
ಶಿವಮೊಗ್ಗ: ಮುದ್ದಣ್ಣನ ಕೆರೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ಅವರನ್ನು ಶಿವಮೊಗ್ಗ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಆದರೆ ಸರ್ಕಾರಕ್ಕೆ ವಂಚನೆಯಾಗಿರುವ ಸುಮಾರು 72 ಲಕ್ಷಗಳನ್ನು ಬರಿಸುವುದು ಯಾರು ಎನ್ನುವ ಚರ್ಚೆ ಶುರುವಾಗಿದೆ ಆದರೆ ಷಡಾಕ್ಷರಿ ಅವರು ಇದು ಮುಗಿದ ಅಧ್ಯಾಯ ನನ್ನದು ಇದರಲ್ಲಿ ಪಾತ್ರ ಏನು ಇಲ್ಲ ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎನ್ನುತ್ತಾರೆ ಹಾಗಾದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇದೇ ತಿಂಗಳ 16ನೇ ತಾರೀಕು ಸಭೆ ನಿಗದಿಪಡಿಸಿರುವುದು ಏಕೆ ಎನ್ನುವುದು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಏನು ಚರ್ಚೆ ನಡೆಯುತ್ತದೆ ಏನು ನಿರ್ಧಾರವಾಗುತ್ತದೆ ಮತ್ತೆ ಯಾರು ಈ ಪ್ರಕರಣದಲ್ಲಿ ಸಿಲುಕಿ ಕೊಳ್ಳುತ್ತಾರೆ ಎನ್ನುವ ಕುತೂಹಲ ಎಡೆಮಾಡಿದೆ ಒಟ್ಟಿನಲ್ಲಿ ಮುದ್ದಣ್ಣನ ಕೆರೆ ಪ್ರಕರಣದಲ್ಲಿ ಒಂದಷ್ಟು ಜನ ಮುಳುಗುವುದಂತು ಖಚಿತ …
ರಘುರಾಜ್ ಹೆಚ್.ಕೆ.9449553305.