
ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿಯು ದಿನಾಂಕ 18-7-2023, 22-8-2023, 4-9-2023 ಮತ್ತು 13-9-2023 ರ ಸಭೆಯಲ್ಲಿ ನಡೆಸಿದ ಸಭಾ ನಡುವಳಿ ಪ್ರಕಾರ 13-9-2023 ರ ಸಚಿವ ಸಂಪುಟದ ಉಪ ಸಮಿತಿಯ ತೀರ್ಮಾನದಂತೆ ಮಾನ್ಯ ಮುಖ್ಯಮಂತ್ರಿಯವರು ಕರ್ನಾಟಕ ಸರ್ಕಾರ ಇವರ ಅನುಮೋದನೆ ಪಡೆದು ರಾಜ್ಯದ 31ಜಿಲ್ಲೆಗಳಲ್ಲಿ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. ಈ ಎಲ್ಲಾ ತಾಲುಕುಗಳಲ್ಲಿ ಕೈಗೊಂಡ ಬೆಳೆ ಹಾನಿ ಸಮೀಕ್ಷೆ ವರದಿ ಪ್ರಕಾರ ಅಂತಿಮವಾಗಿ 161ತಾಲ್ಲೂಕುಗಳನ್ನು ತೀರ್ವ ಬರ ಪೀಡಿತ ಪ್ರದೇಶ ಹಾಗು 34 ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ,ಹೊಸ ನಗರ, ಸೊರಬ,ತೀರ್ಥಹಳ್ಳಿ,ಶಿಕಾರಿಪುರ ತಾಲ್ಲೂಕುಗಳನ್ನು ತೀರ್ವ ಬರ ಪೀಡಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆ ಬರ ಪೀಡಿತ ಜಿಲ್ಲೆಯನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.