
ಇಡೀ ರಾಷ್ಟ್ರದಲ್ಲಿ ಅಯೋಧ್ಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ದಿನವಾದ ಇಂದು ಸಂಭ್ರಮದಿಂದ ಸಡಗರದಿಂದ ತೊಡಗಿದ್ದಾರೆ. ಅದೇ ರೀತಿ ಶಿವಮೊಗ್ಗದಲ್ಲೂ ಕೂಡ ಬಿಜೆಪಿ ನಾಯಕರು ಹಿಂದೂ ಮುಖಂಡರು ಸಂಭ್ರಮ ಸಡಗರದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸುತಿದ್ದಾರೆ.
ಆದರೆ ಶಿವಮೊಗ್ಗದಲ್ಲಿ ಬಿಜೆಪಿಯ ನಾಯಕರುಗಳು ಸಭೆಯನ್ನು ಮುಗಿಸಿ ನಂತರ ಮಾಧ್ಯಮಕ್ಕೆ ಹೇಳಿಕೆ ಕೊಡುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಬಂದ ಮುಸ್ಲಿಂ ಮಹಿಳೆ ಒಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ಬೈಯುತ್ತಾ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಲು ಶುರು ಮಾಡಿದಳು ನಂತರ ಅಲ್ಲಿಗೆ ನುಗ್ಗಿ ಬಂದ ಮಾಜಿ ಸಚಿವ ಈಶ್ವರಪ್ಪನವರ ಪುತ್ರ ಕೆಇ ಕಾಂತೇಶ್ ಆಕೆಯನ್ನು ಬಂಧಿಸದೆ ಮೌನವಾಗಿದ್ದೀರಿ ಏಕೆಂದರೆ ಆಕ್ರೋಶ ಹೊರ ಹಾಕಿದರು ನಂತರ ಶ್ರೀ ರಾಮನ ಘೋಷಣೆ ಹೆಚ್ಚಾಯಿತು ಪೊಲೀಸರು ಆಕೆಯನ್ನು ಮಗುವಿನ ಸಮೇತ ಪೋಲಿಸ್ ಜಿಪಿಗೆ ಹತ್ತಿಸಿಕೊಂಡು ಹೋದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು ಹಲವು ತಿಂಗಳಿಂದ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾಳೆ ಎಂದು ಸ್ವತಃ ಆಕೆಯ ತಂದೆ ತಿಳಿಸಿದ್ದಾರೆ ಎಂದು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ಏನು ..?
ಇಡೀ ರಾಷ್ಟ್ರ ಸಂಭ್ರಮ ಪಡುತ್ತಿರುವಾಗ ಈ ಮಹಿಳೆ ಈ ತರಹ ಮಾಡಿರುವುದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ ಮಾಧ್ಯಮ ಮಿತ್ರರಿಂದ ಮಾಹಿತಿ ತಿಳಿದುಕೊಂಡಿದ್ದೇನೆ. ಶಿವಮೊಗ್ಗ ಎಸ್ ಪಿ ಈಕೆ ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಿದ್ದಾರೆ ಆದರೆ ಇದರ ಹಿಂದೆ ಯಾರಿದ್ದಾರೆ ಆಕೆ ನಿಜವಾಗಲೂ ಮಾನಸಿಕ ಅಸ್ವಸ್ಥೆ ಎನ್ನುವುದು ತನಿಖೆಯಾಗಬೇಕು ಎಂದು ಎಸ್ ಪಿ ಜೊತೆ ಮಾತನಾಡಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು.
ರಘುರಾಜ್ ಹೆಚ್. ಕೆ..9449553305..