
ಶಿವಮೊಗ್ಗ : ಡಿಸಿಸಿ ಬ್ಯಾಂಕ್ ನ ಹಾಲಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರಿಂದ ತೆರವಾಗಿದ್ದ ಉಪವಿಭಾಗದ ಮಾರಾಟ ಹಾಗೂ ಸಂಸ್ಕರಣಾ ಸಹಕಾರ ಸಂಸ್ಥೆ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಅ.11ರಂದು ಚುನಾವಣೆ ನಡೆಯಲು ದಿನಾಂಕ ನಿಗದಿ ಮಾಡಲಾಗಿತ್ತು.
ಇದಕ್ಕೆ ಸಂಭಂದಿಸಿದಂತೆ ನಿನ್ನೆಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇತ್ತು ಇಂದು ನಾಮ ಪತ್ರ ವಾಪಸ್ಸು ಪಡೆಯಲು ದಿನಾಂಕ ನಿಗದಿ ಮಾಡಲಾಗಿತ್ತು, ಆರ್ ಎಮ್ ಮಂಜುನಾಥ್ ಗೌಡರು, ದುಗ್ಗಪ್ಪಗೌಡ ಮತ್ತು ವಿಜಯಕುಮಾರ (ದನಿ) ಅರ್ಜಿ ಸಲ್ಲಿಸಿದರು.
ಆರ್ ಎಮ್ ಎಮ್ ಮತ್ತು ದನಿ ಅರ್ಜಿ ವಾಪಸ್ಸು ಪಡೆದಿದ್ದರಿಂದ ದುಗ್ಗಪ್ಪಗೌಡರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಎಸಿ ಸತ್ಯನಾರಾಯಣ ಕರ್ತವ್ಯ ನಿರ್ವಹಿಸಿದ್ದಾರೆ.
ರಘುರಾಜ್ ಹೆಚ್. ಕೆ .9449553305.