
ಶಿವಮೊಗ್ಗ: ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ದಕ್ಷ ಪ್ರಾಮಾಣಿಕ ಯುವ ಉತ್ಸಾಹಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರು ಕಾರ್ಯಪ್ರವೃತ್ತರಾಗುವ ಸಾಧ್ಯತೆ ಇದೆ.
ಶಿವಮೊಗ್ಗ ಪೊಲೀಸ್ ಇಲಾಖೆಗೆ ಸರ್ಜರಿ ಮಾಡಲು ಕಾರಣವೇನು..?!
ಮರಳು ಮಣ್ಣು ಇಸ್ಪೀಟ್ ಓಸಿ ಯಂತಹ ಅಕ್ರಮ ದಂಧೆಗಳಲ್ಲಿ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕೆಲವು ಸಿಬ್ಬಂದಿಗಳ ಹೆಸರು ಇತ್ತೀಚಿಗೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಿನ್ನೆ ಆಷ್ಟೇ ಸೈಬರ್ ಕ್ರೈಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಎಸ್ಐ ರೆಹಮಾನ್ ಮಟ್ಕಾ ದಂಧೆಯ ಸಲುವಾಗಿ ರಫೀಕ್ ಎನ್ನುವ ವ್ಯಕ್ತಿ ಹತ್ತಿರ 1,20,000 ಸಾವಿರಗಳಿಗೆ ಡೀಲ್ ಕುದುರಿಸಿ ನಂತರ ಅದರ ಬಾಪ್ತಾಗಿ 1 ಲಕ್ಷ ನಗದು ಪಡೆಯುವಾಗ ಲೋಕಾಯುಕ್ತರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ಇಡೀ ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಉಂಟು ಮಾಡಿದ್ದು ಈ ಪ್ರಕರಣವನ್ನು ಎಸ್ಪಿ ಮಿಥುನ್ ಕುಮಾರ್ ಹಾಗೂ ಐಜಿ ಗಂಭೀರವಾಗಿ ತೆಗೆದುಕೊಂಡಿದ್ದು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿರುವ ಹಲವು ಸಿಬ್ಬಂದಿಗಳು ಅಧಿಕಾರಿಗಳ ವರ್ಗಾವಣೆ ಆಗುವ ಸಾಧ್ಯತೆ ಇದೆ.
ನಿಷ್ಠಾವಂತರಾ ಪ್ರಾಮಾಣಿಕರ ಹಾಗೂ ಕೆಲಸವನ್ನು ಕಲಿತವರ ಮೇಲೆ ವರ್ಗಾವಣೆಯ ಚಾಟಿ ಬೀಸದಿರಲಿ :
ನೂತನವಾಗಿ ಠಾಣೆಗೆ ವರ್ಗಾವಣೆಯಾಗಿ ಬಂದು ಬಂದು ಒಂದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿ ಕೆಲಸವನ್ನು ಕಲಿತು ಇನ್ನೇನು ಜನಸ್ನೇಯಿಯಾಗಿ ಕಾರ್ಯನಿರ್ವಹಿಸುತ್ತಿರುವ ಒಂದಷ್ಟು ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಇದ್ದಾರೆ ಅಂತವರ ಮೇಲು ಈ ವರ್ಗಾವಣೆಯ ಪ್ರಯೋಗ ನಡೆದರೆ ಮತ್ತೆ ಇನ್ನೊಬ್ಬರು ಆ ಸ್ಥಾನಕ್ಕೆ ಬಂದು ಹೊಂದಿಕೊಳ್ಳುವುದು ಕಷ್ಟ ಹಾಗಾಗಿ ಅವರ ಮೇಲೆ ವರ್ಗಾವಣೆಯ ಚಾಟಿ ಬೀಸದಿರಲಿ .
ಒಂದಷ್ಟು ಜನರ ಜಾತಕ ನ್ಯೂಸ್ ವಾರಿಯರ್ಸ್ ಪತ್ರಿಕೆ ತಂಡದ ಕೈಯಲ್ಲಿ ..!
ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಅದರಲ್ಲೂ ತೀರ್ಥಹಳ್ಳಿಯಲ್ಲಿ ಯುವ ಉತ್ಸಾಹಿ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್ ಇದ್ದಾರೆ ಅವರಿಗೆ ಜೊತೆಯಾಗಿ ಇತ್ತೀಚಿಗೆ ವರ್ಗಾವಣೆಯಾಗಿ ಬಂದ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವವುಳ್ಳ ಇನ್ಸ್ಪೆಕ್ಟರ್ ಶ್ರೀಧರ್ ಇದ್ದಾರೆ ಇವರುಗಳು ಮನಸ್ಸು ಮಾಡಿದರೆ ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಹತ್ತಿಕ್ಕುವುದು ದೊಡ್ಡ ಕೆಲಸವಲ್ಲ ಹಾಗೆ ಕೆಲವು ಸಿಬ್ಬಂದಿಗಳನ್ನು ಕೂಡ. ಕೆಲವು ಸಿಬ್ಬಂದಿಗಳ ಲಂಚಾವತಾರದ ಬಗ್ಗೆ ಒಂದಿಷ್ಟು ಮಾಹಿತಿ ಪತ್ರಿಕೆಗೆ ಲಭ್ಯವಾಗುತ್ತಿದ್ದು ಸಂಪೂರ್ಣ ಮಾಹಿತಿ ಸಿಕ್ಕ ನಂತರ ಸಾಕ್ಷಿ ಸಮೇತ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಕೆಲವರು ವರ್ಗಾವಣೆ ಆದರೂ ಕೂಡ ಮತ್ತೆ ಅದೇ ಠಾಣೆಯಲ್ಲಿ ಮುಂದುವರೆದಿದ್ದಾರೆ ಇನ್ನು ಕೆಲವರು ಸಿಬ್ಬಂದಿಗಳು ಮಾಮೂಲು ವಸೂಲು ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನೂ ಕೆಲವರು ಠಾಣೆಗೆ ಬಂದವರನ್ನೇ ಬಡಿದು ಕಳುಹಿಸಿ ಅವರ ಹತ್ತಿರಾನೆ ಹಣ ತೆಗೆದುಕೊಂಡು ಹಣ ಕೊಟ್ಟವರ ಮೇಲೆ ಕೇಸ್ ಮಾಡದೆ ಹಣ ಕೊಡದವರ ಮೇಲೆ ಕೇಸ್ ಮಾಡುವಲ್ಲಿ ಬಿಜಿಯಾಗಿದ್ದಾರೆ. ತೀರಾ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಗೋವುಗಳನ್ನು ಹಿಡಿದರು ಹಣ ಕೊಡಬೇಕು ಗೋವುಗಳನ್ನು ಬಿಟ್ಟರು ಹಣ ಕೊಡಬೇಕು. ಇನ್ನೂ ಕಲ್ಲು ಗಣಿಗಾರಿಕೆ, ಮರಳು, ಇದರ ಕಥೆ ಹೇಳುವುದೇ ಬೇಡ ಬಿಡಿ. ಇದೆಲ್ಲವನ್ನು ಪತ್ರಿಕೆ ಸಾಕ್ಷಿ ಸಮೇತ ಅಧಿಕಾರಿಗಳ ಮುಂದೆ ತೆರೆದಿಡಲಿದೆ ನಿರೀಕ್ಷಿಸಿ.
ವ್ಯವಸ್ಥೆ ಒಳಗೆ ಎಲ್ಲವೂ ಮಾಮೂಲು ಆದರೆ ಇತಿ ಮಿತಿಯಲ್ಲಿದ್ದರೆ ಒಳಿತು :
ಪೊಲೀಸ್ ಇಲಾಖೆ ಎಂದ ಮೇಲೆ ಒತ್ತಡದ ಜೀವನ ಸಹಜ ಎಲ್ಲಾ ಇಲಾಖೆಗಳಿಗೂ ಪೊಲೀಸ್ ಇಲಾಖೆ ಸಹಕಾರ ಅತ್ಯಗತ್ಯ ಎಲ್ಲೇ ಏನೇ ನಡೆದರೂ ದೂರುವುದು ಮೊದಲು ಪೊಲೀಸ್ ಇಲಾಖೆಯನ್ನು ಹಾಗೆ ನಂಬುವುದನ್ನು ಕೂಡ ಹಾಗಾಗಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆ ಹೆಚ್ಚು ಹಾಗಾಗಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಆ ಒತ್ತಡದ ನಡುವೆಯೇ ಯಾವುದಾದರೂ ಪ್ರಕರಣವನ್ನು ಭೇಧಿಸಿದಾಗ ರಾಜಕಾರಣಿಗಳಿಂದ ಪ್ರಭಾವಿ ಮುಖಂಡರುಗಳಿಂದ ಬಿಡುವಂತೆ ಕೇಸ್ ಹಾಕದಂತೆ ಒತ್ತಡ ಬರುವುದು ಸಹಜ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಅಧಿಕಾರಿಗಳ ಮೇಲೆ ಹಾಗೂ ಸಿಬ್ಬಂದಿಗಳ ಮೇಲೆ ಇರುತ್ತದೆ ಈ ಎಲ್ಲಾ ಒತ್ತಡಗಳ ನಡುವೆಯೂ ಇಲಾಖೆಯಲ್ಲಿರುವ ಸಾಕಷ್ಟು ಜನ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಜನಸ್ನೇಹಿಯಾಗಿ ಎಲ್ಲರಲ್ಲೂ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುತ್ತಾರೆ ಯಾರು ಮಾಡಿದ ತಪ್ಪಿಗೆ ಎಲ್ಲರನ್ನು ದ್ವೇಷಿಸುವುದು ಅಷ್ಟು ಸರಿಯಲ್ಲ ಪೊಲೀಸ್ ಇಲಾಖೆ ಇರುವುದರಿಂದ ಜನ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿದೆ ನೆನಪಿರಲಿ…..
ರಘುರಾಜ್ ಹೆಚ್. ಕೆ..9449553305.