
ಕಳೆದ ಕೆಲವು ದಿನಗಳಿಂದ ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಹಿಂದೂ ರಾಷ್ಟ್ರದ ಚರ್ಚೆ ನಡೆಯುತ್ತಿದೆ. ಈ ವೇಳೆಯಲ್ಲಿಯೇ ಮೂಲಭೂತವಾದಿ ಭಾರತದ್ವೇಷಿಗಳು ಹಿಂದೂ ರಾಷ್ಟ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಜನರು ಭಾರತ ಧರ್ಮಾಧಿಷ್ಠಿತ ಆದರೆ, ಇಸ್ಲಾಮಿ ದೇಶ ಪಾಕಿಸ್ತಾನದಂತೆ ಭಾರತದ ಸ್ಥಿತಿಯಾಗುವುದು, ಎಂದು ಹೇಳುತ್ತಿದ್ದಾರೆ, ಇನ್ನು ಖಲಿಸ್ತಾನವಾದಿ ನಾಯಕರು ಹಿಂದೂ ರಾಷ್ಟ್ರಕ್ಕಿಂತ ಖಲಿಸ್ತಾನಿವಾದದ ಕಲ್ಪನೆ ಒಳ್ಳೆಯದಿರುತ್ತದೆಂದು ಹೊಗಳುತ್ತಿದ್ದಾರೆ. ಕೆಲವು ಜನರು ಹಿಂದೂ ರಾಷ್ಟ್ರದಿಂದ ‘ಸೆಕ್ಯುಲರ್’ ಭಾರತಕ್ಕೆ ಅಪಾಯ ಇರುವುದು, ಹಾಗೂ ಅದರಿಂದ ಹಿಂದೂಯೇತರರ ಅಸ್ತಿತ್ವದ ಬಗ್ಗೆ ಪ್ರಶ್ನೆ ನಿರ್ಮಾಣವಾಗುತ್ತಿದೆ ಎಂದು ಆರೋಪಿಸುತ್ತಾರೆ; ಆದರೆ ಈ ಅಪಪ್ರಚಾರದಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ, ಇದನ್ನು ನಾವು ತಿಳಿದುಕೊಳ್ಳಬೇಕು. ಹಿಂದೂ ರಾಷ್ಟ್ರ ಇದು ಯಾವುದೇ ರಾಜಕೀಯ ಪರಿಕಲ್ಪನೆ ಅಲ್ಲ, ಎಲ್ಲ ಜೀವಿಗಳ ಕಲ್ಯಾಣಕ್ಕಾಗಿ ಇರುವ ಒಂದು ಆದರ್ಶ ವ್ಯವಸ್ಥೆಯಾಗಿದೆ. ಇದು ಯಾವುದೇ ಹೊಸ ರಾಜ್ಯ ವ್ಯವಸ್ಥೆ ಅಲ್ಲ, ಇಲ್ಲಿಯವರೆಗೆ ಭಾರತದಲ್ಲಿ ಅನೇಕ ಶತಕಗಳ ಕಾಲ ಈ ರಾಜ್ಯ ವ್ಯವಸ್ಥೆ ಇತ್ತು. ಭಾರತ ಅನಾದಿಕಾಲದಿಂದ ಹಿಂದೂ ರಾಷ್ಟ್ರವೇ ಆಗಿತ್ತು. ತ್ರೆತಾಯುಗದಲ್ಲಿ ರಾಜ ಹರಿಶ್ಚಂದ್ರ ಮತ್ತು ಪ್ರಭು ಶ್ರೀರಾಮ, ದ್ವಾಪರಯುಗದಲ್ಲಿ ಮಹಾರಾಜ ಯದಿಷ್ಠ್ಟಿರ, ಕಲಿಯುಗದಲ್ಲಿ ರಾಜ ಹರ್ಷವರ್ಧನ, ಅಫ್ಘಾನಿಸ್ತಾನದ ರಾಜ ದಾಹಿರ, ಮಗಧದ ಸಾಮ್ರಾಟ ಚಂದ್ರಗುಪ್ತ, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜ ಮುಂತಾದವರ ರಾಜ್ಯ ಎಂದಿಗೂ ‘ಸೆಕ್ಯುಲರ್’ ಆಗಿರಲಿಲ್ಲ. ಹಿಂದೂ ರಾಷ್ಟ್ರವೇ ಆಗಿತ್ತು. ಈಗಲೂ ಈ ಎಲ್ಲಾ ರಾಜರನ್ನು ಗೌರವದಿಂದ ಸ್ಮರಿಸಲಾಗುತ್ತದೆ. ತುಂಬಾ ಹಿಂದೆ ಹೋಗುವುದು ಬೇಡ, ೧೯೪೭ ರಲ್ಲೂ ೫೬೬ ಸಂಸ್ಥಾನಗಳು ಹಿಂದೂ ರಾಜ್ಯಗಳೇ ಆಗಿದ್ದವು. ಆದ್ದರಿಂದ ಹಿಂದೂ ರಾಷ್ಟ್ರಕ್ಕೆ ಆಗುವ ವಿರೋಧವೆಂದರೆ ಜನರ ಉದ್ಧಾರಕ್ಕೆ ಮತ್ತು ಸುವ್ಯವಸ್ಥೆಗೆ ಆಗುತ್ತಿರುವ ವಿರೋಧವಾಗಿದೆ, ಇದನ್ನು ತಿಳಿದುಕೊಂಡು ಹಿಂದೂ ರಾಷ್ಟ್ರಕ್ಕಾಗಿ ಸಂಘಟಿತರಾಗಬೇಕು.
ಹಿಂದೂ ರಾಷ್ಟ್ರದ ಆವಶ್ಯಕತೆ : ಇಂದು ನಾವು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ; ಆದರೆ ಈ ೭೫ ವರ್ಷದಲ್ಲಿ ಭಾರತವು ‘ಸ್ವ’ ತಂತ್ರ ಅರ್ಥಾತ್ ತನ್ನ, ಎಂದರೆ ಭಾರತೀಯ ತಂತ್ರದ ಅಭಾವವನ್ನೇ ಅನುಭವಿಸಿದೆ. ವೇಶಭೂಷಣ, ಕಾನೂನು, ಖಾದ್ಯ ಸಂಸ್ಕೃತಿ, ಆಚಾರ, ಶಿಕ್ಷಣ, ನ್ಯಾಯ ವ್ಯವಸ್ಥೆ, ಆಡಳಿತ ವ್ಯವಸ್ಥೆ ಮುಂತಾದ ವಿಭಿನ್ನ ಕ್ಷೇತ್ರಗಳಲ್ಲಿ, ಅಥವಾ ಅದಕ್ಕಿಂತಲೂ ಭಾರತೀಯರ ವೈಯಕ್ತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದ ಮೇಲೆ ಇಂದಿಗೂ ಪಾಶ್ಚಾತ್ಯ ವಿಕೃತಿಯ ದೊಡ್ಡ ಪ್ರಭಾವವಿದೆ. ‘ಜನರಿಗಾಗಿ ನಡೆಸುವ ರಾಜ್ಯ,’ ಹೀಗೆ ಲೋಕ ತಂತ್ರದ ವರ್ಣನೆ ಮಾಡುತ್ತಾರೆ, ಆದರೆ ನಿತ್ಯ ಜೀವನದಲ್ಲಿ ಸರ್ವಸಾಮಾನ್ಯ ನಾಗರೀಕರು ನೋವನ್ನೇ ಅನುಭವಿಸಬೇಕಾಗುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ. ಇದೆಲ್ಲವೂ ‘ಸೆಕ್ಯುಲರ್ ವ್ಯವಸ್ಥೆಯ ದುಷ್ಪರಿಣಾಮವಾಗಿದೆ. ಆದ್ದರಿಂದ ಹಿಂದೂಗಳಿಗೆ ಅನ್ಯಾಯ ಮಾಡುವ, ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತು ನೀಡುವ, ಹಾಗೂ ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗೆ ದ್ರೋಹ ಬಗೆಯುವ ‘ಸೆಕ್ಯುಲರ್ ವ್ಯವಸ್ಥೆಯ ಬದಲು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರಕ್ಕಾಗಿ ಒಟ್ಟಾಗಿ ಧ್ವನಿಯೆತ್ತಬೇಕು. ೧೯೭೬ ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಇರುವಾಗ ಕಾಂಗ್ರೆಸ್ ಸರಕಾರವು ಸಂವಿಧಾನದ ತಿದ್ದುಪಡಿ ಮಾಡಿ ‘ಸೆಕ್ಯುಲರ್’ ಶಬ್ದವನ್ನು ಸಂವಿಧಾನದಲ್ಲಿ ತುರುಕಿತು. ಈಗ ಅದೇ ಭಾರತದ ಸಂವಿಧಾನವನ್ನು ಪುನಃ ತಿದ್ದುಪಡಿ ಮಾಡಿ ‘ಹಿಂದೂ ರಾಷ್ಟ್ರ’ವಾಗಿ ಘೋಷಿಸಬೇಕೆಂಬುದು ದೇಶಪ್ರೇಮಿ ಭಾರತೀಯರ ಭಾವನೆಯಾಗಿದೆ.
ಹಿಂದುತ್ವದ ಮೇಲಿನ ಆಘಾತಗಳು : ಭಾರತದಲ್ಲಿ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳಿವೆ; ಆದರೆ ಇದರಲ್ಲಿನ ೬ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸಂಖ್ಯೆ ಗಮನಕ್ಕೆ ತೆಗೆದುಕೊಂಡರೆ, ಇಂದು ಶೇಕಡ ೨೫ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿದೆ. ಸ್ವಾತಂತ್ರ್ಯವೀರ ಸಾವರ್ಕರರು ‘ಹಿಂದುತ್ವವೇ ರಾಷ್ಟ್ರೀಯತ್ವ’ ಎಂದು ಪ್ರತಿಪಾದಿಸಿದ್ದರು. ಅದಕ್ಕನುಸಾರ ಯಾವುದಾದರೂ ಪ್ರದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವುದೆಂದರೆ ಆ ಪ್ರದೇಶದಲ್ಲಿನ ಭಾರತೀಯತ್ವದ ಭಾವನೆ ಕ್ಷೀಣವಾದಂತೆ. ೧೯೯೦ ರಲ್ಲಿ ಜಿಹಾದಿ ಭಯೋತ್ಪಾದನೆಯಿಂದ ಲಕ್ಷಾಂತರ ಕಾಶ್ಮೀರಿ ಹಿಂದೂಗಳ ನರಸಂಹಾರ ನಡೆಯಿತು. ಇಂದು ಕಲಂ ೩೭೦ ರದ್ದು ಪಡಿಸಿದ್ದರೂ ಅಲ್ಲಿಯ ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಇದುವರೆಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ತದ್ವಿರುದ್ಧ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಲಾಗುತ್ತಿದೆ. ಹಿಂದೂ ರಾಷ್ಟ್ರದ ‘ಟಾರ್ಗೆಟ್’ ಸಾಧಿಸದಿದ್ದರೆ ಹಿಂದೂಗಳ ‘ಟಾರ್ಗೆಟ್ ಕಿಲ್ಲಿಂಗ್’ ನಿಲ್ಲುವುದಿಲ್ಲ, ಇದೇ ಸತ್ಯವಾಗಿದೆ. ಭಾರತದ ಸ್ವಾತಂತ್ರ್ಯದ ಶತಕ ಮಹೋತದವರೆಗೆ ಎಂದರೆ ೨೦೪೭ ರ ವರೆಗೆ ಭಾರತದ ‘ಇಸ್ಲಾಮಿಸ್ತಾನ ಮಾಡುವ ಮತಾಂಧರ ‘ಬ್ಲೂಪ್ರಿಂಟ್ ಬೆಳಕಿಗೆ ಬಂದಿತ್ತು. ಅದಕ್ಕೆ ಮೊದಲೇ ‘ಗಜವಾ-ಏ-ಹಿಂದ್’ನ ಕನಸನ್ನು ಸ್ಮಶಾನದಲ್ಲಿ ಹುಗಿದು ಅಂದರೆ ಭಾರತದ ರಕ್ಷಣೆಗಾಗಿ ನಾವು ಸಿದ್ಧರಾಗಬೇಕಾಗಿದೆ.
ಇಂದು ವಕ್ಫ್ ಕಾನೂನಿನ ಮೂಲಕ ಹಿಂದೂಗಳ ಸಂಪತ್ತಿಯನ್ನು ಲೂಟಿ ಮಾಡಲಾಗುತ್ತಿದೆ. ಕೇವಲ ಹಿಂದೂಗಳದ್ದಷ್ಟೇ ಅಲ್ಲ, ಸರಕಾರದ ಭೂಮಿಯೂ ವಕ್ಫ್ ಭೂಮಿ ಎಂದು ಘೋಷಿಸಿರುವ ಘಟನೆಗಳು ಬಹಿರಂಗವಾಗಿವೆ. ಹಿಂದೂಗಳು ಶ್ರಮಪಟ್ಟು ಗಳಿಸಿರುವ ಸಂಪತ್ತು ಯಾವುದೇ ಕ್ಷಣದಲ್ಲಿ ಮತಾಂಧ ವಕ್ಫ್ ಸಂಪತ್ತು ಎಂದು ಘೋಷಿಸಬಹುದು ಮತ್ತು ಅದಕ್ಕೆ ಯಾವುದೇ ನ್ಯಾಯಾಲಯದಲ್ಲಿ ಇದರ ವಿರುದ್ಧ ಹೋಗಲು ಸಾಧ್ಯವಿಲ್ಲ, ಇದು ಹಿಂದೂಗಳನ್ನು ನಾಮಾವಶೇಷ ಮಾಡುವ ಷಡ್ಯಂತ್ರವಾಗಿದೆ. ಹಿಂದವೀ ಸ್ವರಾಜ್ಯದ ಸಾಕ್ಷಿ ನೀಡುವ ಅನೇಕ ಕೋಟೆ-ದುರ್ಗಗಳು ಇಂದು ಇಸ್ಲಾಮಿ ಅತಿಕ್ರಮಣದಿಂದ ಸುತ್ತುವರೆದಿವೆ. ರಾತ್ರೋರಾತ್ರಿ ಕೋಟೆ ದುರ್ಗಗಳ ಮೇಲೆ ದರ್ಗಾ ಮತ್ತು ಗೋರಿಗಳನ್ನು ಸೃಷ್ಟಿಸುತ್ತಾರೆ. ವಕ್ಫ್‌ನಂತಹ ಅಪಾಯಕಾರಿ ಕಾನೂನನ್ನು ನಾಶಗೊಳಿಸಲು, ಹಾಗೂ ಹಿಂದೂಗಳ ಅಧಿಕಾರದ ಮತ್ತು ಗೌರವದ ರಕ್ಷಣೆಗಾಗಿ ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ.
ಹಿಂದೂಗಳನ್ನು ಗುರಿಪಡಿಸಲು ಇಂದು ಬೇರೆ ಬೇರೆ ‘ಟೂಲ್‌ಕಿಟ್’ ಉಪಯೋಗಿಸಲಾಗುತ್ತಿದೆ. ಕೆಲವೊಮ್ಮೆ ಹಿಂದೂಗಳನ್ನು ಮೋಸ ಮಾಡಿ, ಆಮಿಷವೊಡ್ಡಿ ಅವರ ಮತಾಂತರ ಮಾಡಲಾಗುತ್ತದೆ. ಕೆಲವೊಮ್ಮೆ ಕಲಾಸ್ವಾತಂತ್ರ್ಯದ ಹೆಸರಿನಲ್ಲಿ ಚಲನಚಿತ್ರ, ಧಾರಾವಾಹಿ, ವೆಬ್ ಸೀರೀಸ್ ಮುಂತಾದರ ಮಾಧ್ಯಮದಿಂದ ಹಿಂದೂ ದೇವತೆಗಳ ಮತ್ತು ಶ್ರದ್ಧಾಸ್ಥಾನಗಳ ವಿಡಂಬನೆ ಮಾಡುತ್ತಾರೆ, ಇನ್ನು ಕೆಲವೆಡೆ ಭಾರತೀಯ ಅರ್ಥವ್ಯವಸ್ಥೆಗೆ ಸಮಾಂತರವಾದ ‘ಹಲಾಲ್ ಅರ್ಥವ್ಯವಸ್ಥೆ’ ನಿರ್ಮಿಸಿ ಹಿಂದೂಗಳಿಗೆ ಹಲಾಲ್ ಆಹಾರ ಪದಾರ್ಥವನ್ನೇ ಖರೀದಿಸುವಂತೆ ಒತ್ತಾಯಿಸಲಾಗುತ್ತದೆ. ಕೆಲವೊಮ್ಮೆ ಹಿಂದೂ ಧರ್ಮಗ್ರಂಥಗಳ ನಾಶ ಮಾಡುತ್ತಾರೆ – ‘ರಾಮಚಾರಿತಮಾನಸ’ ದಂತಹ ಗ್ರಂಥಗಳನ್ನು ಬಹಿರಂಗವಾಗಿ ಸುಟ್ಟು ಹಾಕುತ್ತಾರೆ, ಹಾಗೂ ಕೆಲವೊಮ್ಮೆ ದೇವಸ್ಥಾನಗಳಲ್ಲಿನ ದೇವತೆಗಳ ಮೂರ್ತಿ ಮತ್ತು ರೂಢಿ ಪರಂಪರೆಗಳನ್ನು ಗುರಿ ಮಾಡಲಾಗುತ್ತದೆ. ಹಿಂದೂ ಯುವತಿ ಮತ್ತು ಮಹಿಳೆಯರನ್ನು ಸುಳ್ಳು ಪ್ರೇಮದ ಬಲೆಗೆ ಸಿಲುಕಿಸಿ ಅವರನ್ನು ಪೂರ್ಣವಾಗಿ ಉಪಭೋಗಿಸಿ ‘ಲವ್ ಜಿಹಾದ್’ ನಡೆಸಲಾಗುತ್ತದೆ. ‘ಮೇರಾ ಅಬ್ದುಲ್ ಅಲಗ್ ಹೈ ಎಂಬ ಭ್ರಮೆಯಲ್ಲಿರುವ ಹಿಂದೂ ಹುಡುಗಿಯರಿಗೆ ಬುರ್ಖಾ ಧರಿಸಲು, ಗೋಮಾಂಸ ಭಕ್ಷಿಸಲು, ಹಾಗೂ ‘ಇಸ್ಲಾಂ ಕಬೂಲ್’ ಮಾಡುವ ಬೆದರಿಕೆ ಹಾಕುತ್ತಾರೆ ; ಇಲ್ಲದಿದ್ದರೆ ಅವರ ದೇಹದ ೩೫ ತುಂಡು ಮಾಡಲಾಗುತ್ತದೆ. ‘ಸೆಕ್ಯುಲರ್’ ಭಾರತ ಹಿಂದೂಗಳ ಶ್ರದ್ಧೆಯ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದೇ ಈ ಘಟನೆಗಳಿಂದ ಕಂಡು ಬರುತ್ತದೆ. ಹಿಂದೂ ಯುವತಿಯರ ಮಾನರಕ್ಷಣೆಗಾಗಿ, ಹಿಂದೂ ಪರಂಪರೆಯ ರಕ್ಷಣೆಗಾಗಿ, ಹಾಗೂ ಧರ್ಮಗ್ರಂಥಗಳ ಗೌರವ ಕಾಪಾಡಲು ಇಂದು ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ.
ಕೇವಲ ಆರ್ಥಿಕ ವಿಕಾಸ ಅಪೂರ್ಣ : ಜನರು ಸುಖವಾಗಿದ್ದು ಸಮೃದ್ಧ ರಾಷ್ಟ್ರಕ್ಕಾಗಿ ಕೇವಲ ಆರ್ಥಿಕ ವಿಕಾಸ ಸಾಲದೆ ಜೀವನದಲ್ಲಿ ವ್ಯಾಪಿಸಿರುವ ಎಲ್ಲಾ ಅಂಶಗಳ ವಿಕಾಸವಾಗುವುದು ಅವಶ್ಯಕವಾಗಿದೆ. ಧರ್ಮವು ಜೀವನದ ಎಲ್ಲಾ ಅಂಶಗಳನ್ನು ಒಳಗೊಂಡಿರುವುದರಿಂದ ರಾಷ್ಟ್ರವು ಜಾತ್ಯಾತೀತವಾಗಿರದೇ, ಧರ್ಮಾಧಿಷ್ಠಿತವಾಗಿರುವುದು ಆವಶ್ಯಕವಾಗಿದೆ. ಆದ್ದರಿಂದ ಹಿಂದೂ ರಾಷ್ಟ್ರವು ಧರ್ಮಾಧಿಷ್ಠಿತವಾಗಿರಲಿದೆ ! ತ್ಯಾಗ ಮತ್ತು ರಾಷ್ಟ್ರಹಿತದ ವಿಚಾರ ಮಾಡುವ ಧರ್ಮಾಚರಣಿ ಸಮಾಜ, ಕರ್ತವ್ಯನಿಷ್ಠ ಸುರಕ್ಷಾವ್ಯವಸ್ಥೆ, ಸತ್ಯಾನ್ವೇಷದ ನ್ಯಾಯ ಪ್ರಣಾಳಿ ಮತ್ತು ಕಾರ್ಯಕ್ಷಮ ಆಡಳಿತ, ಇದು ಈ ‘ಹಿಂದೂ ರಾಷ್ಟ್ರದ ವೈಶಿಷ್ಟ್ಯಗಳಾಗಿವೆ.
ರಾಷ್ಟ್ರದ ಸುಖವು ಪ್ರಜೆಯ ಧರ್ಮಾಚರಣೆಯ ಪೂರಕ ಫಲವಾಗಿದೆ, ಎಂದು ನಮ್ಮ ವೈದಿಕ ಸಂಸ್ಕೃತಿಯಲ್ಲಿ ಹೇಳಲಾಗಿದೆ. ಆ ದೃಷ್ಟಿಯಿಂದ ಪ್ರಸ್ತುತ ನಡೆಯುತ್ತಿರುವ ಹಿಂದೂ ರಾಷ್ಟ್ರದ ಚಳುವಳಿಗಳಿಗೆ ಒಂದು ಯೋಗ್ಯ ದಿಶೆ ಸಿಗಬೇಕು, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬೇರೆ ಬೇರೆ ಸ್ತರದಲ್ಲಿ ಕಾರ್ಯನಿರತವಾಗಿರುವ ಹಿಂದುತ್ವನಿಷ್ಠರ ಸಂಘಟನೆಯಾಗಬೇಕು. ಅವರ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಬೇಕು, ವೈಚಾರಿಕ ದಿಶೆ ಸ್ಪಷ್ಟವಾಗಬೇಕು, ಎಂಬ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗೋವಾದಲ್ಲಿ ಜೂನ್ ೧೬ ರಿಂದ ೨೨ ವರೆಗೆ, ಹನ್ನೊಂದನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಎಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆಯೋಜನೆ ಮಾಡಲಾಗಿದೆ. ಪ್ರತಿ ವರ್ಷದಂತೆ ದೇಶವಿದೇಶದಲ್ಲಿನ ಹಿಂದುತ್ವನಿಷ್ಠರ ನಾಯಕರು, ಕಾರ್ಯಕರ್ತರು ಈ ಅಧಿವೇಶನಕ್ಕೆ ಉಪಸ್ಥಿತರಿರುವರು. ಈ ಅಧಿವೇಶನದ ಮಾಧ್ಯಮದಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ಬಲ ಸಿಗುವುದು ಮತ್ತು ನಮ್ಮ ಭಾರತವು ವಿಶ್ವದಲ್ಲೇ ತೇಜಸ್ವಿ ‘ಹಿಂದೂ ರಾಷ್ಟ್ರದ ಸ್ವರೂಪದಲ್ಲಿ ಮತ್ತೊಮ್ಮೆ ಸ್ಥಾಪಿತವಾಗಬೇಕೆಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !
ರಮೇಶ ಶಿಂದೆ,…
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕ : ೯೯೮೭೯೬೬೬೬೬)

