
ತೀರ್ಥಹಳ್ಳಿ : ತಾಲೂಕಿನಲ್ಲಿ ಕೆಲವು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಸಾರ್ವಜನಿಕರ ಗೋಳು ಕೇಳುವವರೇ ಇಲ್ಲ ಯಾವಾಗ ನೋಡಿದರೂ ಛೇರುಗಳು ಖಾಲಿ ಖಾಲಿ ಇರುತ್ತವೆ. ಕೆಲಸಕ್ಕಾಗಿ ಬರುವ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮೆಸ್ಕಾಂ ಇಲಾಖೆ, ಪಟ್ಟಣ ಪಂಚಾಯಿತಿ,ಕುಶಾವತಿಯ ಮೀನುಗಾರಿಕೆ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸಿಬ್ಬಂದಿಗಳು ,ಅಧಿಕಾರಿಗಳು, ಸರ್ಕಾರದ ಅಧಿಕೃತ ಆದೇಶದ ಅನ್ವಯ ಬೆಳಿಗ್ಗೆ 10.30 ಕ್ಕೆ ಕಚೇರಿ ತೆರೆಯಬೇಕು ಎನ್ನುವ ನಿಯಮ ಇದ್ದರೂ ಅದನ್ನು ಪಾಲಿಸದೆ ಬೇಕಾದಾಗ ತೆಗೆಯುವುದು ಬೇಕಾದಾಗ ಮುಚ್ಚುವುದು ತೆಗೆದರು ಆಫೀಸಿಗೆ ಬರದೆ ಇರುವುದು ಸಾರ್ವಜನಿಕರಿಗೆ ತೀವ್ರತರದಲ್ಲಿ ತೊಂದರೆಯಾಗುತ್ತಿದೆ.
ಹಾಲಿ ಶಾಸಕರು ಮಾಜಿ ಗೃಹ ಸಚಿವರು ಆಗಿರುವ ಆರಗ ಜ್ಞಾನೇಂದ್ರ ಅವರು ಇದರ ಬಗ್ಗೆ ಗಮನ ಹರಿಸಬೇಕು ಹಾಗೂ ದಕ್ಷ ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿರುವ ಜಿಲ್ಲಾಧಿಕಾರಿಗಳಾದ ಡಾಕ್ಟರ್ ಆರ್ ಸೇಲ್ವಮನೆಯವರು ಗಮನ ಹರಿಸಬೇಕು….
ಸೋಂಬೇರಿ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕು ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ಕಾಣಬೇಕು….
ರಘುರಾಜ್ ಹೆಚ್.ಕೆ…9449553305…
