
ಶಿವಮೊಗ್ಗ: ಅಪೆಕ್ಸ್ ಬ್ಯಾಂಕ್ ನ ಮಾಜಿ ಅಧ್ಯಕ್ಷರು ಡಿಸಿಸಿ ಬ್ಯಾಂಕಿನ ಹಾಲಿ ಅಧ್ಯಕ್ಷರಾದ ಡಾಕ್ಟರ್ ಆರ್ ಎಮ್ ಮಂಜುನಾಥ್ ಗೌಡರ ಶಿವಮೊಗ್ಗದ ಶರಾವತಿ ನಗರದ ಮನೆ, ತೀರ್ಥಹಳ್ಳಿಯ ಬೆಟಮಕ್ಕಿಯ ಮನೆ, ಕರಕುಚ್ಚಿಯ ನಿವಾಸ, ಡಿಸಿಸಿ ಬ್ಯಾಂಕ್ ನ ಕಚೇರಿ ಸೇರಿದಂತೆ ಬೆಂಗಳೂರಿನ ನಿವಾಸ ಹಾಗೂ ಕಚೇರಿಗಳ ಕಳೆದ ವಾರವಷ್ಟೇ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮೇಲೆ ತವರೂರು ತೀರ್ಥಹಳ್ಳಿಯಲ್ಲಿ ಅವರಿಗೆ ಬೃಹತ್ ಸನ್ಮಾನ ಒಂದನ್ನು ಇಟ್ಟುಕೊಳ್ಳಲಾಗಿತ್ತು ಅದರ ಹಿಂದಿನ ದಿನ ಅಂದರೆ ಐದನೇ ತಾರೀಕು ಈ ದಾಳಿ ನಡೆದಿತ್ತು ಇದನ್ನು ರಾಜಕೀಯ ಪ್ರೇರಿತ ದಾಳಿ ಎಂದು ಮಾಜಿ ಸಚಿವ ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.
ಆರ್ ಎಂಮ್ ಮಂಜುನಾಥ್ ಗೌಡರಿಗೆ ವಿಚಾರಣೆಗೆ ಬರುವಂತೆ ಇಡಿ ನೋಟಿಸ್ ನೀಡಿತ್ತು.
ಆದರೆ ಆರ್‌ಎಂ ಮಂಜುನಾಥ್ ಗೌಡರು ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಇಡಿ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಮನವಿ ಸಲ್ಲಿಸಿದರು.
ಸದ್ಯಕ್ಕೆ ಹೈಕೋರ್ಟ್ ನಲ್ಲಿ ಇಡಿ ವಿಚಾರಣೆಗೆ ತಡೆಯಾಜ್ಞೆ ಸಿಕ್ಕಿದ್ದು ಗೌಡರು ಕೊಂಚ ರೀಲೀಫ್ ಆಗಿದ್ದಾರೆ ಎನ್ನಬಹುದು.
ರಘುರಾಜ್ ಹೆಚ್.ಕೆ.9449553305.