ಶಿವಮೊಗ್ಗ: ಇತ್ತೀಚಿಗೆ ಶಿವಮೊಗ್ಗದಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದವು ಆದರೆ ಕಳೆದ ವಾರದ ಈಚೆಗೆ ಎರಡು ಮೂರು ಪ್ರಕರಣಗಳು ಅದರಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ದಾಖಲಾಗಿವೆ.
ನಗರದ ಎಲ್ ಬಿಎಸ್ ನಗರದಲ್ಲಿ ಮಹಿಳೆ ಓರ್ವರ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗಿರುವ ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು.
ಈ ಮಹಿಳೆ ಗಾಂಧಿ ನಗರದಲ್ಲಿ ಹಬ್ಬದ ಪೂಜೆಗೆ ಬೇಕಾದ ಪೂಜಾ ಸಾಮಾಗ್ರಿಗಳನ್ನ ಮಾರಾಟ ಮಾಡುವ ಅಂಗಡಿಯನ್ನ ನಡೆಸುತ್ತಿದ್ದ ಮಾಲೀಕರ ತಾಯಿಯಾಗಿದ್ದು. ಕಳೆದ ಶುಕ್ರವಾರ ಅಂಗಡಿಯನ್ನ ನಡೆಸಿ ರಾತ್ರಿ ಪರಿಚಯಸ್ಥರ ಆಟೋದಲ್ಲಿ ಎಲ್ ಬಿಎಸ್ ನಗರಕ್ಕೆ ಬಂದಾಗ ಆಟೋ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಎಲ್ ಬಿಎಸ್ ನಗರದ ತಪೋಮಯದ ಬಳಿ ಮಹಿಳೆಗೆ ಅಡ್ಡಲಾಗಿ ಬಂದ ಬೈಕ್ ಸವಾರ ಮಹಿಳೆಯ ವ್ಯಾನಿಟು ಬ್ಯಾಗ್ ಕಸಿದುಕೊಂಡು ಹೋಗಿದ್ದಾನೆ.
ನಂತರ ಈ ಪ್ರಕರಣದ ಸಂಬಂಧ ರೇಣುಕಾ ಎಂಬ ಹೆಸರಿನ ಮಹಿಳೆ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು.ಆ ದೂರಿನಲ್ಲಿ ಪರ್ಸ್ ನಲ್ಲಿ ಬ್ಯಾಂಕ್ ಎಟಿಎಂ ಕಾರ್ಡ್, 10 ಸಾವಿರ ರೂ. ನಗದು ಹಾಗೂ ಮೊಬೈಲ್ ಕಳುವಾಗಿರುವ ಬಗ್ಗೆ ದೂರು ನೀಡಿದ್ದಾರೆ.