
ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆ ಯು ಹಲವು ವರ್ಷಗಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನಡೆಸಿಕೊಂಡು ಬರುತ್ತಿದೆ. ಹೊರ ರಾಜ್ಯಗಳಲ್ಲೂ ಕೆಲವು ಕಾರ್ಯಕ್ರಮಗಳನ್ನು ನಡೆಸಿದೆ.
ಉದಾ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ.
ಇತ್ತೀಚೆಗೆ ಧರ್ಮಸ್ಥಳ,
ಕುವೆಂಪು ಅವರ ಕುಪ್ಪಳ್ಳಿ ಸೇರಿದಂತೆ ಹಲವೆಡೆ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಜಾಗೃತಿ ಟ್ರಸ್ಟ್ ಮೈಸೂರಿನಲ್ಲಿ ಪುಸ್ತಕ ಬಿಡುಗಡೆ, ನಗೆ ಹಬ್ಬ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ಆಯೋಜಿಸಿ ಸಾಧಕ ಮಹಿಳೆಯರಿಗೆ ಕೆಂಪಮ್ಮ ಪುರಸ್ಕಾರವನ್ನು ನೀಡಿದ ಸಂಭ್ರಮವು ಅವಿಸ್ಮರಣೀಯ
ಯುವ ಕವಿಗಳಿಗೆ ವೇದಿಕೆಗಳನ್ನು ಕಲ್ಪಿಸಿ ಕೊಡುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಯೋಜನೆಗಳು ಜಾಗೃತಿ ಟ್ರಸ್ಟ್ ನಿಂದ ನಿರಂತರವಾಗಿ ವಿಶೇಷವಾಗಿ ವಿಭಿನ್ನವಾಗಿ ನಡೆಯುತ್ತಾ ಬಂದಿದೆ.
4 ಪುಸ್ತಕ ಪ್ರಕಾಶನವನ್ನು ಮಾಡಿ ಕಿರು ಚಿತ್ರ ನಿರ್ಮಾಣ ಮಾಡಿ ಶಶಿಧರ್ ಕೋಟೆ ಅವರಿಂದ ಅಲ್ಪಂ ಗೀತೆ ಬಿಡುಗಡೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿ ಶಾಂತಿನಗರ ಘಟಕದ ಮಾಜಿ ಅಧ್ಯಕ್ಷರಾಗಿರುವ ಬೆಂಗಳೂರು ಪರಿಸರ ಸಂರಕ್ಷಣೆ
ಸಮಾಜಮುಖಿ ಹೋರಾಟಗಾರರು
ಹಾಗೂ ನಿಕಟ ಪೂರ್ವ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರು ಹಾಗೂ ಜಾಗೃತಿ ಟ್ರಸ್ಟ್ ನ ಅಧ್ಯಕ್ಷರು ಆಗಿ
ಬಿ ನಾಗೇಶ್ ರವರು ಅನೇಕ ಕನ್ನಡ ಸಂಘಟನೆಗಳಿಗೆ ಪ್ರೋತ್ಸಾಹಿಸುತ್ತಾ ಕೈ ಜೋಡಿಸುತ್ತಾ ನೂರಾರು ಜನ ಕವಿ ಕವಿಯತ್ರಿಯರಿಗೆ .ಗಾಯಕರಿಗೆ ಸಾಹಿತ್ಯ ,ಕಲೆ ,ಪತ್ರಿಕೋದ್ಯಮ
ಸಮಾಜ ಸೇವೆ ಮಾಡುವವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ
ಕನ್ನಡಪರ ಹೋರಾಟ ಸಂಘಟಕರು.
ಜಾಗೃತಿ ಟ್ರಸ್ಟ್ ನ ಅಧ್ಯಕ್ಷರು ಬಿ ನಾಗೇಶ್ ಇವರು ಎಲೆ ಮರೆ ಕಾಯಿಯಂತಿರುವ ಪ್ರತಿಭಾವಂತರಿಗೆ ವೇದಿಕೆ ನೀಡಿ
ಈ ವರ್ಷದಲ್ಲಿ ಜಾಗೃತಿ ಟ್ರಸ್ಟ್
ಗಡಿನಾಡಿನಲ್ಲಿ ಕನ್ನಡ ಜಾಗೃತಿ ಎಂಬ ಕಾರ್ಯಕ್ರಮವನ್ನು
ಕೇರಳ ರಾಜ್ಯದ ಕಾಸರಗೋಡಿನ ಎಡನೀರು ಮಠದಲ್ಲಿ
ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಸಂಭ್ರಮ ಸಾಧಕರಿಗೆ ಸನ್ಮಾನವನ್ನು
ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ
ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು
ಇವರ ಅಮೃತ ಹಸ್ತದ ಉದ್ಘಾಟನೆಯಲ್ಲಿ
ಅಂತರ್ ರಾಜ್ಯಮಟ್ಟದಲ್ಲಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ 15-4-2023 ಶನಿವಾರ ಅದ್ದೂರಿಯಾಗಿ ನಡೆಯಲಿದೆ.

ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮೊಂದಿಗೆ ಕೈಜೋಡಿಸಿ ನಮ್ಮ ಕನ್ನಡದ ಮೆರಗನ್ನು ಎಲ್ಲೆಲ್ಲೂ ಪಸರಿಸಲು ನಮ್ಮೊಡಗೂಡಿ ಹಾರೈಸಿ ಕನ್ನಡದಲ್ಲೇ ಮಾತನಾಡಿ
ಕನ್ನಡ ತಾಯಿನೆಲದ ಆಶೀರ್ವಾದ ಸಿಗಲಿ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವಿದೆ ಎಂದು
ಜಾಗೃತಿ ಟ್ರಸ್ಟ್ ಅಧ್ಯಕ್ಷರಾದಂತಹ ಬಿ ನಾಗೇಶ್ ಇವರು ತಿಳಿಸಿದ್ದಾರೆ…
ರಘುರಾಜ್ ಹೆಚ್.ಕೆ..9449553305….