
ಶಿವಮೊಗ್ಗ: ಕೇರಳ ಸಮಾಜ ಸಮನ್ವಯ ಮಹಿಳಾ ಸಂಘವು ಇತ್ತೀಚೆಗೆ ಹೋಟೆಲ್ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿತು.
ಸಂಘದ ಅಧ್ಯಕ್ಷರಾದ ಶ್ರೀಮತಿ ಬ್ರಿಜಿಟ್ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಖ್ಯಾತ ಲೇಖಕಿಯರಾದ ಶ್ರೀಮತಿ ಸವಿತಾ ನಾಗಭೂಷಣ್ ಇವರು ಮುಖ್ಯ ಅತಿಥಿಗಳಾಗಿ ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದರು.
ಶ್ರೀಮತಿ ಸರೋಜ ಬಾರಂದೂರು , ಖ್ಯಾತ ಮಹಿಳಾ ಕಿರು ಉಧ್ಯಮಿ, ಬಾರಂದೂರು ಭದ್ರಾವತಿ ಇವರು ಸ್ವ ಉದ್ಯೋಗದಲ್ಲಿ ತಾವು ಯಶಸ್ಸು ಗಳಿಸಿದ ಹಾದಿಯ ಬಗ್ಗೆ ಸ್ಪೂರ್ತಿದಾಯಕ ಮಾಹಿತಿ ಹಂಚಿಕೊಂಡರು.ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ದೇವಕಿ ಸುರೇಂದ್ರನ್, ಕಾರ್ಯದರ್ಶಿ ಶಾಂತಾ ನಾಯರ್, ಖಜಾಂಚಿ ಅನಿತ ಮೋಹನ್ ಹಾಜರಿದ್ದರು. ಸಮನ್ವಯ ಸಂಘದ ಸದಸ್ಯರು ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬಕಾರ್ಯಕ್ರಮ ಯಶಸ್ವಿಗೊಳಿಸಿದರು…

ರಘುರಾಜ್ ಹೆಚ್.ಕೆ..9449553305…