
ಶಿವಮೊಗ್ಗ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ರವರ ನೇತೃತ್ವದಲ್ಲಿ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ಸಂಯೋಜನೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆ ಗೆ ಜನ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾ ಅಧಿಕಾರಿಗಳಾದ ಡಾಕ್ಟರ್ ಸೆಲ್ವಮಣಿ ಜಾಥಾ ವನ್ನು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ , ಹೆಚ್ಚುವರಿ ವರಿಷ್ಠಾಧಿಕಾರಿ ಅನಿಲ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ಅರಿವು ವಿಭಾಗದ ನವೀದ್ ಅಹ್ಮದ್ ಪರ್ವೀಜ್ ಮತ್ತು DySP ಬಾಲರಾಜ್,dysp ಸುರೇಶ್, ಗಜಾನನ , ವೃತ್ತ ನಿರೀಕ್ಷಕ ಆಂಜನ್ ಕುಮಾರ್, ಪಿ ಎಸ್ ಐ ಶೈಲಜ ಹಾಗೂ ಹಲವಾರು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ನ ಎಲ್ಲ ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.
ನೈತಿಕ ಮತ್ತು ಕಡ್ಡಾಯ ಮತದಾನ ಮಾಡಲು ಪ್ರೇರೇಪಿಸಲಾಯಿತು. ಮತದಾರರ ಪಟ್ಟಿಯಲ್ಲಿ VHA ಮುಖೇನ Voter Id ಪರಿಶೀಲಿಸಲು ತಿಳಿಸಲಾಯಿತು….ಭಾಗವಹಿಸಿದ್ದ ಎಲ್ಲರಿಗೂ ಟಿ ಶರ್ಟ್ ನೀಡಲಾಯಿತು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಅರ್ಥಪೂರ್ಣ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದರು..

ರಘುರಾಜ್ ಹೆಚ್.ಕೆ..9449553305…