
ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್ (ಜಿಲ್ಲಾ ಸಹಕಾರ ಕೇಂದ್ರ) ನ ಚುನಾವಣೆ ದಿನಾಂಕ ನಿಗದಿಯಾಗಿದ್ದು ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದ್ದು ಯಾರಾಗುತ್ತಾರೆ ಅಧ್ಯಕ್ಷರು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.
ಅಪೇಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ಮತ್ತೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಚುನಾವಣೆಗೆ ಬರುವ ಮುನ್ನವೇ ಸಾಕಷ್ಟು ಬೆಳವಣಿಗೆ ನಡೆದಿದ್ದು ಹಾಲಿ ಅಧ್ಯಕ್ಷರಾಗಿದ್ದ ಶಿಕಾರಿಪುರದ ಚನ್ನವೀರಪ್ಪ ಅವರನ್ನು ಅವಿಶ್ವಾಸ ಮಂಡನೆ ಮಂಡಿಸುವುದರ ಮೂಲಕ ಕೆಳಗಿಳಿಸಿದ್ದು ಅವರ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಷಡಾಕ್ಷರಿ ಅವರು ಅಧ್ಯಕ್ಷರಾಗಿ ಮುಂದುವರೆದಿದ್ದರೂ ನಂತರದ ಬೆಳವಣಿಗೆಯಲ್ಲಿ ಆರ್ ಎಂ ಮಂಜುನಾಥ್ ಗೌಡರನ್ನು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ತರುವ ದೃಷ್ಟಿಯಿಂದ ಉಳಿದ ನಿರ್ದೇಶಕರುಗಳು ಪೂರ್ವ ನಿಯೋಜಿತ ಪ್ಲಾನ್ ಮಾಡಿಕೊಂಡು ಹಾಲಿ ನಿರ್ದೇಶಕರಾಗಿದ್ದ ದುಗ್ಗಪ್ ಗೌಡ ಅವರನ್ನ ರಾಜೀನಾಮೆ ಕೊಡಿಸಿ ತೆರವಾಗಿದ್ದ ನಿರ್ದೇಶಕರ ಸ್ಥಾನಕ್ಕೆ ಆರ್ ಎಂ ಮಂಜುನಾಥ್ ಗೌಡರು ಮತ್ತೆ ನಿರ್ದೇಶಕರಾಗಿ ಆಯ್ಕೆಯಾಗುವಂತೆ ನೋಡಿಕೊಂಡರು.
ನಿರ್ದೇಶಕರಾಗಿದ್ದ ದುಗ್ಗಪ್ ಗೌಡರು ಅಪೇಕ್ಷ ಬ್ಯಾಂಕ್ ಗೆ ಡಿಸಿಸಿ ಬ್ಯಾಂಕ್ ನ ಪ್ರತಿನಿಧಿಯಾಗಿ ಆಯ್ಕೆಯಾದರು.
ಇದರ ನಡುವೆ ಆಡಳಿತ ಮಂಡಳಿಯ ಅವಧಿಯು ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು ಈ ಬೆಳವಣಿಗೆಯಲ್ಲಿ ಆರ್.ಎಂ ಮಂಜುನಾಥ್ ಗೌಡರು ಅಧ್ಯಕ್ಷರಾದರೇ ಸಹಕಾರಿ ಕ್ಷೇತ್ರಕ್ಕೆ ಬಲಬಂದಂತೆ ಆಗುತ್ತದೆ ಎನ್ನುವುದು ಅವರ ಒಡನಾಡಿಗಳ ಹಾಗೂ ಈಗಾಗಲೇ ಇರುವ ನಿರ್ದೇಶಕರಗಳ ಅಭಿಪ್ರಾಯ.
ಒಟ್ಟಿನಲ್ಲಿ ಸಹಕಾರಿ ಕ್ಷೇತ್ರದ ದಿಗ್ಗಜ ಆರ್ ಎಂ ಮಂಜುನಾಥ್ ಗೌಡರು ಅಧ್ಯಕ್ಷರಾದರೆ ಮತ್ತೆ ಸಹಕಾರಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡುವುದು ಸಹಜ ಎನ್ನುವುದು ಹಲವು ಸಹಕಾರಿ ಕ್ಷೇತ್ರಗಳ ದೂರಿಣರ ಒಮ್ಮತದ ಅಭಿಪ್ರಾಯ..
ರಘುರಾಜ್ ಹೆಚ್. ಕೆ..9449553305.