
ಶಿವಮೊಗ್ಗ
: ನಗರದಲ್ಲಿ ಮಾದಕ ವಸ್ತು ಗಾಂಜಾ ವಿರುದ್ಧ ಕಾನೂನು ಕ್ರಮ
ಕೈಗೊಳ್ಳುವ ಸಂಬಂಧ
ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ, ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ಪೊಲೀಸ್ ನಿರೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿರು
ತ್ತದೆ .
ನಿನ್ನೆ ಬೆಳಗ್ಗೆ ಶಿವಮೊಗ್ಗ ನಗರದ ಮಲವಗೊಪ್ಪದಿಂದ ಶುಗರ್ ಪ್ಯಾಕ್ಟರಿಗೆ ಸೇರಿದ ಖಾಲಿ ಜಾಗದಲ್ಲಿ 04 ಜನ ಆಸಾಮಿಗಳು ಗಾಂಜಾವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದೀಪಕ್ ಎಂ ಎಸ್. ಪಿ.ಐ ಸಿಇಎನ್. ಕೈಂ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಧರ್ಮಾನಾಯ್ಕ್, ಚಂದ್ರಶೇಖರ್ ಡಿ,ಆರ್, ಕರಿಬಸಪ್ಪ, ಬಿ, ಎಸ್. ಪಿಸಿ ಫಿರ್ದೋಸ್ ಅಹಮ್ಮದ್, ರವಿ ಬಿ, ಚಿದಂಬರ್ ಡಿ. ಎನ್. ಹಾಗೂ ಚಾಲಕರಾದ ಪ್ರಕಾಶನಾಯ್ಕ ರವರುಗಳನ್ನು ಒಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಆರೋಪಿತರಾದ 1) ಸುಹೇಲ್ ಖಾನ್ @ ಪಿನ್ನಿ, 20 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ 2) ಮೊಹಮ್ಮದ್ ಗೌಸ್ @ ಗುಂಡ, 23 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ, 3) ಖಲೀಲ್ ಅಹಮದ್ @ ಕಾಲು, 25 ವರ್ಷ, ಕೋಟೆ ಏರಿಯಾ ಖಾಝಿ ಮೊಹಲ್ಲಾ ಭದ್ರಾವತಿ ಟೌನ್ ಮತ್ತು 4) ಸೈಯದ್ ಹಸೈನ್ @ ಜಂಗ್ಲಿ @ ಸಾಹಿಲ್, 23 ವರ್ಷ, ಎಕಿನ್ಸಾ ಕಾಲೋನಿ ಭದ್ರಾವತಿ
ರವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾ
ಡಿರುತ್ತಾರೆ.
ಸದರಿ ಆರೋಪಿತರಿಂದ ಅಂದಾಜು ಮೌಲ್ಯ 2,25,000/- ರೂಗಳ ಒಟ್ಟು 04 ಕೆಜಿ 470 ಗ್ರಾಂ ತೂಕದ ಒಣ ಗಾಂಜಾವನ್ನುಅಮಾನತ್ತು ಪಡಿಸಿಕೊಂಡು ಆರೋಪಿತರಿಂದ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0009/2024 ಕಲಂ 20 (ಬಿ) (2) ಬಿ ಎನ್.ಡಿ.ಪಿ.ಎಸ್ ಕಾಯ್ದೆರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿ
ದ್ದಾರೆ.