
ಜಾಗೃತಿ ಟ್ರಸ್ಟ್ (ರಿ), ಬೆಂಗಳೂರು ಇವರ ವತಿಯಿಂದ ರಾಷ್ಟ್ರಕವಿ ಯುಗದಕವಿ ಜಗದಕವಿ ಕುವೆಂಪು ಹುಟ್ಟೂರಾದ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಹಾಗೂ ಕರ್ನಾಟಕ ರಾಜ್ಯದ್ಯಂತ ಇರುವ ಕವಿಗಳಿಗೆ ಕವಿಗೋಷ್ಠಿಗೆ ಆತ್ಮೀಯ ಆಮಂತ್ರಣವನ್ನು ಜಾಗೃತಿ ಟೆಸ್ಟ್ ನ ರಾಜ್ಯಾಧ್ಯಕ್ಷರಾದ ಬಿ ನಾಗೇಶ್ ರವರು ಪತ್ರಿಕೆ ಪ್ರಕಟಣೆ ಮೂಲಕ ಕವಿಗೋಷ್ಠಿಗೆ ಆಮಂತ್ರಣ, ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ, ಇದರ ಬಗ್ಗೆ ವಿವರಣೆ ಮಾಹಿತಿ ಎಲ್ಲಾದನ್ನು ನೀಡಿದ್ದಾರೆ.
ಆತ್ಮೀಯರೇ, ನಮಸ್ಕಾರಗಳು,
ಕಲಿಗಳ ಕರುನಾಡಿದು
ಸೊಬಗಿನ ಸುಂದರ ಚೆಲುವಿನ ಐಸಿರಿಯ ಜೇನಿನ ಗೂಡಿದು. ಕೃಷ್ಣೆ-ತುಂಗೆ-ಕಾವೇರಿಯ ಪವಿತ್ರ ನದಿಗಳ ಪಾವನ ಮಣ್ಣಿದು.
ರಾಜ ಮಹಾರಾಜರು ಆಳಿದ ನಾಡಿದು.ಪ್ರಾಣಾರ್ಪಣೆಗೈದ ವೀರರತ್ನಗಳು, ಜ್ಞಾನಪೀಠ ರತ್ನಗಳು ಸಾಹಿತಿ-ಕಲಾವಿದರು,ಚಿಂತಕರು ಹೀಗೆ ನೂರೆಂಟು ಜನರಿಂದೊಡಗೂಡಿದ ಸಪ್ತಕೋಟಿ ಜನರ ಸ್ವರ್ಗವಿದು ಕರ್ನಾಟಕ.
ಇಂಥ ಸ್ವರ್ಗಭೂಮಿಯಲ್ಲಿ
ರಾಷ್ಟ್ರಕವಿ ಕುವೆಂಪು ಜನಿಸಿದ
ಕುಪ್ಪಳ್ಳಿಯಲ್ಲಿ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಗಾಯನವನ್ನು
ಏರ್ಪಡಿಸಿ ಕಾವ್ಯ ಪ್ರವಾಸವನ್ನು ಜುಲೈ ತಿಂಗಳಲ್ಲಿ ಆಯೋಜಿಸಿದೆ. .
ನೂರು ಕವಿತೆಗಳನ್ನೊಳಗೊಂಡ
ಕಾವ್ಯಾಮೃತವನ್ನು ಬಿಡುಗಡೆ ಮಾಡುವ ಸದುದ್ದೇಶದಿಂದ
ಎಲ್ಲಾ ಕವಿ ಮನಸ್ಸುಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ.
ನಿಮ್ಮ ಮಸ್ತಕದಿಂದ ಪ್ರತಿದಿನ ಅರಳುವ ಕಾವ್ಯ ಕುಸುಮಗಳಿಗೆ ಒಂದು ಅತ್ಯಾಕರ್ಷಕವಾದ ಶೀರ್ಷಿಕೆಯನ್ನು ಕೊಟ್ಟು
ನಿಮ್ಮ ಸುಂದರವಾದ ಭಾವಚಿತ್ರ ನಿಮ್ಮ ದೂರವಾಣಿ ಸಂಖ್ಯೆ ನಿಮ್ಮ ಊರು ನಮೂದಿಸಿ ಕವನವನ್ನು
ಈ ಕೆಳಕಂಡ ದೂರವಾಣಿ ಸಂಖ್ಯೆಗೆ.ಜೂನ್ 10 ರ ಒಳಗೆ
ಗೀತಾ ವಿ ಆರ್ 9611303864 ಕಳುಹಿಸಬೇಕಾಗಿ ವಿನಂತಿ.
ಕಾವ್ಯ ಪ್ರವಾಸ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ
95909 39909…
ನಾಗೇಶ್ ಬಿ
ಅಧ್ಯಕ್ಷರು ಜಾಗೃತಿ ಟ್ರಸ್ಟ್…
ಆಸಕ್ತರು ರಾಜ್ಯಾಧ್ಯಕ್ಷರಾದ ನಾಗೇಶ್ ಅವರನ್ನು ಅಥವಾ ಅವರು ನೀಡಿರುವ ದೂರವಾಣಿ ಸಂಖ್ಯೆಯ ಸಂಪರ್ಕವನ್ನು ಮಾಡಬಹುದು…
ರಘುರಾಜ್ ಹೆಚ್.ಕೆ…9449553305….