
ಶಿವಮೊಗ್ಗ: ಗಾಂಜಾ ಮತ್ತಿನಲ್ಲಿದ್ದ 8 ರಿಂದ 10 ಜನರ ಗುಂಪೊಂದು ಆಜ್ ಕಾ ಇಂಕಿಲ್ಯಾಬ್ ದಿನ ಪತ್ರಿಕೆಯ ಸಂಪಾದಕ ಮುದಾಸಿರ್ ಅಹಮದ್ ಮೇಲೆ ಏಕಾಏಕಿ ಹಲ್ಲೇ ಮಾಡಿದ್ದು ಮುದಾಸಿರ್ ಅವರನ್ನು ಮೆಗನ್ ಆಸ್ಪತ್ರೆಗೆ ಸೇರಿಸಲಾಗಿದೆ.
ಏನಿದು ಘಟನೆ..!
ಆರ್ ಎಂ ಎಲ್ ನಗರದ ಮಸೀದಿಯ ಹತ್ತಿರ ಮುದಾಸಿರ್ ಮನೆ ಇದೆ ಇವರ ಮಗ ಸುಮಾರು ಹತ್ತು ವರ್ಷದ ಯುವಕನ ಮೇಲೆ 8 ರಿಂದ 10 ಜನರಿಂದ ಗುಂಪು ಬಂದು ಹಲ್ಲೆ ಮಾಡಲು ಮುಂದಾಗಿದೆ. ಮನೆಯಲ್ಲಿದ್ದ ಮುದಾಸಿರ್ ತಡೆಯಲು ಪ್ರಯತ್ನಿಸಿದಾಗ ಏಕಾಏಕಿ ಮುದಾಸಿರ್ ಮೇಲೆ ಮುಗಿಬಿದ್ದ ಎಂಟರಿಂದ 10 ಜನರ ಗುಂಪು ಮುದಾಸಿರ್ ಅವರಿಗೆ ಹಲ್ಲೆ ಮಾಡಿದ್ದು ಮುದಾಸಿರ್ ಅವರನ್ನು ಮೆಗನ್ ಆಸ್ಪತ್ರೆಗೆ ಸೇರಿಸಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ. ಮುದಾಸಿರ್ ಹೇಳುವ ಪ್ರಕಾರ ಹಲ್ಲೆ ಮಾಡಿದ ಎಲ್ಲರೂ ಗಾಂಜಾ ಮತ್ತಿನಲ್ಲಿ ಇದ್ದರು ನನ್ನ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳುತ್ತಾರೆ..
ಇದೊಂದು ಗಂಭೀರ ಪ್ರಕರಣವಾಗಿದ್ದು ಪೊಲೀಸರು ಕೂಡಲೇ ಸಂಬಂಧಪಟ್ಟವರನ್ನು ಭಂಧಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಏಕೆಂದರೆ ಹಲ್ಲೆ ಮಾಡಲು ಮುಂದಾಗಿದ್ದು ಓರ್ವ ಸಂಪಾದಕನಿಗೆ ಯಾವುದೋ ಹಳೆ ದ್ವೇಷದ ಹಿನ್ನೆಲೆಯಲ್ಲೂ ಈ ಹಲ್ಲೆ ನಡೆದಿರಬಹುದು ಸೂಕ್ತ ತನಿಖೆಯಾಗಬೇಕು ಕಠಿಣ ಶಿಕ್ಷೆ ಆಗಬೇಕು…
ರಘುರಾಜ್ ಹೆಚ್.ಕೆ…9449553305….