
ಶಿವಮೊಗ್ಗ: ಬಗ್ನ ಪ್ರೇಮಿ ನಗರದ ಅಶೋಕ ರೋಡ್ ಧರ್ಮರಾಯನ ಕೇರಿ ನಿವಾಸಿಯಾದ ಸುಮಾರು 35 ವರ್ಷದ ಮಲ್ಲೇಶ್ ಆಲಿಯಾಸ್ ಮಲ್ಲ ಎನ್ನುವನು ಜ್ಯೋತಿ ಅಲಿಯಾಸ್ ಸ್ವಾತಿ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದನು.
ಆದರೆ ಈ ಪ್ರೀತಿ ಇಬ್ಬರಿಗೂ ಒಪ್ಪಿ ಆದಂತದ್ದಲ್ಲ ಜ್ಯೋತಿಗೆ ಮಲ್ಲನ ಪ್ರೀತಿ ಇಷ್ಟವಿರಲಿಲ್ಲ ಆದರೆ ಮಲ್ಲ ಬಿಡಲು ತಯಾರಿರಲಿಲ್ಲ ನಿರಂತರವಾಗಿ ಕಾಡಿಬೇಡಿ ಜ್ಯೋತಿಯ ಬೆನ್ನು ಬಿದ್ದಿದ್ದನು ಕೊನೆಗೆ ಈತನ ಕಾಟ ತಾಳಲಾರದೆ ಜ್ಯೋತಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಳು.
ಆದರೆ ಜ್ಯೋತಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಮಲ್ಲನ ಹೆಸರನ್ನು ಡೆತ್ ನೋಟ್ ಅಲ್ಲಿ ಬರೆದಿಟ್ಟಿದ್ದಳು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟ ಮಲ್ಲ ಸ್ವಲ್ಪ ದಿನ ಜೈಲಿನಲ್ಲಿದ್ದು ನಂತರ ಬಿಡುಗಡೆಗೊಂಡು ಬೆಂಗಳೂರಿನಲ್ಲಿ ಸ್ವಲ್ಪ ದಿನ ಶಿವಮೊಗ್ಗದಲ್ಲಿ ಸ್ವಲ್ಪ ದಿನ ವಾಸವಿರುತ್ತಿದ್ದನು.ಆದರೆ ಈ ಪ್ರಕರಣ ನಡೆದು ಎರಡು ವರ್ಷಗಳ ನಂತರ ಮಲ್ಲ ಭೀಕರವಾಗಿ ನಿನ್ನೆ ಕೊಲೆಯಾಗಿದ್ದಾನೆ.
ಯಾರು ಈ ಹಂತಕರು :
ಮಲ್ಲೇಶ ಅಲಿಯಾಸ್ ಮಲ್ಲನ ಹಂತಕರು ಬೇರೆ ಯಾರು ಅಲ್ಲ ಸ್ವಾತಿ ಆಲಿಯಾಸ್ ಜ್ಯೋತಿ ಮಲ್ಲ ಪ್ರೀತಿಸುತ್ತಿದ್ದ ಹುಡುಗಿಯ ತಮ್ಮಂದಿರೇ ಈತನ ಕೊಲೆ ಮಾಡಿದ್ದಾರೆ ಅದು ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದ ರೀತಿಯಲ್ಲಿ ಏಳು ಜನರ ತಂಡ ಒಂದು ಬಂದು ನಿನ್ನೆ ರಾತ್ರಿ ಸುಮಾರು ಏಳು ಮೂವತ್ತರಷ್ಟು ಹೊತ್ತಿಗೆ ಹೊಳೆಹೊನ್ನೂರು ರಸ್ತೆಯ ಶಿವಶಂಕರ್ ವೈನ್ಸ್ ಹತ್ತಿರ ಮಟನ್ ಅಂಗಡಿಯ ಪಕ್ಕ ಮಲ್ಲನ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ ಬೈಕಿನಿಂದ ಬಿದ್ದ ಮಲ್ಲನನ್ನು ಏಳಲು ಬಿಡದೆ ಹೊಡೆದು ಹಾಕಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಜ್ಯೋತಿಯ ತಮ್ಮನಾದ ಕಾರ್ತಿ ಹಾಗೂ ಶ್ರೇಯಸ್ ಅಲಿಯಾಸ್ ಪಾತಾಳಿ ಗ್ಯಾಂಗ್, ಮಲ್ಲನನ್ನು ಮರ್ಡರ್ ಮಾಡಬೇಕೆಂದು ಹೂಂಚು ಹಾಕುತ್ತಿತ್ತು ಆದರೆ ಮಲ್ಲನ ಗ್ರಹಚಾರ ನೆಟ್ಟಗಿತ್ತು ಮಲ್ಲ ಬಚಾವಾಗಿದ್ದ ಆದರೆ ನಿನ್ನೆ ಮಲ್ಲನ ಗ್ರಹಚಾರ ಕೆಟ್ಟಿತ್ತು ಮಲ್ಲನ ಮರ್ಡರ್ ಆಯಿತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲ್ಲನ ಮರ್ಡರ್ ಮಾಡಿರುವ ಶ್ರೇಯಸ್ ಆಲಿಯಾಸ್ ಪಾತಾಳಿ, ಕಾರ್ತಿ, ವೇಣುಗೋಪಾಲ್, ಕಿರಣ್, ಪ್ರಕಾಶ್, ಪ್ರಭು ,ಮಂಜುನಾಥ್ ಎನ್ನುವ ಏಳು ಜನರ ತಂಡವನ್ನು ವಶಕ್ಕೆ ಪಡೆದಿದ್ದಾರೆ.
ಎಸ್ ಪಿ ಮಿಥುನ್ ಕುಮಾರ್ ಅವರಿಂದ ಅಭಿನಂದನೆ:
ಘಟನೆ ನಡೆದು 24 ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಿರುವ ಕೋಟೆ ಠಾಣೆಯ ಪಿ ಐ ಅಂಜನ್ ಕುಮಾರ್ , ಪಿಎಸ್ಐ ಕುಮಾರ್ ಎನ್ ಹಾಗೂ ಸಿಬ್ಬಂದಿಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿಕೆ ಅವರು ಅಭಿನಂದಿಸಿದ್ದಾರೆ.
ರಘುರಾಜ್ ಹೆಚ್.ಕೆ.9449553305.
