

ಶಿವಮೊಗ್ಗ : ನಾಳೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ವಿಮಾನಗಳು ಹಾರಾಡಲಿದೆ.
ವಿಮಾನ ಹಾರಾಟ ಆರಂಭೋತ್ಸವಕ್ಕೆ ಏರ್ ಪೋರ್ಟ್ ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಟರ್ಮಿನಲ್ ಹಾಗು ಪ್ರವೇಶ ದ್ವಾರ, ಭದ್ರತಾ ತಪಾಸಣಾ ವಿಭಾಗ, ಟಿಕೆಟ್ ಕೌಂಟರ್, ಪ್ರಯಾಣಿಕರ ತಂಗುದಾಣ ಎಲ್ಲವೂ ಸಿಂಗಾರಗೊಂಡಿದೆ.


ಟರ್ಮಿನಲ್ ನಿಂದ ವಿಮಾನ ಬಾಗಿಲ ಬಳಿ ಹೊತ್ತೊಯ್ಯಲು ಬಂದಿದೆ ಇಂಡಿಗೋ ಬಸ್
ಸಂಪೂರ್ಣ ಹವಾ ನಿಯಂತ್ರಿತ ಇಂಡಿಗೋ ಕಂಪನಿಯ ಬಸ್ ಗೆ ನಿಲ್ದಾಣ ಪ್ರವೇಶ ಮಾಡಲು ಸಾಕಷ್ಟು ಭದ್ರತಾ ಪರಿಶೀಲನೆ ನಡೆಯಿತು. ಬಸ್ ನ ಬುಡವನ್ನೆಲ್ಲಾ ಜಾಲಾಡಿದ ಭದ್ರತಾ ಸಿಬ್ಬಂದಿ ಬಸ್ ಒಳಗೆ ಇಂಚಿಂಚೂ ತಪಾಸಣೆ ನಡೆಸಿದರು ಜೊತೆಗೆ ಬಸ್ ನ ಚಾಲಕ ಹಾಗು ನಿರ್ವಾಹಕರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಯಿತು.






ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಪ್ರವೇಶ ಮಾಡಲು ಯತ್ನಿಸಿದರೆ ಆಗುತ್ತೆ ಟೈರ್ ಪಂಚರ್.
ಏರ್ ಪೋರ್ಟ್ ಗೆ ತಲುಪಲು ನಗರ ಸಾರಿಗೆ ವ್ಯವಸ್ಥೆ.



ಶಿವಮೊಗ್ಗ ಬಸ್ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 7.30ಕ್ಕೆ ಆರಂಭವಾಗಿ ಸಂಜೆ 6.30ರ ವರೆಗೆ ಸಾರ್ವಜನಿಕ ಸೇವೆಗೆ ಸಿದ್ದವಾಗಿದೆ.
ವರದಿ – ವಿನಯ್ ಕುಮಾರ್ ಹೆಚ್.ಎಮ್