Monday, May 12, 2025
Google search engine
Homeರಾಜ್ಯರಾಜಾಹುಲಿ ಬಿಎಸ್ ವೈ, ಹಿಂದೂಹುಲಿ ಕೆ,ಎಸ್ ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರುಗಳು ಇಲ್ಲದ ಸದನದಲ್ಲಿ ಸಿದ್ದು...

ರಾಜಾಹುಲಿ ಬಿಎಸ್ ವೈ, ಹಿಂದೂಹುಲಿ ಕೆ,ಎಸ್ ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರುಗಳು ಇಲ್ಲದ ಸದನದಲ್ಲಿ ಸಿದ್ದು & ಡಿಕೆ ಟೀಮ್ ಎದುರಿಸಲು ಬಿಜೆಪಿ ಸಜ್ಜು..! ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಗೆ ವಿರೋಧ ಪಕ್ಷ ನಾಯಕನ ಪಟ್ಟ ಸಾಧ್ಯತೆ‌..?!

ಕರ್ನಾಟಕದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ತೆಗೆದುಕೊಂಡು ಸ್ಪಷ್ಟ ಬಹುಮತ ಗಳಿಸಿ ಸರ್ಕಾರ ರಚನೆ ಮಾಡಿದೆ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಸೇರಿದಂತೆ ಎಂಟು ಜನ ಸಚಿವರ ಪ್ರಮಾಣವಚನ ಆಗಿದೆ.

ಇತ್ತ ಕಡೆ ಪ್ರಬಲ ಆಡಳಿತ ಪಕ್ಷವಾಗಿದ್ದ ಬಿಜೆಪಿ ಕೇವಲ 65 ಸ್ಥಾನಗಳನ್ನು ಪಡೆದುಕೊಂಡು ಹೀನಾಯ ಸ್ಥಿತಿಯಲ್ಲಿ ಸೋಲು ಅನುಭವಿಸಿದೆ. ಇನ್ನು ಜೆಡಿಎಸ್ 19 ಸ್ಥಾನಗಳಿಗೆ ತನ್ನ ಗೆಲುವಿನ ಓಟವನ್ನು ನಿಲ್ಲಿಸಿದೆ.

ಹಾಗಾಗಿ ಕೋಮಾ ಸ್ಥಿತಿಯಲ್ಲಿದ್ದ ಕಾಂಗ್ರೆಸ್ಗೆ ಈಗ ಆಕ್ಸಿಜನ್ ಸಿಕ್ಕಂತಾಗಿದ್ದು ಆರೋಗ್ಯವಂತ ಬಿಜೆಪಿ ಕೋಮ ಹಂತ ತಲುಪಿದೆ.

ಕಾಂಗ್ರೆಸ್ಸೇನೋ ಸರ್ಕಾರ ರಚನೆ ಮಾಡಿ ಆಯಿತು ಆದರೆ ವಿರೋಧ ಪಕ್ಷದಲ್ಲಿ ಸಿದ್ದು ಅಂಡ್ ಟೀಮ್ ಅನ್ನು ಪ್ರಬಲವಾಗಿ ವಿರೋಧಿಸುವ ಪ್ರಶ್ನಿಸುವ ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಬಿಜೆಪಿ ಇದೆ.

ಆದರೆ ಅದರ ಕೊರತೆ ಬಿಜೆಪಿಗೆ ಸದ್ಯ ಎದ್ದು ಕಾಣುತ್ತಿದೆ ಏಕೆಂದರೆ ಬಿಜೆಪಿಯ ಘಟಾನುಘಟಿ ನಾಯಕರುಗಳು ಸೋತಿದ್ದಾರೆ. ಇನ್ನು ಯಡಿಯೂರಪ್ಪ ಈಶ್ವರಪ್ಪ ರವರು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಪಕ್ಷವನ್ನೇ ಬಿಟ್ಟು ಹೋಗಿದ್ದಾರೆ. ಸಿಟಿ ರವಿ, ಶ್ರೀರಾಮುಲು, ಸುಧಾಕರ್, ಮಾಧುಸ್ವಾಮಿ, ಸೋಮಣ್ಣ ಅಂತಹ ಘಟಾನುಘಟಿ ನಾಯಕರುಗಳು ಸೋತಿದ್ದಾರೆ.

ಹಾಗಾಗಿ ಕಾಂಗ್ರೆಸ್ಸನ್ನು ಪ್ರಬಲವಾಗಿ ಸದನದಲ್ಲಿ ಎದುರಿಸಲು ಉತ್ತಮ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಇದೆ ಆ ನಿಟ್ಟಿನಲ್ಲಿ ನೋಡುವುದಾದರೆ ಮುಂಚೂಣಿಯಲ್ಲಿರುವ ಹೆಸರುಗಳು ಆರ್ ಅಶೋಕ್, ಬಸವನಗೌಡ ಪಾಟೀಲ್ ಯತ್ನಾಳ್, ಹಿರಿಯರಾದ ಆರಗ ಜ್ಞಾನೇಂದ್ರ, ಹೀಗೆ ಹಲವು ಹೆಸರುಗಳು ಕೇಳಿ ಬರುತ್ತಿವೆ.

ಆದರೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗುವ ಸಾಧ್ಯತೆ ಇದೆ ಏಕೆಂದರೆ ಆಡಳಿತಾತ್ಮಕವಾಗಿ ಆಳ ಅಗಲವನ್ನು ತಿಳಿದುಕೊಂಡಿರುವ ಬೊಮ್ಮಾಯಿ ಕಾನೂನು ವಿಚಾರವಾಗಿಯೂ ಹಣಕಾಸು ವಿಚಾರವಾಗಿಯೂ ಆರ್ಥಿಕ ವಿಚಾರವಾಗಿಯೂ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ.

ಹಾಗಾಗಿ ಪ್ರಬಲವಾಗಿ ಸಿದ್ದು& ಡಿಕೆ ಟೀಮ್ ಅನ್ನು ಎದುರಿಸಲು ಬೊಮ್ಮಾಯಿ ಸದ್ಯದ ಪರಿಸ್ಥಿತಿಯಲ್ಲಿ ಸಮರ್ಥರು ಎಂದು ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡುವ ಸಾಧ್ಯತೆ ಇದೆ..

ರಘುರಾಜ್ ಹೆಚ್.ಕೆ…9449553305….

RELATED ARTICLES
- Advertisment -
Google search engine

Most Popular

Latest news
ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರ‌ ಗಂಗಾವತಿ ಗೆ ಬೈ ಎಲೆಕ್ಷನ್..! ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..!