
ಶಿವಮೊಗ್ಗ: ಮಾಜಿ ಸಚಿವರು ಹಾಲಿ ಶಾಸಕರಾದ ಕೆ ಎಸ್ ಈಶ್ವರಪ್ಪ ಹಾಗೂ ಎಂಎಲ್ಸಿ ಆಯನೂರು ಮಂಜುನಾಥ್ ಅವರ ನಡುವೆ ಶೀತಲ ಸಮರ ನಡೆದುಕೊಂಡು ಬರುತ್ತಿರುವುದು ಈಗ ಗುಟ್ಟಾಗಿ ಏನು ಉಳಿದಿಲ್ಲ..
ಆಯನೂರು ಮಂಜುನಾಥ್ ಬಹಿರಂಗವಾಗಿ ನಾನು ಕೂಡ ಬಿಜೆಪಿ ನಗರ ಕ್ಷೇತ್ರದ ಆಕಾಂಕ್ಷಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ನಂತರ ಮುಂದುವರೆದು ಶಿವಮೊಗ್ಗ ನಗರದ್ಯಾಂತ ಫ್ಲೆಕ್ಸ್ ಗಳನ್ನು ಹಾಕುವುದರ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ಈಶ್ವರಪ್ಪನವರಿಗೆ ಟಾಂಗ್ ನೀಡಿದ್ದಾರೆ. ನಂತರ ಪತ್ರಕರ್ತರ ಜೊತೆ ಮಾತನಾಡುವಾಗ ಅದಕ್ಕೆ ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ ನಾನು ಹೇಳಿದ್ದು ಅವರಿಗಲ್ಲ ಅದು ಎಲ್ಲರಿಗೂ ಸಂಬಂಧ ಪಟ್ಟ ವಿಚಾರ ಎಂದು ಆದರೆ ಶಿಸ್ತಿನ ಪಕ್ಷ ಎಂದು ಗುರುತಿಸಿಕೊಂಡಿರುವ ಬಿಜೆಪಿಯಲ್ಲಿ ಇವೆಲ್ಲ ಸಹಿಸುವುದಿಲ್ಲ ಹೇಳಿಕೆಗಳು ಹಾಗೂ ಬೇಡಿಕೆಗಳು ಏನೇ ಇದ್ದರೂ ಅದು ವರಿಷ್ಠರ ಮುಂದೆ ಇಡಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ .
ಮಹತ್ವ ಪಡೆದುಕೊಂಡಿರುವ ಇಂದಿನ ಇಬ್ಬರು ನಾಯಕರ ಪ್ರತಿಕಾಗೋಷ್ಠಿಗಳು :
ಇಬ್ಬರು ನಾಯಕರ ನಡುವೆ ಶೀತಲ ಸಮರ ಮುಂದುವರಿದ ಬೆನ್ನಲ್ಲೇ ಇಂದು ಇಬ್ಬರು ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದು ತಮ್ಮ ಹೇಳಿಕೆಗಳಿಗೆ ತಮ್ಮ ನಡುವೆ ಇರುವ ಗೊಂದಲಗಳಿಗೆ ಯಾವ ರೀತಿಯ ಸಮರ್ಥನೆ ನೀಡುತ್ತಾರೆ ಎನ್ನುವುದು ಕುತೂಹಲವಾಗಿದೆ. ಇಬ್ಬರು ನಾಯಕರು ರಾಜಿ ಆದ್ರ ಎನ್ನುವ ಪ್ರಶ್ನೆ ಕೂಡ ಮೂಡಿದೆ..
ರಘುರಾಜ್ ಹೆಚ್.ಕೆ..9449553305…