
ಶಿವಮೊಗ್ಗ, : ಶಾಲಾ ವಿದ್ಯಾರ್ಥಿನಿ/ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಸೆಕ್ರೆಡ್‍ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಫ್ರಾನ್ಸಿಸ್ ಫರ್ನಾಂಡೀಸ್ ಇವರ ಮೇಲೆ ಪೋಕ್ಸೋ ಪ್ರಕರಣವು ದಾಖಲಾಗಿದ್ದು, ಆರೋಪಿಯನ್ನು ಕೋಟೆ ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಆರೋಪಿಯು ತನಗೆ ಜಾಮೀನು ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ಈ ಅರ್ಜಿಯನ್ನು ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ & ವಿಶೇಷ ಸತ್ರ ನ್ಯಾಯಾಲಯ, (ಎಫ್ ಟಿಎಸ್ಸಿ-1) ಶಿವಮೊಗ್ಗ ಇಲ್ಲಿ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.
ಸದರಿ ಪ್ರಕರಣದ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಶ್ರೀಮತಿ ಮಮತಾ ಬಿ.ಎಸ್.ಸರ್ಕಾರಿ ಅಭಿಯೋಜಕರು, ಶಿವಮೊಗ್ಗ ರವರು ವಾದ ಮಂಡಿಸಿದ್ದು, 1ನೇ ಜಿಲ್ಲಾ & ವಿಶೇಷ ಪತ್ರ ನ್ಯಾಯಾಲಯ(ಎಫ್‍ಟಿಎಸ್‍ಸಿ )ದ ನ್ಯಾಯಾಧೀಶರಾದ ಶ್ರೀಮತಿ ಲತಾ ರವರು ಆರೋಪಿತನಾದ ಫ್ರಾನ್ಸಿಸ್ ಫರ್ನಾಂಡೀಸ್ ಇವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಮಾಡಿರುತ್ತಾರೆ.
ಈಗಾಗಲೇ ಆರೋಪಿ ಫ್ರಾನ್ಸಿಸ್ ಫರ್ನಾಂಡಿಸ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಹಾಗೂ ಜಾತಿನಿಂದನೆ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.ಇದರ ಜೊತೆಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದ ಹಲವು ಅಂಶಗಳನ್ನು ಇಟ್ಟುಕೊಂಡು 376 ಬಲಾತ್ ಸಂಭೋಗಕ್ಕಾಗಿ ದಂಡನೆ ಸೆಕ್ಷನ್ ಕೂಡ ದಾಖಲಾಗಿದೆ.ಹಾಗಾಗಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ…
ರಘುರಾಜ್ ಹೆಚ್.ಕೆ…9449553305….