
ಶಿವಮೊಗ್ಗ: ಎರಡು ವರ್ಷಗಳ ಹಿಂದೆ ಶಿಕ್ಷಕಿ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಇದರ ಹಿನ್ನೆಲೆ ಅಶೋಕ ರೋಡ್ ಧರ್ಮರಾಯನ ಕೇರಿ ನಿವಾಸಿಯಾದ ಸುಮಾರು 35 ವರ್ಷದ ಮಲ್ಲೇಶ್ ಆಲಿಯಾಸ್ ಮಲ್ಲ ಎನ್ನುವನು ಜ್ಯೋತಿಗೆ ತನ್ನನ್ನು ಪ್ರೀತಿಸುವಂತೆ ಹೇಳಿ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಹಿಂಸೆಯನ್ನು ತಾಳಲಾರದೆ ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಳು.
ಈ ಪ್ರಕರಣ ನಡೆದು ಎರಡು ವರ್ಷಗಳ ನಂತರ ಅಂದರೆ ಇವತ್ತು 7:30ರ ಸುಮಾರಿಗೆ ಶಿವಶಂಕರ್ ವೈನ್ಸ್ ಪಕ್ಕ ಹೊಳೆಹೊನ್ನೂರು ರಸ್ತೆ ಮಟನ್ ಅಂಗಡಿಯ ಪಕ್ಕ ಮಲ್ಲನ ಮರ್ಡರ್ ಆಗಿದೆ.

ಈ ಕೊಲೆಯನ್ನು ತನ್ನ ಅಕ್ಕನ ಆತ್ಮಹತ್ಯೆಗೆ ಸೇಡು ತೀರಿಸಿಕೊಳ್ಳಲು ಆಕೆಯ ತಮ್ಮಂದಿರಾದ ಶ್ರೇಯಸ್ ಪಾತಾಲಿ, ಕಾರ್ತಿ, ಹಾಗೂ ಸಹಚರರು ಸೇರಿಕೊಂಡು ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೇಸನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆಬಿಸಿದ್ದಾರೆ.
ರಘುರಾಜ್ ಹೆಚ್.ಕೆ.9449553305.