
ಶಿವಮೊಗ್ಗ : ನಗರದ ಎಸ್.ಪಿ.ಎಮ್ ರಸ್ತೆಯ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಮೃತ ಮಹೋತ್ವಸವ ವರ್ಷ ಈ ಬಾರಿಯ ಗಣೇಶ ಚತುರ್ಥಿಗೆ ಆಚರಿಸಲಾಗುತ್ತಿದೆ, ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದ ಸಂಘದ ಕಾರ್ಯದರ್ಶಿ ಹೆಚ್.ಆರ್ ಸುಬ್ರಹ್ಮಣ್ಯ ಶಾಸ್ತ್ರಿ ಕಳೆದ 76 ವರ್ಷದಿಂದ ಶ್ರೀ ವಿದ್ಯಾಗಣಪತಿ ಸೇವಾ ಸಂಘದಿಂದ ನಗರದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ನಿರಂತರವಾಗಿ ಭಾರತೀಯ ಸಂಗೀತ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ, ಗಣೇಶ ಚತುರ್ಥಿಯ ಅಂಗವಾಗಿ ಸೆ.19ರಿಂದ26ರ ವರೆಗೆ ಸಂಘದ ವತಿಯಿಂದ ಎಪ್ಪತ್ತಾರನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರಸ್ತೆಯಲ್ಲಿರುವ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸಭಾ ಭವನದಲ್ಲಿ ಪ್ರತಿ ದಿನ ಸಂಜೆ 5.30 ಘಂಟೆಗೆ ಸರಿಯಾಗಿ ಸಂಗೀತ ಸೇವಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಸಂಗೀತ ಸೇವಾ ಕಾರ್ಯಕ್ರಮದ ವಿವರಗಳು.
ಸೆ.19 ವೇಣು ಮಾಧವರವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ.
ಸೆ.20 ವಿದುಷಿ ದಾತ್ರಿ ಕುಮಾರ್ ಹಾಸನ, ಸಂಗೀತ ಕಾರ್ಯಕ್ರಮ.
ಸೆ.21 ವಿದ್ವಾನ್ ಕಾರ್ತಿಕ್ ಹೊಸಹಳ್ಳಿ, ಸಂಗೀತ ಕಾರ್ಯಕ್ರಮ.
ಸೆ.22 ಚೆನ್ನೈನ ವಿದುಷಿ ವಸುಧಾ ರವಿಯವರ ಕರ್ನಾಟಕ ಶಾಸ್ರ್ತೀಯ ಸಂಗೀತ ಕಾರ್ಯಕ್ರಮ.
ಸೆ.23 ವಿದ್ವಾನ್ ವೈ.ಕಿ.ಶ್ರೀ ಲತಾರವರ ವೀಣಾವಾದನ ಕಾರ್ಯಕ್ರಮ.
ಸೆ.24 ಆಕಾಶವಾಣಿ ಹಾಗು ದೂರ ದರ್ಶನ ಕಲಾವಿದರಾದ ವಿದ್ವಾನ್ ವಿವೇಕ್ ಸದಾಶಿವಂ ರವರ ಸಂಗೀತ ಕಾರ್ಯಕ್ರಮ.
ಸೆ.25 ವಿದುಷಿ ಶ್ರೀಮತಿ ಮೇಧಾ ಮಂಜುನಾಥ್ ರವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ.
ಸಾರ್ವಜನಿಕರು ಎಲ್ಲಾ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.