
ಕರ್ನಾಟಕ ರಾಜ್ಯದ ಏಕೈಕ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ವಿಶ್ವವಿದ್ಯಾನಿಲಯ ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯಲ್ಲಿರುವ ಉತ್ತಮವಾದ ಕ್ಯಾಂಪಸ್ ಅನ್ನು ಒಳಗೊಂಡ ವಿಶ್ವವಿದ್ಯಾನಿಲಯವಾಗಿದೆ.
ರಾಜ್ಯದ ಏಕೈಕ ಕನ್ನಡ ವಿಶ್ವವಿದ್ಯಾನಿಲಯ ಆಗಿರುವ ಹಂಪಿ ವಿಶ್ವವಿದ್ಯಾನಿಲಯಕ್ಕೆ ಇಲ್ಲಿಯವರೆಗೂ ನೇಮಕವಾಗಿರುವ ಕುಲಪತಿಗಳು ಪ್ರಬಲ ಸಮುದಾಯಕ್ಕೆ ಸೇರಿದ ಒಕ್ಕಲಿಗ ಸಮುದಾಯದ ಇಬ್ಬರು ಹಾಗೂ ಲಿಂಗಾಯತ ಸಮುದಾಯದ ಇಬ್ಬರಿಗೆ ಕುರುಬ ಸಮುದಾಯದ ಇಬ್ಬರಿಗೆ ಹಾಗೂ ಒಬಿಸಿ ಸಮುದಾಯಕ್ಕೆ ಸೇರಿದ ಇಬ್ಬರನ್ನು ಕುಲಪತಿಗಳನ್ನಾಗಿ ನೇಮಿಸಲಾಗಿದೆ.ಆದರೆ ಇದುವರೆಗೂ ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೇರಿದವರನ್ನು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳನ್ನಾಗಿ ನೇಮಕಾತಿ ಮಾಡಿರುವುದಿಲ್ಲ. ಹಾಲಿ ಹಿಂದೆ ಉಪಕುಲಪತಿಯಾಗಿದ್ದ ಸ.ಚಿ ರಮೇಶ್ ಅವರ ಅಧಿಕಾರ ಅವಧಿ ಕಳೆದ ತಿಂಗಳು ಅಂದರೆ ದಿನಾಂಕ 21.2.2023 ರಂದು ಕೊನೆಗೊಂಡಿದೆ.
ವಿಶ್ವವಿದ್ಯಾನಿಲಯದ ಅಧಿನಿಯಮ ಮತ್ತು ಪರಿನಿಯಮದ ಪ್ರಕಾರ ಈಗಾಗಲೇ ಕುಲಪತಿಗಳ ನೇಮಕಾತಿ ಸಂಬಂಧಿಸಿದಂತೆ ಡಾ/ ಎಸ್, ಕೆ ಸೈದಾಪುರ್ ಅವರ ಅಧ್ಯಕ್ಷತೆಯಲ್ಲಿ ಡಾ/ಸಿದ್ದು ಆಲ್ಗೂರು ಮತ್ತು ಡಾ/ ಎನ್ ಸಿ ಗೌತಮ್ ಸದಸ್ಯರನ್ನು ಒಳಗೊಂಡ ಸೋಧನಾ ಸಮಿತಿಯನ್ನು ದಿನಾಂಕ 20-3-2023 ರಂದು ನಡೆಸಲಾಗಿದೆ.
ಈ ಸಮಿತಿಯ ವರದಿಯ ಆಧಾರದ ಮೇಲೆ ಕುಲಪತಿಗಳ ನೇಮಕಾತಿ ನಡೆಯುತ್ತದೆ. ಹಾಗಾಗಿ ಈ ಬಾರಿ ಆದರೂ ಸಾಮಾಜಿಕ ನ್ಯಾಯ ದೊರಕಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದವರನ್ನು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಿ ನೇಮಕಾತಿ ಮಾಡಲಾಗುತ್ತದೆಯೇ..?! ಎನ್ನುವುದನ್ನು ಕಾದು ನೋಡಬೇಕಾಗಿದೆ..

ರಘುರಾಜ್ ಹೆಚ್.ಕೆ..9449553305…