಅಂತಹ ನೊಂದ ಫಲಾನುಭವಿಗಳಿಗೆ ಹಣದ ರೂಪದಲ್ಲಿ ಪರಿಹಾರವನ್ನು ಘೋಷಿಸಿದೆ… ಹಾಗೂ ಮನೆ ಮಂಜೂರು ಮಾಡಿದೆ…
ಆದರೆ ಅದರ ದುರುಪಯೋಗ ಈಗ ನಡೆಯುತ್ತಿದೆ ನಿಜವಾದ ಫಲಾನುಭವಿಗಳಿಗೆ ಬಿಟ್ಟು ಆರ್ಥಿಕವಾಗಿ ಸದೃಢವಾಗಿರುವ ವಾಸಕ್ಕೆ ಮನೆ ಇರುವ ನಿವಾಸಿಗಳು ಕೂಡ ಫಲಾನುಭವಿಗಳು ಆಗಿರುವುದು ದುರಂತವಾಗಿದೆ…
ಮೊದಲಿಗೆ ತಾತ್ಕಾಲಿಕ ಶೆಡ್ ರೂಪಿಸಿ ಮಳೆ ಬಂದ ನಂತರ ಅದನ್ನು ಬೀಳಿಸಿ, ಇಲ್ಲವೇ ಚೂರು ಪಾರು ಬಿದ್ದು ಹೋದ ಮನೆಯನ್ನು ಪೂರ್ತಿ ಬಿಳಿಸಿ ಪರಿಹಾರ ತೆಗೆದುಕೊಂಡ ಸಾಕಷ್ಟು ಉದಾಹರಣೆಗಳು ಇವೆ…
ಸಮಗ್ರವಾಗಿ ಸ್ಥಳ ಪರಿಶೀಲನೆ ನಡೆಸದೆ ವಿ ಎ, ಪಿ ಡಿ ಓ ,ಎಂಜಿನಿಯರ್ ಗಳು ರಿಪೋರ್ಟ್ ಹಾಕಿ ಅರ್ಹ ಫಲಾನುಭವಿಗಳನ್ನು ಬಿಟ್ಟು ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿಸಿದ್ದಾರೆ ಹಾಗೂ ಪರಿಹಾರ ಕೊಡಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ಇಂದು ಜಿಲ್ಲಾಧಿಕಾರಿಗಳಿಗೆ ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ದೂರು ನೀಡಿದ್ದಾರೆ…
ಪತ್ರಿಕೆಗೆ ಇರುವ ಮಾಹಿತಿಯ ಪ್ರಕಾರ ಇದು ಕೇವಲ ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮದ ಸಮಸ್ಯೆ ಅಷ್ಟೇ ಅಲ್ಲ ಇಡೀ ಜಿಲ್ಲೆಯ ಹಲವು ಕಡೆ ಇದೇ ತರಹ ಮೋಸ ನಡೆದಿದೆ ಎನ್ನಲಾಗಿದೆ…
ದೂರು ಇರುವ ಕಡೆ ಇದರ ಸಮಗ್ರ ತನಿಖೆ ಆಗಬೇಕು ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡಿ ನಿಜವಾದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕು ಹಾಗೂ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಯ ಹಣ ಉಳ್ಳವರ ಪಾಲಾಗುತ್ತದೆ.
ಶಿವಮೊಗ್ಗದ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಸಂಬಂಧ ಪಟ್ಟ ಇಲಾಖೆಗೆ ಮಾರ್ಗದರ್ಶನ ನೀಡಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ನಿಜವಾದ ಫಲಾನುಭವಿಗಳಿಗೆ ಹಣ ಸಂದಾಯ ವಾಗುವಂತೆ ಹಾಗೂ ಮನೆ ಮಂಜೂರು ಆಗುವಂತೆ ನೋಡಿಕೊಳ್ಳಬೇಕು…
ರಘುರಾಜ್ ಹೆಚ್.ಕೆ…9449553305…