
ಧರ್ಮಸ್ಥಳ : ಬರೋಬ್ಬರಿ 36 ವರ್ಷಗಳ ಹಿಂದೆ ಅಂದರೆ ಫೆಬ್ರವರಿ 17, 1987 ರಂದು ಪದ್ಮಲತಾ ಎಂಬ ಕಾಲೇಜು ಓದುತ್ತಿದ್ದ ಯುವತಿಯ ಹೆಣ ಧರ್ಮಸ್ಥಳದ ನದಿಯಲ್ಲಿ ಸಿಕ್ಕಿತ್ತು. ಈ ಪ್ರಕರಣ ಆ ಸಮಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.
ಏನಿದು ಪ್ರಕರಣ..!
ದೇವಾನಂದ್ ಎನ್ನುವ ಕಮಿನಿಸ್ಟ್ ವ್ಯಕ್ತಿಯ ಮಗಳಾದ ಪದ್ಮಲತಾ ಎಂಬ ಕಾಲೇಜು ಹುಡುಗಿಯನ್ನು ಅಪಹರಿಸಿ ನಿರಂತರ ಲೈಂಗಿಕ ಕಿರುಕುಳ ನೀಡಿ 39 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ದುಷ್ಕರ್ಮಿಗಳು ಆಕೆಯನ್ನು ಲೈಂಗಿಕವಾಗಿ ನಿರಂತರವಾಗಿ ಬಳಸಿಕೊಂಡು ನಂತರ ಕೊಲೆ ಮಾಡಿ ನದಿಗೆ ಎಸೆದಿದ್ದರು.
ಯಾಕೆ ದೇವಾನಂದ್ ಮಗಳ ಅಪರಣ..?!
ಕಮಿನಿಸ್ಟ್ ವ್ಯಕ್ತಿಯಾಗಿದ್ದ ದೇವಾನಂದ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಈತನ ಸ್ಪರ್ಧೆ ಕೆಲವರಿಗೆ ಇಷ್ಟವಾಗಿರಲಿಲ್ಲ ಅವರು ಈತನಿಗೆ ದಮ್ಕಿ ಕೂಡ ನೀಡಿದ್ದರು. ಅದಕ್ಕೆ ಸೊಪ್ಪು ಹಾಕದ ದೇವಾನಂದ್ ಚುನಾವಣೆಗೆ ಸ್ಪರ್ಧಿಸಿದರು. ದೇವಾನಂದ್ ಮೇಲೆ ಸೇಡಿಗಾಗಿ ಆತನ ಮಗಳು ಪದ್ಮಲತಾನನ್ನು ಅಪಹರಿಸಿ ಚುನಾವಣೆಯಿಂದ ಹಿಂದೆ ಸರಿವಂತೆ ಬೆದರಿಕೆ ಹಾಕಿದರು .
ಆದರೆ ದೇವಾನಂದ್ ಇದಕ್ಕೆ ಹೆದರಲಿಲ್ಲ ನಂತರ ಆತನ ಮಗಳಿಗೆ ಲೈಂಗಿಕ ಕಿರುಕುಳ ನೀಡಿ ಕೊಂದುಬಿಟ್ಟರು. ಎನ್ನುವ ಪ್ರಬಲ ಆರೋಪ ಹಾಗೂ ಪ್ರಕರಣ ಅಂದು ತೀವ್ರ ಸಂಚಲನ ಉಂಟು ಮಾಡಿತ್ತು. ಆ ಪ್ರಕರಣದ ಆರೋಪಿಗಳು ಪತ್ತೆ ಆಗಲಿಲ್ಲ. ಈಗ ಮತ್ತೆ ಸೌಜನ್ಯ ಪ್ರಕರಣ ನಡೆದಿದೆ 11 ವರ್ಷಗಳ ಹಿಂದೆ ನಡೆದ ಸೌಜನ್ಯ ಪ್ರಕರಣದ ನಿಜವಾದ ಆರೋಪಿಗಳು ಇನ್ನೂ ಕೂಡ ಪತ್ತೆಯಾಗಲಿಲ್ಲ. ನಿಗೂಢ ಸಾವುಗಳ ಹಿಂದಿರುವ ಶಕ್ತಿ ಯಾವುದು..?! ಎನ್ನುವ ಚರ್ಚೆಗಳು ಎಲ್ಲೆಡೆ ಶುರುವಾಗಿದೆ… ಇದಕ್ಕೊಂದು ಅಂತ್ಯ ಕಾಣಬೇಕಾಗಿದೆ.. ಮುಗ್ಧ ಜೀವಗಳಿಗೆ ಬೆಲೆ ಇಲ್ಲವೇ..?!
ರಘುರಾಜ್ ಹೆಚ್.ಕೆ..9449553305…