
ತೀರ್ಥಹಳ್ಳಿ :ಉಪಖಜಾನೆಯ ಖಜಾನಾಧಿಕಾರಿಗಳಾಗಿ ಸೌಹಾರ್ಧತಾ ವ್ಯಕ್ತಿತ್ವದಿಂದ ನೌಕರ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಗಿರಿರಾಜ್ ಭದ್ರಾವತಿಗೆ ವರ್ಗಾವಣೆಗೊಂಡಿದ್ದರಿಂದ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ತೀರ್ಥಹಳ್ಳಿ ವತಿಯಿಂದ ಆತ್ಮೀಯವಾಗಿ ಗೌರವಿಸಿ ಶುಭ ಹಾರೈಸಲಾಯಿತು.
ಸಂಘದ ಅಧ್ಯಕ್ಷ ಟಿ ವಿ ಸತೀಶ, ಕಾರ್ಯದರ್ಶಿ ರಾಮು ಬಿ,ಖಜಾಂಚಿ ಪವಿತ್ರ ಹೆಚ್ ಸಿ, ಉಪಾಧ್ಯಕ್ಷರುಗಳಾದ ರಾಘವೇಂದ್ರ ಎಸ್, ಸುಷ್ಮ ಎಸ್ ಪಿ, ಸತೀಶ ಟಿ ಆರ್, ಜಂಟಿ ಕಾರ್ಯದರ್ಶಿ ಸುಧೀರ್, ಸಂಘಟನಾ ಕಾರ್ಯದರ್ಶಿ ನಾಗೇಶ್, ನಿರ್ದೇಶಕ ವೆಂಕಟೇಶ್,ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಪ್ರೀತ, ಖಜಾನೆ ಇಲಾಖೆಯ ನಾಗೇಶ್,ಮಹಾನಂದ, ಸನಾವುಲ್ಲ ನಿವೃತ್ತ ನೌಕರರಾದ ವಿಜಯ್ ಕುಮಾರ್ ಮತ್ತಿತರರು ಇದ್ದರು.