Home ಶಿವಮೊಗ್ಗShivamogga Revenue inspector caught in Lokayukta trap: ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಮಹಾನಗರ ಪಾಲಿಕೆಯ ಆರ್ ಐ ಮಂಜುನಾಥ್..!!

Shivamogga Revenue inspector caught in Lokayukta trap: ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಮಹಾನಗರ ಪಾಲಿಕೆಯ ಆರ್ ಐ ಮಂಜುನಾಥ್..!!

by EDITOR NEWS WARRIORS
0 comments

ಶಿವಮೊಗ್ಗದಲ್ಲಿ ರಾಜಕೀಯ ಬೆಳವಣಿಗೆಗಳ ನಡುವೆ ಲೋಕಾಯುಕ್ತ ಪೊಲೀಸರು ಲಂಚಪಡೆಯುತ್ತಿದ್ದಾಗಲೇ ಅಧಿಕಾರಿಯೊಬ್ಬರನ್ನು ಟ್ರ್ಯಾಪ್​ ಮಾಡಿದ್ದಾರೆ

ಶಿವಮೊಗ್ಗ :- ಕಟ್ಟಡ ನಿರ್ಮಾಣಕ್ಕಾಗಿ ಲಂಚ
ಕಟ್ಟಡವೊಂದನ್ನ ಕಟ್ಟುವುದಕ್ಕಾಗಿ ಎನ್​ಒಸಿ ನೀಡುವ ಸಂಬಂಧ ಆರ್​ಐ ಮಂಜುನಾಥ್​ ಲಂಚ ಕೇಳಿದ್ದರಂತೆ. ವಡ್ಡಿನಕೊಪ್ಪ ನಿವಾಸಿ ಹಾಲೇಶ್ ಕುಮಾರ್ ಎಂಬವರಿಂದ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಆರ್​ ಐ ಮಂಜುನಾಥ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಃಗೆ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಇಲಾಖೆಯ ಪ್ರಕಟಣೆಯಲ್ಲಿ ಏನಿದೆ?
ಶ್ರೀ ಹಾಲೇಶ್ ಕುಮಾರ್ ಆರ್. ಬಿನ್ ರಂಗಸ್ವಾಮಿ ಆರ್, 47 ವರ್ಷ, ವ್ಯವಸಾಯ ವೃತ್ತಿ, ವಾಸ: |ನೇ ಕ್ರಾಸ್, ವಡ್ಡಿನಕೊಪ್ಪ, ಶಿವಮೊಗ್ಗ ಇವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಡ್ಡಿನಕೊಪ್ಪ ವಾರ್ಡ್ ನಂಬರ್ 14 ರಲ್ಲಿ ತನ್ನ ತಂದೆ ಶ್ರೀ ರಂಗಸ್ವಾಮಿ ಆರ್ ಬಿನ್ ರಂಗಪ್ಪ ರವರ ಹೆಸರಿನಲ್ಲಿ 39 106 ಒಟ್ಟು 4134 ಚದರ ಅಡಿ ವಿಸ್ತೀರ್ಣದ ಖಾಲಿ ನಿವೇಶನ ಇರುತ್ತದೆ. ಈ ನಿವೇಶನದಲ್ಲಿ ತಾನು ಹೊಸದಾಗಿ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಶಿವಮೊಗ್ಗ ಮಹಾನಗರ ಪಾಲಿಕೆಗೆ ಕಟ್ಟಡ ಪರವಾನಿಗೆ ನೀಡಲು ದಿನಾಂಕ:22-02-2023 ರಂದು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದು, ಪಿರಾದಿದಾರರು ತಮ್ಮ ವಾರ್ಡ್‌ನ ರಾಜಸ್ವ ನಿರೀಕ್ಷಕ ಮಂಜುನಾಥ್ ರವರನ್ನು ಭೇಟಿ ಮಾಡಿ ನಿವೇಶನಕ್ಕೆ ಸಂಬಂಧಿಸಿದ ವರದಿ ನೀಡಲು ಹಲವಾರು ಬಾರಿ ಕೇಳಿಕೊಂಡಿದ್ದು, ಅವರು ಕಳುಹಿಸುತ್ತೇನೆ ಹೋಗು ಎಂದು ನಿರ್ಲಕ್ಷ್ಯದಿಂದ ಹೇಳುತ್ತಿದ್ದರು. ಶ್ರೀ ಮಂಜುನಾಥ್ ಆರ್.ಐ ರವರು ವರದಿಯನ್ನು ನೀಡದೆ ಸತಾಯಿಸುತ್ತಿದ್ದರಿಂದ ಪಿರಾದಿದಾರರು ದಿನಾಂಕ:-06-04-2023 ರಂದು ಸಂಜೆ ಮಹಾನಗರ ಪಾಲಿಕೆ ಹೋಗಿ ಆರ್.ಐ ಮಂಜುನಾಥ್ ರವರನ್ನು ಭೇಟಿ ಮಾಡಿದ್ದು, ಆಗ ಆರ್‌ ಐರವರು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಸಂಭಾಷಣೆಯನ್ನು ವಾಟ್ಸ್ ರೆಕಾರ್ಡ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಈ ದಿನ ದಿನಾಂಕ:11-04-2023 ರಂದು ಲೋಕಾಯುಕ್ತ ಕಛೇರಿ, ಶಿವಮೊಗ್ಗಕ್ಕೆ ವಾಯ್ಸ್ ರಕಾರ್ಡ್‌ನೊಂದಿಗೆ ಹಾಜರಾಗಿ ಶ್ರೀ ಮಂಜುನಾಥ್, ರಾಜಸ್ವ ನಿರೀಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

ಅದರಂತೆ ಅಪಾದಿತರಾದ ಶ್ರೀ ಮಂಜುನಾಥ ಆರ್. ಬಿನ್ ರಂಗಪ್ಪ, ರಾಜಸ್ವ ನಿರೀಕ್ಷಕರು, ಕಂದಾಯ ವಿಭಾಗ, ಮಹಾನಗರ ಪಾಲಿಕೆ ಕಛೇರಿ, ಶಿವಮೊಗ್ಗ ಕಛೇರಿ ಆವರಣದಲ್ಲಿರುವ ತಾತ್ಕಾಲಿಕವಾಗಿ ನಿರ್ಮಿಸಿರುವ ಎಸ್‌ಎಎಸ್‌ (ಆಸ್ತಿ ತೆರಿಗೆ ಪಾವತಿ ಸಂಬಂಧ ಚಲನ್ ನೀಡುವ ಕೌಂಟರ್) ಕೊಠಡಿಯಲ್ಲಿ ಪಿರಾದುದಾರರಿಂದ ಲಂಚದ ಹಣ ರೂ 5,000/- ಪಡೆದಿರುತ್ತಾರೆ. ಈ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ

ಆಪಾದಿತರನ್ನು ಬಂದಿಸಿ ಮುಂದಿನ ತನಿಖೆಯನ್ನು ಶ್ರೀ ಹೆಚ್. ಎಂ. ಜಗನ್ನಾಥ, ಪೊಲೀಸ್ ನಿರೀಕ್ಷಕರು, ಕ.ಲೋ, ಶಿವಮೊಗ್ಗ ಇವರು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಮತ್ತು ಶ್ರೀ ಉಮೇಶ ಈಶ್ವರ ನಾಯ್ಕ ಪೊಲೀಸ್‌ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಅಪಾಧಿತನನ್ನು ಬಂಧಿಸಲಾಗಿರುತ್ತದೆ. ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಪ್ರಸನ್ನ ಸಿ.ಹೆಚ್.ಸಿ, ಶ್ರೀ ಬಿ. ಲೋಕೇಶಪ್ಪ ಸಿ.ಹೆಚ್.ಸಿ. ಶ್ರೀ ವಿ.ಎ ಮಹಂತೇಶ ಸಿ.ಹೆಚ್.ಸಿ. ಶ್ರೀ ಪ್ರಶಾಂತ್ ಕುಮಾರ್ ಸಿ.ಪಿ.ಸಿ. ಶ್ರೀ ರಘುನಾಯ್ಕ ಸಿ.ಪಿ.ಸಿ ಶ್ರೀ ಸುರೇಂದ್ರ ಸಿ.ಪಿ.ಸಿ, ಶ್ರೀ ಅರುಣ್ ಕುಮಾರ್ ಸಿ.ಪಿ.ಸಿ, ಶ್ರೀ ದೇವರಾಜ್, ಸಿ.ಪಿ.ಸಿ, ಶ್ರೀಮತಿ ಪುಟ್ಟಮ್ಮ ಮ.ಪಿ.ಸಿ, ಶ್ರೀಮತಿ ಸಾವಿತ್ರಮ್ಮ, ಮ.ಪಿ.ಸಿ, ಶ್ರೀ ಗಂಗಾಧರ ಎ.ಪಿ.ಸಿ, ಶ್ರೀ ಪ್ರದೀಪ್, ಎ.ಪಿ.ಸಿ ಶ್ರೀ ತರುಣ್ ಕುಮಾರ್ ಎ.ಪಿ.ಸಿ, ಶ್ರೀ ಜಯಂತ್ ಎ.ಪಿ.ಸಿ. ಇವರುಗಳು ಹಾಜರಿದ್ದರು….

ಓಂಕಾರ ಎಸ್. ವಿ. ತಾಳಗುಪ್ಪ…..

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...