
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಹೆಚ್ ಎಸ್ ಸುಂದರೇಶ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಾ ಮಾಧ್ಯಮಗಳ ಸಹಕಾರಕ್ಕೆ ಧನ್ಯವಾದಗಳು ಸಲ್ಲಿಸಿದರು.
ಐದೂವರೆ ವರ್ಷಗಳ ಕಾಲ ಜಿಲ್ಲಾಧ್ಯಕ್ಷ. ಓರ್ವ ಶಾಸಕರಿದ್ದಾಗ ಅಧ್ಯಕ್ಷ ಆಗಿದ್ದು…ಕರೋನಾದಂತಹ ಕೆಟ್ಟ ಕಾಲದಲ್ಲೂ, ಪ್ರವಾಹದ ಸಂದರ್ಭದಲ್ಲೂ ಸ್ವಂತ ಹಣದಿಂದ ಕೆಲಸ ಮಾಡುವ ಮೂಲಕ ಸಂಪರ್ಕವಾಗಿ ಕಾರ್ಯನಿರ್ವಹಿಸಿದ್ದೇನೆ.
ಹರ್ಷ ಪ್ರಕರಣ, ನಿರಂತರ ಹೋರಾಟಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ನನ್ನ ಮನವಿಯ ಮೇರೆಗೇ ಹೈ ಕಮಾಂಡ್ ಹೊಸ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿದೆ.
ಎರಡನೇ ಸುತ್ತಿನ ಅಭ್ಯರ್ಥಿ ಪ್ರಚಾರ. ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳು ಮನೆಮನೆಗೆ ತಲುಪಿವೆ. ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ರೀಚ್ ಮಾಡಿದ್ದೇವೆ. ಈಗ ಕೇಂದ್ರದ ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡ್ತೇವೆ.
25 ಗ್ಯಾರಂಟಿಗಳನ್ನು ಕೇಂದ್ರದ ಹೈ ಕಮಾಂಡ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮಹಿಳೆ, ಉನ್ನತ ಶಿಕ್ಷಣ, ಆರೋಗ್ಯ ವಿಮೆ, ರೈತರಿಗೆ ಕಾನೂನು ಖಾತ್ರಿ ಬೆಂಬಲ ಬೆಲೆ, ಜಿಎಸ್ ಟಿ ಎಲ್ಲದಕ್ಕೂ ಹಾಕಲಾಗಿದ್ದು, ಅದನ್ನು ಸಂಪೂರ್ಣ ಬದಲಾವಣೆ, ಆದಾಯ ತೆರಿಗೆ ಭರವಸೆ, ಅಂಗನವಾಡಿ, ಪಿಂಚಣಿ ದಾರರಿಗೆ ಹೆಚ್ಚಳದ ಹಣ, ದೌರ್ಜನ್ಯಗಳ ವಿರುದ್ಧ ಆಯೋಗ ರಚನೆ, ಭೋಗಸ್ ಕಂಪನಿಗಳ ವಿರುದ್ಧ ತನಿಖೆ, ಪಿಎಂ ಕೇರ್ ಲೆಕ್ಕಪತ್ರ ತನಿಖೆ, ನೋಟ್ ಅಮಾನ್ಯೀಕರಣದ ವಿರುದ್ಧ, ಪೆಗಾಸಿಸ್ ಸೇರಿದಂತೆ ಹಲವು ಹಗರಣಗಳ ವಿರುದ್ಧ ತನಿಖೆ, ನಗರ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ…
25 ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಲಾಗುವುದು. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಹಿ ಹಾಕಿದ ಗ್ಯಾರಂಟಿಗಳನ್ನು ವಿತರಿಸಲಾಗುವುದು.
ರಾಜ್ಯದ ಗ್ಯಾರಂಟಿಗಳಿಂದ ದೇವಸ್ಥಾನ ಸೇರಿದಂತೆ ಎಲ್ಲರಿಗೂ ಅನುಕೂಲ. ಮೋದಿ ಅಲೆ ಎಲ್ಲಿಯೂ ಇಲ್ಲ. ಬಿಜೆಪಿಯ ಎಲ್ಲದೂ ಸುಳ್ಳು. ಜನರ ಮೇಲೆ ಲಕ್ಷಾಂತರ ರೂ., ಸಾಲ ಹೊರಿಸಲಾಗಿದೆ.
ಬಂಗಾರಪ್ಪರ ಕೆಲಸಗಳು, ಮಧು ಬಂಗಾರಪ್ಪರ ಪ್ರಯತ್ನಗಳ ಮೂಲಕ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸುವುದು ಖಚಿತ.
ಬರಗಾಲದ ಹಣ ಕೇಳುವ ಯೋಗ್ಯತೆ ಈಗಿನ ಸಂಸದರಿಗಿಲ್ಲ. ರಾಘವೇಂದ್ರ ಎರಡು ಲಕ್ಷ ಲೀಡ್ ಅಂತಿದಾರೆ, ಈಶ್ವರಪ್ಪ ಮೂರು ಲಕ್ಷ ಲೀಡ್ ಅಂತಾರೆ. ಆದರೆ, ಗೀತಾ ಶಿವರಾಜ್ ಕುಮಾರ್ ಅತ್ಯಂತ ಅಧಿಕ ಲೀಡ್ ನಿಂದ ಗೆಲ್ಲೋದು ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರಭೂಪಾಲ, ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಕಲೀಂ ಪಾಷ, ಶಾಂತವೀರನಾಯ್ಕ, ಮಧು, ರಮೇಶ್ ಶಂಕರಘಟ್ಟ, ಇಕ್ಕೇರಿ ರಮೇಶ್ ,ಶಿವು ಪಾಶಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.