
ಶಿವಮೊಗ್ಗ : ನಿನ್ನೆ ತಡರಾತ್ರಿ ನಗರದ ಹೊಸಮನೆ ಏರಿಯಾದಲ್ಲಿ ಪುಂಡ ಪೋಕರಿಗಳು ಏರಿಯಾದಲ್ಲಿ ನಿಲ್ಲಿಸಿದ ಕಾರಿನ ಗ್ಲಾಸ್ ಗಳನ್ನು ಒಡೆದಿದ್ದು ದಾಂದಲೆ ಮಾಡಿ ನೆಮ್ಮದಿಯ ವಾತಾವರಣವನ್ನು ಕದಲುವ ಪ್ರಯತ್ನ ಮಾಡಿದ್ದಾರೆ.
ಇವರುಗಳು ಈ ಕೃತ್ಯವನ್ನು ಮಾಡಿರುವುದು ಗಾಂಜಾ ಸೇವನೆಯಿಂದ ಎನ್ನುವುದು ಸ್ಥಳೀಯರ ದೂರಾಗಿದೆ ಈ ಕೃತ್ಯಗಳಿಗೆ ಸಂಬಂಧಪಟ್ಟಂತೆ ಕಾರಿನ ಮಾಲೀಕರು ಸಲ್ಲಿಸಿರುವ ದೂರಿನ ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ :
ಘಟನೆ ನಡೆದ ಹೊಸಮನೆ ಏರಿಯಕ್ಕೆ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದು ಇಂತಹ ಕೃತ್ಯವನ್ನು ನಡೆಸಿರುವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಯಾರಿಗೂ ಭಯ ಬೇಡ ನಿಮ್ಮೊಂದಿಗೆ ಸದಾ ನಾವಿದ್ದೇವೆ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ಅವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಈಗಾಗಲೇ ಶಿವಮೊಗ್ಗ ನಗರದಾದ್ಯಂತ ರಾತ್ರಿಗಸ್ತು ಪೂಟ್ ಪೆಟ್ರೋಲಿಂಗ್ , ಏರಿಯಾ ಡಾಮಿನೇಷನ್ ನಡೆಸಲಾಗುತ್ತಿದ್ದು
ಹೊಸಮನೆ ಏರಿಯಕ್ಕೆ ವಿಶೇಷ ಒತ್ತು ನೀಡಿ ಹೆಚ್ಚಿನ ನಿಗಾ ವಹಿಸಲಾಗುವುದು.

ಹಾಗೆ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಗಾಂಜಾ ಸೇವನೆ ಮಾಡಿರುವ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಮಾಹಿತಿ ನೀಡಿ ಅಂತವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.