
ದೇಶವನ್ನು ಉಳಿಸಲಿಕ್ಕೋಸ್ಕರ ಜೆಡಿಎಸ್ ಬಿಜೆಪಿ ಒಂದಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆ ಒಂದೇ ಒಂದು ಸ್ಥಾನ ಸಿಗಬಾರದೆಂದು ತೀರ್ಮಾನ ಮಾಡಿ ಕಾಂಗ್ರೆಸ್ ವೀರೋಧಿ ಮತಗಳೆಲ್ಲಾ ಒಂದಾಗಿದೆ. ಹಾಗೆ ಜೆಡಿಎಸ್ ಬಿಜೆಪಿ ಒಂದಾಗಿದೆ.
ರಾಜ್ಯದಲ್ಲಿ 28ಸೀಟು ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಮಾಜಿ ಶಾಸಕ ಸುಕುಮಾರ ಶೆಟ್ಟಿ ಪಕ್ಷ ಬಿಟ್ಟ ಬಗ್ಗೆ
ಸೀಟು ಕೊಡಲಿಲ್ಲ ಅಂತ ಪಕ್ಷ ಬಿಟ್ಟು ಹೋದರು, ಪಕ್ಷ ಬಿಟ್ಟು ಹೋದ ಜಗದೀಶ್ ಶೆಟ್ಟರ್ ಏನಾಗಿದ್ದಾರೆ, ಬಕೆಟ್ ಹಿಡಿದುಕೊಂಡವರಿಗೆ ಪಕ್ಷದಲ್ಲಿ ಅವಕಾಶ ಎಂದು ಹೇಳಿದ್ದಾರೆ ಶೆಟ್ಟರ್ ಸಿಎಮ್ ಆಗಲು ಯಾವ ಬಕೆಟ್ ಹಿಡಿದ್ದಿದ್ದರು. ಸೀಟು ಕೊಟ್ಟರೆ ಪಕ್ಷ ಒಳ್ಳೆದು ಇಲ್ಲದಿದ್ದರೆ ಬಕೆಟ್ ಪಕ್ಷನಾ.
ಬಿಜೆಪಿಯಲ್ಲಿ ಕೋಟ್ಯಂತರ ಕಾರ್ಯಕರ್ತರಿದ್ದಾರೆ ಎಲ್ಲರಿಗೂ ಟಿಕೆಟ್ ಕೊಡಲು ಆಗುತ್ತ.
ರೈತರ ಆತ್ಮಹತ್ಯೆ ವಿಚಾರ.
ರಾಜ್ಯದಲ್ಲಿ ಸರ್ಕಾರವೇ ಇಲ್ಲ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಿ ಎಂದು ಕೇಳಿದ್ದಾರೆ ಆತ್ಮಹತ್ಯೆ ಮಾಡಿಕೊಂಡ ರೈತರು ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕೆಲವರು ಲವ್ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಒಬ್ಬ ಮಂತ್ರಿ ಹೇಳುವುದನ್ನು ನಾನು ಎಂದು ಕೇಳಿರಲಿಲ್ಲ. ರಾಜ್ಯದಲ್ಲಿ 139ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಯಾವ ಮಂತ್ರಿಕೂಡ ರಾಜ್ಯ ಪ್ರವಾಸ ಮಾಡುತ್ತಿಲ್ಲ ಯಾವ ಮಂತ್ರಿಯೂ ಸಹ ರೈತರ ಮನೆಗೆ ತೆರಳಿ ರೈತರ ಕಷ್ಟ ಕೇಳುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಪ್ರತಿ ಶಾಸಕ, ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಗೆ ರೈತರ ಶಾಪ ತಟ್ಟುತ್ತೆ . ರಾಜ್ಯ ಸರ್ಕಾರ ತಕ್ಷಣ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಬೇಕು ಎಂದು ತಿಳಿಸಿದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್