
ಶಿವಮೊಗ್ಗ: ಸಕ್ರೆಬೈಲ್ ಆನೆ ಬಿಡಾರದ ಗರ್ಭಿಣಿ ಆನೆ ಭಾನುಮತಿಯ ಬಾಲವನ್ನು ಕಟ್ ಮಾಡಿದ ಪ್ರಕರಣ ತೀವ್ರ ಸಂಚಲನ ಮೂಡಿಸಿತ್ತು ಈ ಪ್ರಕರಣದ ತನಿಖೆ ನಡೆಸಿದ ಅರಣ್ಯ ಇಲಾಖೆ, ಕೊನೆಗೆ ಕಾವಾಡಿಗಳಾದ ಸುದೀಪ್ ಮತ್ತು ಮಹಮದ್ ಎನ್ನುವ ಇಬ್ಬರನ್ನು ಅಮಾನತ್ತು ಗೊಳಿಸಿದೆ.
ತುಂಬು ಗರ್ಭಿಣಿಯಾಗಿದ್ದ ಭಾನುಮತಿ ಆನೆಯನ್ನು ನೋಡಿಕೊಂಡಿದ್ದ ಕಾವಾಡಿಗಳಾದ ಸುದೀಪ್ ಮತ್ತು ಮೊಹಮ್ಮದವರನ್ನು ಅಮಾನತ್ತು ಗೊಳಿಸಲಾಗಿದೆ.
ಸಂಶಯ ಮೂಡುವುದು ಇಲ್ಲೇ ಆನೆಯ ಬಾಲ ಕಟ್ ಮಾಡಿದ್ದು ಯಾರು ಯಾವ ಉದ್ದೇಶಕ್ಕೆ ಅದರಲ್ಲಿ ಇವರ ಪಾತ್ರವೇನು? ಅರಣ್ಯ ಇಲಾಖೆಯ ನಿರ್ಲಕ್ಷವೇನು ಎನ್ನುವುದರ ಸಂಪೂರ್ಣ ತನಿಖೆ ಇಲ್ಲಿ ನಡೆದಿಲ್ಲ ಮೇಲ್ನೋಟಕ್ಕೆ ಕಾವಾಡಿಗಳನ್ನು ಅಮಾನತ್ತುಗೊಳಿಸಿ ಅರಣ್ಯ ಇಲಾಖೆ ಕೈತೊಳೆದುಕೊಂಡು ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡಿದೆ ಎನ್ನುವ ಸಂಶಯ ಕಾಡುತ್ತಿದೆ ಇದು ಮತ್ತೊಮ್ಮೆ ತನಿಖೆ ಆಗಬೇಕು ಯಾರು ನಿಜವಾದ ಆರೋಪಿಗಳಿದ್ದಾರೆ ಅವರ ವಿರುದ್ಧ ಪ್ರಕರಣ ದಾಖಲಾಗಬೇಕು.
ಇಲ್ಲವಾದಲ್ಲಿ ಇಂತಹ ಪ್ರಕರಣಗಳು ಮತ್ತೆ ಮರುಕರಿಸುವುದರಲ್ಲಿ ಸಂಶಯವಿಲ್ಲ.
ರಘುರಾಜ್ ಹೆಚ್.ಕೆ.9449553305.