
ಶಿವಮೊಗ್ಗ : ಅಧಿಕ ಮಳೆಯಿಂದ ಅತಿವೃಷ್ಟಿಯ ಕಾರಣದಿಂದ ಬಿದ್ದು ಹೋದ ಮನೆಗಳಿಗೆ ಅವುಗಳು ಬಿದ್ದು ಹೋದ ರೀತಿಯ ಆಧಾರದ ಮೇಲೆ ಪೂರ್ತಿ ಬಿದ್ದು ಹೋದರೆ 5 ಲಕ್ಷ ರೂಗಳು, ಅರ್ಧ ಬಿದ್ದರೆ 3 ಲಕ್ಷ ರೂಗಳು, ಸ್ವಲ್ಪ ಪ್ರಮಾಣದ ಹಾನಿಯಾದರೆ 50 ಸಾವಿರ ರೂಪಾಯಿಗಳು ಎಂದು ಕ್ರಮವಾಗಿ ABC ಎಂದು ಮಾರ್ಪಾಡು ಮಾಡಿ ಪರಿಹಾರ ನೀಡುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ…
ಸರ್ಕಾರದ ಈ ವ್ಯವಸ್ಥೆ ಬಡವರಿಗೆ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ವರದಾನವಾಗಿದೆ.. ಬಿದ್ದು ಹೋದ ಮನೆ ಬದಲಾಗಿ ಮತ್ತೊಂದು ಮನೆಯನ್ನು ಕಟ್ಟಿಸಿಕೊಳ್ಳಲು ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ.ಆದರೆ ಕೆಲವು ಅಧಿಕಾರಿ ವರ್ಗದವರಿಗೆ ಬಲಾಡ್ಯರಿಗೆ ಆರ್ಥಿಕವಾಗಿ ಸದೃಢ ಇರುವವರು ಕೂಡ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ವರದಿಯನ್ನು ನ್ಯೂಸ್ ವಾರಿಯರ್ಸ್ ನಿನ್ನೆ ಪ್ರಕಟಿಸಿದ್ದು… ಸಾಲೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರನ್ನು ಕೂಡ ನೀಡಿದ್ದರು… ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಇದನ್ನು ಪರಿಶೀಲನೆ ನಡೆಸುವಂತೆ ತಹಸಿಲ್ದಾರ್ ಗೆ ಆದೇಶ ಮಾಡಿದ್ದಾರೆ… ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಹಶೀಲ್ದಾರ್ C GRADE ಹೊಂದಿದ್ದ ಎರಡು ಮನೆಗಳನ್ನು B2 ಗೆ ವರ್ಗಾಯಿಸಿ ಮಾರ್ಪಾಡು ಮಾಡಿ ಕಳಿಸಿದ್ದಾರೆ… ಇದು ಸ್ವಾಗತಾರ್ಹ ಬೆಳವಣಿಗೆ… ಆದರೆ….
ಈಗಾಗಲೇ ಮನೆಯನ್ನು ಹೊಂದಿರುವವರು ಆರ್ಥಿಕವಾಗಿ ಸದೃಢವಾಗಿರುವವರು ತಾವೇ ಮನೆಯನ್ನು ಬಿಳಿಸಿಕೊಂಡು ಇಂಜಿನಿಯರ್ ಗಳನ್ನು ಬುಕ್ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ಗಂಭೀರ ಆರೋಪ ಈಗ ಇಂಜಿನಿಯರ್ ಗಳ ಮೇಲೆ ಬಿದ್ದಿದೆ…
ಇಂಜಿನಿಯರ್ ಕೂಡ ಯಾವುದೇ ಸ್ಥಳ ಪರಿಶೀಲನೆ ನಡೆಸದೆ ಎಬಿಸಿ ಎನ್ನುವ ಕೆಟಗರಿಯಲ್ಲಿ ಪರಿಹಾರ ಹಣ ನೀಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತದೆ…
ಕೂಡಲೇ ಅಂತ ಇಂಜಿನಿಯರ್ ಗಳನ್ನು ಅಮಾನತ್ತಿನಲ್ಲಿ ಇಡಬೇಕು ಪುನಃ ಸ್ಥಳ ಪರಿಶೀಲನೆ ನಡೆಸಬೇಕು ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗಬೇಕು ಪರಿಹಾರ ಧನ ಬರಬೇಕು ಎನ್ನುವುದು ಗ್ರಾಮಸ್ಥರ ಮನವಿ ಹಾಗೂ ಆಗ್ರಹ…
ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾಡುತ್ತೇವೆ ಎಂದು ಊರಿನ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ….