Wednesday, April 30, 2025
Google search engine
Homeಶಿವಮೊಗ್ಗBIG NEWS:ಶಿವಮೊಗ್ಗ ಸ್ಮಾರ್ಟ್ ಸಿಟಿ ಯಡವಟ್ಟು‌ ಹುತಾತ್ಮ ವೀರ ಶಿವಮೂರ್ತಿ ನಾಮಫಲಕ್ಕೆ ಬೆಲೆ ಇಲ್ಲವೇ..?

BIG NEWS:ಶಿವಮೊಗ್ಗ ಸ್ಮಾರ್ಟ್ ಸಿಟಿ ಯಡವಟ್ಟು‌ ಹುತಾತ್ಮ ವೀರ ಶಿವಮೂರ್ತಿ ನಾಮಫಲಕ್ಕೆ ಬೆಲೆ ಇಲ್ಲವೇ..?

ಶಿವಮೊಗ್ಗ: ವೀರ ಶಿವಮೂರ್ತಿ ನಾಮ ಫಲಕ ಮಾಯವಾಗಿದೆ ಸ್ಮಾರ್ಟ್ ಸಿಟಿ ಎಂಡಿ ಮಾಯಣ್ಣ ಗೌಡ ಅವರೇ ವೀರ ಶಿವಮೂರ್ತಿ ಫಲಕ ಎಲ್ಲಿ ಎಂದು ಹಿಂದೂಪರ ಸಂಘಟನೆಗಳು ಕೇಳುತ್ತಿದ್ದಾರೆ.


ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ನೆಹರು ಸ್ಟೇಡಿಯಂ ಸರ್ಕಲ್ ಗೆ ವೀರ ಶಿವಮೂರ್ತಿ ಸರ್ಕಲ್ಎಂದು ಹುತಾತ್ಮ ಶಿವಮೂರ್ತಿ ಹೆಸರಿನಲ್ಲಿ ನಾಮಕರಣ ಮಾಡಲಾಗಿತ್ತು.

ಹುತಾತ್ಮ ಶಿವಮೂರ್ತಿ ಹೆಸರಲ್ಲಿ ಇದ್ದದ್ದು, ಸ್ಮಾರ್ಟ್ ಸಿಟಿ ಕಿತಾಪತಿ ಇಂದ ಕಾಣೆಯಾಗಿದೆ. ಶಿವಮೊಗ್ಗದ ಎಲ್ಲಾ ಸರ್ಕಲ್ ಗಳಲ್ಲೂ ಚಿತ್ರ ವಿಚಿತ್ರವಾದ, ಅರ್ಥವಾಗದ ಕಲಾಕೃತಿಗಳನ್ನು ಮಾಡಿ ಶಿವಮೊಗ್ಗೆಯ ಸೌಂದರ್ಯ ವರ್ಧನೆಗೆ ಮುಂದಾಗಿರುವ ಸ್ಮಾರ್ಟ್ ಸಿಟಿಯವರು, ನಮ್ಮ ಶಿವಮೊಗ್ಗೆಯ ಸೆಂಟಿಮೆಂಟ್, ಹುತಾತ್ಮ ಹಿಂದೂ ಯುವಕ ವೀರ ಶಿವಮೂರ್ತಿ ಹೆಸರಲ್ಲಿ ಇದ್ದ ಸರ್ಕಲ್ ಹೆಸರು ತೆಗೆದು ಇನ್ನು ಅದನ್ನ ಸ್ಥಾಪಿಸದೆ ಇರುವುದು ಶಿವಮೊಗ್ಗ ನಗರದ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

ಎಲ್ಲಾ ಸರ್ಕಲ್ಗಳ ಹೆಸರು ಸುಂದರವಾಗಿ ಹೊಸತನದಲ್ಲಿ ಮೂಡಿಸಿರುವ ಸ್ಮಾರ್ಟ್ ಸಿಟಿ ರವರು ಈ ಒಂದು ಸರ್ಕಲ್ ನಲ್ಲಿ ಮಾತ್ರ ತಾತ್ಸಾರ ಮನೋಭಾವದಿಂದ, ಇದ್ದ ಮಹಾನಗರಪಾಲಿಕೆ ಫಲಕ ತೆರವು ಮಾಡಿ ಹೊಸದಾಗಿ ವೀರ ಶಿವಮೂರ್ತಿ ಹೆಸರಲ್ಲಿ ಮಾತ್ರ ಹಾಕದಿರುವುದು, ಹಿಂದೂ ಕಾರ್ಯಕರ್ತರಲ್ಲಿ ಅನುಮಾನ ಮೂಡಿದೆ..!

ಈ ಸರ್ಕಲ್ ಗೆ ಅಂಟಿಕೊಂಡಂತೆ ಇರುವ ನೆಹರು ಕ್ರೀಡಾಂಗಣದ ಉದ್ದೇಶದಿಂದ ಆಟದ ಕಲಾಕೃತಿಯ ಗೋಡೆಯ ಬಿತ್ತಿ ಚಿತ್ರ ಮಾತ್ರ ಮಾಡಿರುವುದು ಹಾಗೂ ಈ ಸರ್ಕಲ್ ಹೆಸರನ್ನು ಹಾಕದಿರುವುದಾರ ಹಿಂದೆ ಯಾವುದಾದರೂ ಪಟ್ಟ ಭದ್ರ ಹಿತಾಸಕ್ತಿ ಆಟ ವಾಡಿದ್ಯ ಎನ್ನುವುದು ಶಿವಮೊಗ್ಗ ಜನತೆಯ ಸಂಶಯ.

ಹಿಂದೂ ಫೈಯರ್ ಬ್ರಾಂಡ್ ಹಿಂದುಗಳ ಹೆಸರಿನಲ್ಲಿ ಮತ ಪಡೆದು ಗೆದ್ದಿರುವ ಚನ್ನಬಸಪ್ಪ ಚೆನ್ನಿಯವರು, ಕೇಸರಿ ಶಾಲು ಹಾಕೊಂಡು ಅಧಿಕಾರ ಹಿಡಿದರೂ. ಅವರ ಈ ಹಿಂದೆ ಮಾಡಿರುವ ಹೋರಾಟ, ಧರ್ಮಕ್ಕಾಗಿ ಮಡಿದಿರುವ ಹುತಾತ್ಮ ವೀರ ಶಿವಮೂರ್ತಿ ಎಂದು ಜಯ ಘೋಷ ಹಾಕುತ್ತಾ, ಪ್ರತಿ ವರ್ಷ ಹಿಂದೂ ಮಹಾಸಭಾ ಸಂಘಟನೆ ಯವರು ಕೂರಿಸುವ ಸಾರ್ವಜನಿಕ ಗಣಪತಿಯ ಕೊನೆ ದಿನ , ವೀರ ಶಿವಮೂರ್ತಿ ಹೆಸರಲ್ಲಿ ಆರತಿ ಮಾಡಿ ಈ ಸಂಘಟನೆಯ ಒಬ್ಬ ಪದಾಧಿಕಾರಿ ಯಾಗಿ ಈಗ ಶಿವಮೊಗ್ಗ ಮತಕ್ಷೇತ್ರದಲ್ಲಿ MLA ಆಗಿರುವ ಚೆನ್ನಿರವರು , ವೀರ ವೇಷದಿಂದ ಘೋಷಣೆ ಕೂಗುತ್ತ ಇದ್ರು ಈಗ ಎಲ್ಲಿ ಹೋಯಿತು ಎಂಬುದು ಶಿವಮೊಗ್ಗ ಕೇಸರಿ ಪಾಳೆಯದಲ್ಲಿ ಚರ್ಚೆ ಶುರುವಾಗಿದೆ.

ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಮಾಯೆಯೋ ಅಥವಾ ಹಿಂದೂ ವಿರೋಧಿಗಳ ಕಿತಪತಿಯೋ ಅಥವಾ ಕೇಸರಿ ನಾಯಕರ ಹಿಂದುತ್ವದ ಅಭಿಮಾನದ ಕೊರತೆಯೋ ಇಂದು ವೀರ ಶಿವಮೂರ್ತಿ ಯ ಹೆಸರು ಶಿವಮೊಗ್ಗೆಯ ಹೃದಯ ಭಾಗದ ವೃತ್ತದಲ್ಲಿ ಕಣ್ಮರೆಯಾಗಿದೆ. ನೆಹರು ಕ್ರೀಡಾಂಗಣದ ಪಕ್ಕದ ಆಟೋ ರಿಕ್ಷಾ ಸ್ಟ್ಯಾಂಡ್ ನಲ್ಲಿರುವ ಚಾಲಕರ ಹೋರಾಟದ ಪ್ರಯುಕ್ತ ಒಂದು ಕಬ್ಬಿಣದ ಹಳೆಯ ನಾಮಫಲಕ ಉಳಿದಿರುವುದು , ನಿಜವಾದ ಈ ಆಟೋ ಸಂಘದವರ ಪ್ರಾಮಾಣಿಕ ನಿಷ್ಠೆಗೆ ಎಲ್ಲ ಹಿಂದೂ ಬಳಗದವರು ಉಗ್ಗೆ ಅನುತ್ತಿದ್ದಾರೆ. ಶಿವಮೊಗ್ಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಈ ವೀರ ಶಿವಮೂರ್ತಿಯ ನಾಮ ಫಲಕ , ಹಿಂದೂ ಪರ ಎಂದು ಬೊಬ್ಬೆ ಹೊಡೆಯೋ ಬಿಜೆಪಿಯವರೇ ಆಳುತ್ತಿರುವ ಮಹಾನಗರಪಾಲಿಕೆ ಸದಸ್ಯರುಗಳು, ಶಿವಮೊಗ್ಗ ನಗರ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಎಲ್ಲಾ ಕೇಸರಿ ನಾಯಕರೇ ಇದ್ದರೂ, ಇದರ ಬಗ್ಗೆ ಚಕಾರ ಎತ್ತದೇ, ಮುಂದೆ ಇದನ್ನು ಉಳಿಸ್ತರೋ, ಅಲಿಸ್ತರೋ ಕಾದು ನೋಡಬೇಕಿದೆ. ಎಂದು ಹೇಳುತ್ತಾರೆ ಹೆಸರು ಹೇಳಲು ಇಚ್ಛಿಸಿದ ಹಿಂದೂ ಪರ ಸಂಘಟನೆಯ ಮುಖಂಡರುಗಳು.

ಏನಿದು ವೀರ ಶಿವಮೂರ್ತಿಯ ಇತಿಹಾಸ:

ಹಿಂದೆ 1945ರಲ್ಲಿ ಮೊದಲ ಭಾರಿ ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನೆರವೇರುತ್ತಿತ್ತು.

ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ, ಮಸೀದಿ ಮುಂದೆ ಮಂಗಳವಾದ್ಯ ನುಡಿಸುವಂತಿಲ್ಲ ಎಂಬ ಅಲಿಖಿತ ನಿಯಮವಿತ್ತು. ಆದರೆ 1947ರಲ್ಲಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ, ಧರ್ಮಸಿಂಗ್ ಎಂಬುವವರು ತುತ್ತೂರಿ ಊದುತ್ತಾ ಮಸೀದಿ ಮುಂದೆ ಸಾಗಿದರು. ಆಗ ಗಲಾಟೆ ಸಂಭವಿಸಿತ್ತು ಆ ಸಂದರ್ಭದಲ್ಲಿ, ಶಿವಮೂರ್ತಿ ಎಂಬ 24 ವಯಸ್ಸಿನ ಯುವಕನ ಹತ್ಯೆಯಾಯಿತು.

ಹಾಗಾಗಿ ಆತನ ನೆನಪಿಗಾಗಿ ಮುಂದೆ ನೆಹರೂ ಸ್ಟೇಡಿಯಂ ಪಕ್ಕದ ವೃತ್ತಕ್ಕೆ‌ ಹುತಾತ್ಮ ಶಿವಮೂರ್ತಿ ಅವರ ಹೆಸರನ್ನೆ ನೆಹರೂ ಕ್ರೀಡಾಂಗಣದ ಸರ್ಕಲ್ ಗೆ ಇಡಲಾಗಿತ್ತು.

ಈಗ ಗಣಪತಿ ಹಬ್ಬ ಸಮೀಪ ಬರುತ್ತಿದೆ ಈಗಲಾದರೂ ಸ್ಮಾರ್ಟ್ ಸಿಟಿಯವರು ಎಚ್ಚೆತ್ತುಕೊಂಡು ಕೂಡಲೇ ವೀರ ಶಿವಮೂರ್ತಿ ನಾಮಫಲಕವನ್ನು ಸರಿಯಾಗಿ ಅಳವಡಿಸಲಿ ಎನ್ನುವುದು ಹಿಂದುಪರ ಸಂಘಟನೆಗಳ ಆಗ್ರಹ.

ರಘುರಾಜ್ ಹೆಚ್.ಕೆ..9449553305.


.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...