
ತೀರ್ಥಹಳ್ಳಿ: ತಾಲೂಕಿನ ಅರಳಿಸುರಳಿ ಯಲ್ಲಿ ಬೆಂಕಿ ದುರಂತ ನಡೆದಿದ್ದು ಮನೆಯ ಯಜಮಾನ ಆತನ ಹೆಂಡತಿ ಹಾಗೂ ದೊಡ್ಡ ಮಗ ಹೀಗೆ ಇಡೀ ಅರ್ಚಕರ ಕುಟುಂಬ ಮೂವರು ಸಜೀವ ದಹನ ಆಗಿದ್ದರು.
ಆದರೆ ಈ ದುರಂತದಲ್ಲಿ ಬದಕಿ ಉಳಿದಿದ್ದ ಎರಡನೇ ಮಗ ಭರತ್ 28 ವರ್ಷದ ಯುವಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬದುಕಿದ್ದ ಒಂದೇ ಒಂದು ಸಾಕ್ಷಿಯು ಈಗ ಕೊನೆ ಉಸಿರು ಎಳೆದಿದ್ದು ಪೊಲೀಸರ ಸಮಗ್ರ ತನಿಖೆಯಿಂದ ಇದು ಅಗ್ನಿ ದುರಂತನಾ ಅಥವಾ ಸ್ವಯಂಕೃತ ಆತ್ಮಹತ್ಯೆನ ನಾ ಅಥವಾ ಯಾರಾದರೂ ಕೊಲೆ ಮಾಡಿ ಹಾಕಿರುವುದಾ ಎನ್ನುವ ಗಂಭೀರ ಸ್ವರೂಪದ ಪ್ರಕರಣ ಇದಾಗಿದ್ದು ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾಗಿದೆ.