
ಶಿವಮೊಗ್ಗ: ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಆದಿಚುಂಚನಗಿರಿ ಕಾಲೇಜಿನಲ್ಲಿ ಮೇಘಶ್ರೀ ಎನ್ನುವ 17 ವರ್ಷದ ಹುಡುಗಿ ಐದನೇ ಮಾಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.
ಮೂಲತಃ ಚೆನ್ನಗಿರಿ ಅವಳಾದ ಮೇಘಶ್ರೀ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಆದಿಚುಂಚನಗಿರಿ ಕಾಲೇಜಿನಲ್ಲಿ ಓದುತ್ತಿದ್ದ ಇವಳು ಇಲ್ಲೇ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು.
ಆತ್ಮಹತ್ಯೆಗೆ ನಿಖರವಾದ ಮಾಹಿತಿಗಳು ಕಂಡುಬಂದಿಲ್ಲವಾದರೂ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿನಿಯ ಪೋಷಕರ ಪ್ರಕಾರ ಹಾಸ್ಟೆಲಿನ ವಾರ್ಡರ್ ಹಾಗೂ ಟೀಚರ್ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ಪೊಲೀಸ್ ಇಲಾಖೆಯ ಸಮಗ್ರ ತನಿಖೆಯಿಂದ ಹಾಗೂ ಎಫ್ ಎಸ ಎಲ್ ರಿಪೋರ್ಟ್ ನಿಂದ ಬರುವ ಮಾಹಿತಿಯ ಆಧಾರ ಮೇಲೆ ನಿಖರವಾಗಿ ಇವಳ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಬಹಿರಂಗವಾಗಬೇಕಾಗಿದೆ.
ರಘುರಾಜ್ ಹೆಚ್. ಕೆ.9449553305.