Wednesday, April 30, 2025
Google search engine
Homeರಾಜ್ಯಒಟ್ಟಾಗಿ ಹಬ್ಬ ಮಾಡೋಣ ಅಂದ್ರು ಶಾಸಕರು... ಚಂದ್ರ ನೋಡಿ ಹೇಳ್ತೀವಿ ಅಂದ್ರು ಮುಸಲ್ಮಾನರು... ತೀರ್ಮಾನ ಮಾಡ್ಕೊಂಡು...

ಒಟ್ಟಾಗಿ ಹಬ್ಬ ಮಾಡೋಣ ಅಂದ್ರು ಶಾಸಕರು… ಚಂದ್ರ ನೋಡಿ ಹೇಳ್ತೀವಿ ಅಂದ್ರು ಮುಸಲ್ಮಾನರು… ತೀರ್ಮಾನ ಮಾಡ್ಕೊಂಡು ಬನ್ನಿ ಅಂತು ಜಿಲ್ಲಾಡಳಿತ.

ಶಿವಮೊಗ್ಗ : ಗಣಪತಿ ಹಾಗು ಈದ್ ಮಿಲಾದ್ ಹಬ್ಬಗಳ ಹಿನ್ನಲೆ ಇಂದು ಜಿಲ್ಲಾಡಳಿತ ಎರಡೂ ಸಮುದಾಯದ ಮುಖಂಡರ ಶಾಂತಿ ಸಭೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆಸಲಾಯಿತು.

ಶಾಂತಿ ಸಭೆಯಲ್ಲಿ ಎರಡೂ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಸಭೆಯ ಆರಂಭದಲ್ಲಿ ಸಮುದಾಯದ ಮುಖಂಡರುಗಳು ಎರಡು ಧರ್ಮದ ಹಬ್ಬಗಳು ಒಟ್ಟಾಗಿ ಬಂದಿರುವ ಕಾರಣ ಒಂದಷ್ಟು ಸಲಹೆ ಸೂಚನೆಗಳನ್ನು ಜಿಲ್ಲಾಡಳಿತಕ್ಕೆ ನೀಡುತ್ತಾ ಬಂದರು.

ಹಬ್ಬ ಒಟ್ಟಾಗಿ ಆಚರಿಸೋಣ ಬನ್ನಿ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎನ್ ಚನ್ನಬಸಪ್ಪ ರವರು ನಗರದಲ್ಲಿ ನಡೆದಿರುವ ಗಲಾಟೆಗಳಿಗೆ ಯಾವುದೇ ಧರ್ಮದ ಹಬ್ಬಗಳು ಉತ್ಸವಗಳು ಕಾರಣವಲ್ಲ ಎಂಬುದು ಈಗಾಗಲೇ ನಮಗೆ ತಡವಾಗಿ ಗೊತ್ತಾಗಿದೆ.

ನಮ್ಮ ಶಿವಮೊಗ್ಗವನ್ನು ಹೊರಗಿನ ಜನ ಬೇರೆಯದೇ ದೃಷ್ಟಿಯಿಂದ ನೋಡುತ್ತಾರೆ. ನಮಗೆ ಅವರು ನೋಡುವ ದೃಷ್ಟಿ ಬದಲಾಯಿಸುವ ಅವಕಾಶ ದೇವರು ನಮಗೆ ಕೊಟ್ಟಿದ್ದಾನೆ. ಈ ಬಾರಿ ವಿಶೇಷವಾಗಿ ಗಣಪತಿ ಹಾಗು ಈದ್ ಮಿಲಾದ್ ಹಬ್ಬವು ಒಟ್ಟಾಗಿ ಬಂದಿದೆ. ನಾವೆಲ್ಲರೂ ಚರ್ಚಿಸಿ ಶಾಂತಿಯುತವಾಗಿ ಎರಡೂ ಹಬ್ಬವನ್ನು ಆಚರಿಸೋಣ. ನಮ್ಮ ಹಬ್ಬ ಉತ್ಸವಕ್ಕೆ ಭದ್ರತೆ ಒದಗಿಸಲು ಸರ್ಕಾರ ಪೋಲೀಸ್ ಇಲಾಖೆ ಸಾಕಷ್ಟು ಸನ್ನದ್ಧವಾಗಿದೆ ನಾವೆಲ್ಲರೂ ಒಟ್ಟಾಗಿ ಹಬ್ಬ ಮಾಡಿ ಇತಿಹಾಸ ನಿರ್ಮಿಸೋಣ ಎಂದರು.

ಚಂದ್ರ ನೋಡಿ ಹೇಳ್ತೀವಿ…

ಶಾಸಕರ ಮಾತಿಗೆ ಮುಸಲ್ಮಾನ ಸಮಾಜದ ಮುಖಂಡರು ನಮ್ಮ ಇಸ್ಲಾಂ ಕ್ಯಾಲೆಂಡರ್ ಪ್ರಕಾರ ನಮಗೆ ಚಂದ್ರ ದರ್ಶನವಾದ ದಿನದಿಂದ ನಾವು ಈದ್ ಮಿಲಾದ್ ಮೆರವಣಿಗೆ ದಿನ ತೀರ್ಮಾನ ಮಾಡುತ್ತೇವೆ. ಆದ್ದರಿಂದ ನಾವು ಚಂದ್ರ ದರ್ಶನ ನಂತರ ನಮ್ಮ ತೀರ್ಮಾನ ತಿಳಿಸುತ್ತೇವೆ. ಆಗ ಎಲ್ಲರೂ ಒಟ್ಟಾಗಿ ಕೂತು ಚರ್ಚಿಸಿ ಹಬ್ಬಗಳ ಆಚರಣೆ ಬಗ್ಗೆ ಮಾತಡೋಣ ಎಂದರು.

ದಿನ ನಿಗದಿ ಮಾಡಿ ನಮ್ಮ ಹತ್ತಿರ ಬನ್ನಿ.

ಎರಡೂ ಸಮಾಜದ ಮುಖಂಡರ ಮಾತನ್ನು ಆಲಿಸಿದ ಎಸ್.ಪಿ ಮಿಥುನ್ ಕುಮಾರ್ ರವರು ಗಣಪತಿ ಹಾಗು ಈದ್ ಮಿಲಾದ್ ಹಬ್ಬದ ಸಂಬಂಧ ನಾನು ಜಿಲ್ಲೆಯ ಬೇರೆ ಬೇರೆ ಕಡೆ ಹಲವು ಶಾಂತಿ ಸಭೆ ನಡೆಸಿದ್ದೇನೆ‌. ಎಲ್ಲರಿಗೂ ನಾನು ಹೇಳುವುದೇನೆಂದರೆ ನಮಗೆ ಒಂದು ಒಳ್ಳೆಯ ಅವಕಾಸ ಸಿಕ್ಕಿದೆ ಎರಡು ಹಬ್ಬಗಳನ್ನು ಶಾಂತಿ ಸೌರ್ಹಾದತೆಯಿಂದ ಆಚರಿಸೋಣ.

ನೀವು ಶಾಂತಿಯಿಂದ ಹಬ್ಬವನ್ನು ಆಚರಿಸುವ ಅವಕಾಶ ಕಲ್ಪಿಸಿದ್ದಲ್ಲಿ ನಮ್ಮ ಕುಟುಂಬದವರು ಸಹ ನಿಮ್ಮ ನಡುವೆ ಬಂದು ದೇವರ ದರ್ಶನ ಮಾಡುತ್ತಾರೆ. ಹಬ್ಬವನ್ನು ಒಟ್ಟಾಗಿ ಆಚರಣೆ ಮಾಡುವುದಾದರೆ ಪೋಲೀಸ್ ಇಲಾಖೆ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಹಬ್ಬದ ಆಚರಣೆ ಬಗ್ಗೆ ನೀವು ತೀರ್ಮಾನ ಮಾಡಿಕೊಂಡು ನಮ್ಮ ಬಳಿ ಬನ್ನಿ ಸಾರ್ವಜನಿಕ ಹಿತದೃಷ್ಟಿಯಿಂದ ನಾವು ಎಲ್ಲಾ ರೀತಿಯ ಹಂತಕ್ಕೂ ಬರಲು ಸಿದ್ದರಿದ್ದೇವೆ. ಅಶಾಂತಿಗೆ ಕಾರಣರಾದವರು ಯಾವುದೇ ಧರ್ಮಕ್ಕೆ ಸೇರಿದ್ದರು ಅವರು ನಮ್ಮ ದೃಷ್ಟಿಯಿಂದ ಕ್ರಮಿನಲ್ ಅಂತಹವರನ್ನು ಮಟ್ಟ ಹಾಕುವುದರಲ್ಲಿ ನಾವು ಶತಸಿದ್ಧ ಎಂದರು.

ಈ ಬಾರಿ ನೋ ಡಿಜೆ…. ಫ್ಲೆಕ್ಸ್ ಗೆ ಪರ್ಮಿಷನ್ ಕಡ್ಡಾಯ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ‌. ಆರ್.ಸೆಲ್ವಮಣಿಯವರು ಜಿಲ್ಲೆಯ ಯಾವುದೇ ಭಾಗದಲ್ಲಿ ಎರಡೂ ಹಬ್ಬಗಳ ಉತ್ಸವಕ್ಕೆ ಡಿಜೆ ಅನುಮತಿ ನೀಡುವುದಿಲ್ಲ

ಇದು ನನ್ನ ತೀರ್ಮಾನವಲ್ಲ ಸುಪ್ರೀಂ ಕೋರ್ಟ್ ತೀರ್ಮಾನ ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಎರಡೂ ಹಬ್ಬಗಳ ಉತ್ಸವಕ್ಕೆ ಡಿಜೆ ಅನುಮತಿ ಕೊಡುವುದಿಲ್ಲ.

ಫ್ಕೆಕ್ಸ್ ಬ್ಯಾರ್ ಬಂಟಿಂಗ್ಸ್ ಗಳಿಗೆ ಅನುಮತಿ ಕಡ್ಡಾಯ ‌ ಅನುಮತಿ ಇಲ್ಲದ ಫ್ಲೆಕ್ಸ್ ಗಳನ್ನು ಮುಲಾಜಿಲ್ಲದೆ ತೆಗೆದು ಹಾಕಲಾಗುವುದು ಎಂದು ತಿಳಿಸಿದರು.

ವರದಿ – ವಿನಯ್ ಕುಮಾರ್ ಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...