
ತೀರ್ಥಹಳ್ಳಿ : ನಗರದ ಮೇಲಿನ ಕುರುವಳ್ಳಿಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸರ್ವೇ ನಂಬರ್ 38 ಹಾಗೂ 64 ರಲ್ಲಿ ಹತ್ತರಿಂದ ಹದಿನೈದು ಎಕರೆಯಲ್ಲಿ ಕಳೆದ 20 ವರ್ಷಗಳಿಂದ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಲಕ್ಷಾಂತರ ಮೌಲ್ಯದ ಕಲ್ಲು ಲೂಟಿಯಾಗಿದೆ. ಅದೇ ಸರ್ವೇ ನಂಬರ್ 75ರಲ್ಲಿ ಗಣಿ ಗುತ್ತಿಗೆ ಮುಗಿದು ಎರಡುವರೆ ವರ್ಷ ಕಳೆದಿದೆ ಆದರೂ ಆಕ್ರಮವಾಗಿ ಕಲ್ಲನ್ನು ತೆಗೆಯುವವರ ಸಂಖ್ಯೆ ಕಡಿಮೆಯಾಗಿಲ್ಲ ದಿನನಿತ್ಯ 6 ಎಕ್ರೆ ಜಾಗದಲ್ಲಿ ಲಕ್ಷಾಂತರ ಮೌಲ್ಯದ ಕಲ್ಲನ್ನು ಅಕ್ರಮವಾಗಿ ತೆಗೆಯುತ್ತಿದ್ದಾರೆ.
ಇದೇ ವಿಚಾರವಾಗಿ ಪತ್ರಿಕೆ ನಿರಂತರವಾಗಿ ವರದಿ ಮಾಡಿತ್ತು ವರದಿಯ ಫಲಶ್ರುತಿಯಾಗಿ ಸರ್ವೆ ನಂಬರ್ 38ನ್ನು ಸರ್ಕಾರ ಗುತ್ತಿಗೆ ನೀಡಿದೆ. ಆದರೆ ಆ ಗುತ್ತಿಗೆ ನೀಡಿದವರಿಗೂ ಸರಿಯಾಗಿ ನಡೆಸಲು ಬಿಡದೆ ಈ ಅಕ್ರಮಕಾರರು ದಿನನಿತ್ಯ ಲೂಟಿ ಹೊಡೆಯುತ್ತಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರಿಕೆ ನಿರಂತರವಾಗಿ ಇದರ ಬಗ್ಗೆ ಮಾಹಿತಿ ನೀಡುತ್ತಿದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಹೀಗೆ ಒಂದು ವಾರದ ಹಿಂದೆ ಕೂಡ ದಾಳಿ ನಡೆಸಿ ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದರು. ಸಿಬ್ಬಂದಿಗಳ ತಂಡ ಇಂದು ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡು ತೀರ್ಥಹಳ್ಳಿಯ ನಗರ ಠಾಣೆಗೆ ಒಪ್ಪಿಸಿದ್ದಾರೆ ತೀರ್ಥಹಳ್ಳಿ ನಗರ ಠಾಣೆಯಲ್ಲಿ ಈ ಲಾರಿಗಳನ್ನು ವಶಪಡಿಸಿಕೊಂಡು ಕೆಸ್ ದಾಖಲಿಸುತ್ತಾರ ಅಥವಾ ಯಾರ ಮುಲಾಜಿಗಾದರೂ ಒಳಗಾಗಿ ಲಾರಿಗಳನ್ನು ಬಿಟ್ಟು ಕಳಿಸುತ್ತಾರಾ ಕಾದುನೋಡಬೇಕು.
ಯಾರದು ಈ ಲಾರಿಗಳು..?
ರೇಣುಕಾಂಬ ಎನ್ನುವ ಹೆಸರಿನ ಆರು ಲಾರಿಗಳು ವೈ ರೇಣುಕಾ, ವೈ ಗಣಪತಿ ,ವಿನಯ ವೈ ,ನಾಗೇಂದ್ರ ,ವಸಂತ ವೈ ಸಹೋದರಿಗೆ ಸೇರಿದೆ. ಇವರಿಗೆ ಗಣಿ ಗುತ್ತಿಗೆ ಇಲ್ಲ ಆದರೂ ಕೂಡ ಅಕ್ರಮವಾಗಿ ಲೂಟಿ ಮಾಡುತ್ತಿದ್ದಾರೆ ಇವರ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಕೇಸ್ ಅನ್ನು ದಾಖಲಿಸಿ, ಲಾರಿಗಳನ್ನು ಸೀಜ್ ಮಾಡಿ ಅಕ್ರಮಕ್ಕೆ ತಡೆ ಹಾಕಬೇಕು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೀರ್ಥಹಳ್ಳಿಯ ಪೊಲೀಸ್ ಇಲಾಖೆ ಈ ಅಕ್ರಮಕಾರರಿಗೆ ಬಿಸಿ ಮುಟ್ಟಿಸಬೇಕು.
ಪದೇ ಪದೇ ಹಣ ಕೊಡುತ್ತೇವೆ ಹಣ ಕೊಡುತ್ತೇವೆ ಎಂದು ಹೇಳುತ್ತಾರಲ್ಲ ಅದು ಯಾರಿಗೆ ಎಂದು ಗೊತ್ತಾಗಬೇಕು.
ಒಂದು ವೇಳೆ ಯಾರಿದಾದರೂ ಮುಲಾಜಿಗೆ ಒಳಗಾಗಿ ಹಿಡಿದಿರುವ ಗಾಡಿಗಳನ್ನು ಗಣಿ ಇಲಾಖೆ ಬಿಟ್ಟರೆ ಗಣಿ ಇಲಾಖೆ ಮೇಲೆಯೇ ಈ ಹಣದ ಆರೋಪ ಬರುತ್ತದೆ ನೆನಪಿರಲಿ.
ರಘುರಾಜ್ ಹೆಚ್.ಕೆ.9449553305.