
ತೀರ್ಥಹಳ್ಳಿ: ತಾಲೂಕಿನ ಹೊನ್ನೆತಾಳು ಸೊಸೈಟಿಯ ನೂತನ ಕೌಂಟರ್ ಉದ್ಘಾಟನೆ ಆಗಿದ್ದು ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ವಿಜಯದೇವ್ ಹಾಗೂ ನಾಗರಾಜ್ ಶೆಟ್ಟರಿಗೆ ಸನ್ಮಾನ ಮಾಡಲಾಯಿತು.
ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಗುರುವಾರ ನಡೆದಿದ್ದು ಇದರ ಅಧ್ಯಕ್ಷತೆಯನ್ನು ಹಸಿರು ಮನೆ ಮಹಾಬಲೇಶ್ ಹೆಚ್ ಆರ್ ವಹಿಸಿದ್ದು ಈ ಸಂದರ್ಭದಲ್ಲಿ ನೂತನ ಕೌಂಟರ್ ಅನ್ನು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ವಿಜಯ್ ದೇವ್ ಹಾಗೂ ನಾಗರಾಜ್ ಶೆಟ್ರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಮಹಾಬಲೇಶ್ ಹಸಿರುಮನೆ ಅವರು 1976 -77 ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದು ಎಲ್ಲರ ಸಹಕಾರದಿಂದ ಮುನ್ನಡೆಯುತ್ತಿದೆ ಸಂಘದ ಅಭಿವೃದ್ಧಿಗಾಗಿ ಎಲ್ಲಾ ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ನಿರ್ದೇಶಕರು ಸಾಕಷ್ಟು ಶ್ರಮಿಸಿದ್ದಾರೆ. ತಾಲೂಕಿನಲ್ಲಿ ಒಂದು ಉತ್ತಮ ಸೊಸೈಟಿಯಾಗಿ ಮುನ್ನುಗುತ್ತಿದೆ ಐದು ಗ್ರಾಮ ಪಂಚಾಯಿತಿಗಳಿಗೆ ಒಂದು ಸೊಸೈಟಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರ ಆಗಿದೆ ಮುಂದೆ ಕೂಡ ಸೊಸೈಟಿಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಸಹಕಾರಿ ರತ್ನ ಪುರಸ್ಕೃತರಾದ ವಿಜಯದೇವ್ ಹಾಗೂ ನಾಗರಾಜ್ ಶೆಟ್ರು ಮಾತನಾಡಿ ಸಂಘದ ಅಭಿವೃದ್ಧಿಗೆ ನಮ್ಮಿಂದ ಎಲ್ಲಾ ರೀತಿಯ ಸಹಕಾರ ಇರುತ್ತದೆ ಸಂಘ ಈ ಮಟ್ಟದ ಅಭಿವೃದ್ಧಿ ಹೊಂದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು .
ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ವಿಜಯದೇವ್ ಅವರು 2.50,000/- ಅಪೇಕ್ಸ್ ಬ್ಯಾಂಕಿಂದ ಸಹಾಯ ಧನ ಕೊಟ್ಟಿದಾರೆ ಹಾಗೂ ಇನ್ನು 1.50,000/- ಕೊಡ್ತೀನಿ ಎಂದು ಮಹಾಸಭೆಯಲ್ಲಿ ತಿಳಿಸಿದ್ದಾರೆ ಎಂದು ಮುಖ್ಯಕಾರ್ಯನಿರ್ವಹಣ ಅಧಿಕಾರಿ ವಿನಾಯಕ ಸಿ ಅವರು ತಿಳಿಸಿದರು.
ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜಿ ವಿನಯ್, ನಿರ್ದೇಶಕರುಗಳಾದ ಎಸ್ ರವೀಶ್, ಸಚಿಂದ್ರ ಹೆಗಡೆ,ಎಂ,ವಿ ರತ್ನಾಕರ್, ಹೆಚ್ಎಸ್ ಧರ್ಮಪ್ಪ, ಕೆ ಎ ಕೃಷ್ಣಮೂರ್ತಿ, ಶ್ರೀಧರ್, ಗಿರೀಶ್ ಹೆಗ್ಡೆ ಹೆಚ್, ಲಕ್ಷ್ಮೀದೇವಿ, ಕೆ ಎಸ್ ಸುಜಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ್ ಸಿ ಸೇರಿದಂತೆ ಸೊಸೈಟಿಯ ಎಲ್ಲಾ ಸಿಬ್ಬಂದಿಗಳು ಸದಸ್ಯರು ಉಪಸ್ಥಿತರಿದ್ದರು.
ರಘುರಾಜ್ ಹೆಚ್.ಕೆ.9449553305.