
ಶಿವಮೊಗ್ಗ : ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಎಫ್ ಐ ಆರ್ ವಿನೋಬಾ ನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇಂದು ಈ ಸಂಬಂದ ಸೂಲಿಬೆಲೆ ಯವರಿಗೆ ನೋಟೀಸ್ ಜಾರಿ ಮಾಡಿ ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಶಾಸಕ ಎಸ್ ಎನ್ ಚನ್ನಬಸಪ್ಪ ಜೊತೆಗೆ ವಿನೋಬಾ ನಗರ ಪೋಲೀಸ್ ಠಾಣೆಗೆ ಆಗಮಿಸಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು.

ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ನನ್ನ ವಿರುದ್ಧ ದಾಖಲಾದ ಸಣ್ಣ ದೂರಿಗೆ ಎಫ್ ಐ ಆರ್ ದಾಖಲಿಸಿ ನನ್ನ ಸ್ಟೇಟ್ ಮೆಂಟ್ ತೆಗೆದುಕೊಳ್ಳಲು ಠಾಣೆಗೆ ಕರೆಸಿಕೊಳ್ಳಲಾಗಿತ್ತು.

ಪೋಲೀಸರು ಬಹಳ ಪ್ರೀತಿಯಿಂದ ನನ್ನ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ನನ್ನ ಪೋಲೀಸ್ ಠಾಣೆ ಮೆಟ್ಟಿಲು ಏರುವಂತೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು ಆದರೆ ಅದು ಈ ರೀತಿ ಎಂದು ಕೊಂಡಿರಲಿಲ್ಲ.
ಕಾಂಗ್ರೆಸ್ ಸರ್ಕಾರ ಸಜ್ಜನರನ್ನು ಎದುರಿಸಲಾಗದೆ ಪೋಲೀಸರನ್ನ ಬಳಸಿಕೊಂಡು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನಾವು ಇದ್ಯಾವುದಕ್ಕೂ ಹೆದರುವುದಿಲ್ಲ ಕಾಂಗ್ರೆಸ್ ಒಂದು ಪುಕ್ಕಲು ಸರ್ಕಾರ.
ಸೌಗಂಧಿಕರವರು ಫೇಸ್ ಬುಕ್ ನಲ್ಲಿ ಮೋದಿಯವರನ್ನು ಮೋರಿ ಎಂದು ಕರೆದಿದ್ದರು ಅದಕ್ಕೆ ಪ್ರತ್ಯುತ್ತರವಾಗಿ ನಮ್ಮ ಸೋಷಿಯಲ್ ಮೀಡಿಯಾದ ಹುಡುಗರು ನಿನಗ್ಯಾಕೆ ಉರಿ ಎಂದು ಸಂದೇಶ ಹಾಕಿದ್ದರು.
ಮೋದಿಯವರಂತ ಮಹಾನ್ ನಾಯಕರ ಬಗ್ಗೆ ಕೀಳಾದ ಹೇಳಿಕೆ ನೀಡುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾದವರು ಎಚ್ಚೆತ್ತುಕೊಳ್ಳ ಬೇಕು ಇಲ್ಲವಾದಲ್ಲಿ ಜನರೇ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ವರದಿ : ವಿನಯ್ ಕುಮಾರ್ ಹೆಚ್.ಎಮ್