ಶಿವಮೊಗ್ಗ: ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವರಾದ ಪರಮೇಶ್ವರ್ ಅವರು ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ ಸಂಗತಿ ಅದಕ್ಕೆ ಸಂತಾಪ ಸೂಚಿಸುತ್ತೇನೆ ಅವರ ಕುಟುಂಬಕ್ಕೆ ಆ ನಷ್ಟವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಈ ಪ್ರಕರಣದಲ್ಲಿ ಅಕ್ರಮ ಆಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು ಸಿಐಡಿ ತನಿಖೆಗೆ ವಹಿಸಲಾಗಿದೆ.
ತನಿಖೆ ಮುಗಿಯವರೆಗೂ ನಿರ್ಧಿಷ್ಟವಾಗಿ ಏನನ್ನು ಹೇಳಲು ಆಗುವುದಿಲ್ಲ ಕೆಲಸ ಮಾಡುವಾಗ ಒತ್ತಡ ಇತ್ತಾ ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರಾ..? ಗೊತ್ತಿಲ್ಲ ಕೋವಿಡ್ ಸಮಯದಲ್ಲಿ ಮೂರು ತಿಂಗಳ ಕಾಲ ಸಾವಿನ ಬದುಕಿನ ನಡುವೆ ಹೋರಾಟ ಮಾಡಿ ಜಯಗಳಿಸಿದ್ದ ಚಂದ್ರಶೇಖರ್ ಈಗ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ ಸಂಗತಿ ಅವರ ಹೆಂಡತಿ ಒಡವೆಗಳನ್ನು ಅಡವಿಟ್ಟು ಅವರನ್ನು ಬದುಗಿಸಿಕೊಂಡಿದ್ದಾರೆ ಈಗ ಅವರ ಕುಟುಂಬಕ್ಕೆ ಏನು ಸಹಾಯ ಮಾಡಲು ಸಾಧ್ಯವಿಲ್ಲ ಆದರೆ ಚುನಾವಣೆಯ ಫಲಿತಾಂಶದ ನಂತರ ಅವರ ಕುಟುಂಬಕ್ಕೆ ಸಹಾಯ ಮಾಡುವ ವಿಚಾರವಾಗಿ ಸರ್ಕಾರ ಚಿಂತನೆ ನಡೆಸುತ್ತದೆ.
ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಅವಶ್ಯಕತೆ ಸರ್ಕಾರಕ್ಕೆ ಇಲ್ಲ ಯಾರದಾದರೂ ಪಾತ್ರ ಇದ್ದರೆ ಖಂಡಿತ ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆಯನ್ನು ಕೊಡಿಸಲಾಗುವುದು ಮೇ 6ರ ನಂತರ ಕುಟುಂಬವನ್ನು ಮತ್ತೊಮ್ಮೆ ಸಂಪರ್ಕಿಸಲಾಗುವುದು. ಭರವಸೆ ಈಡೇರಿಸಲಾಗುವುದು.
ಸಚಿವರ ರಾಜಿನಾಮೆ- ಸಚಿವ ಮೌಖಿಕ ಆದೇಶ ಎಂದಿದ್ದಾರೆ. ಯಾವ ಉದ್ದೇಶಕ್ಕೆ ಆ ಭಾವನೆ ಬಂತು. ಎಲ್ಲವುಗಳ ಬಗ್ಗೆ (ನಿರ್ದಿಷ್ಟವಾಗಿ ಸಚಿವರ ಹೆಸರು ಸೂಚಿಸಿಲ್ಲ.) ನೇರವಾಗಿ ಹೊಣೆ ಮಾಡಲಾಗದು.ಸಿಬಿಐ ಸಂಸ್ಥೆಯೂ ಕೂಡ ದುರ್ಬಳಕೆ ಆಗುತ್ತೆ.ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾರೆ. ಆಪಾದನೆಗೆ ಅವರ ಹಕ್ಕಿದೆ. ಉತ್ತರ ಕೊಡುವುದಕ್ಕೆ ನಾವಿದ್ದೇವೆ. ಜನರಿಗೆ ಪಕ್ಷಕ್ಕೆ ಉತ್ತರ ನೀಡಲಾಗುವುದು.ಸರಕಾರಕ್ಕೆ ಅನೇಕ ಸಂದರ್ಭಗಳಲ್ಲಿ ಮುಜುಗರಗಳು ಆಗುತ್ತದೆ.
ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ನಿಗಮದ ಅಧ್ಯಕ್ಷರು ನಾಲ್ಕು ದಿನ ಕಚೇರಿಗೆ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ಶುದ್ಧ ಸುಳ್ಳು- ಅನಾವಶ್ಯಕ ಬ್ಲೇಮ್ ಮಾಡಲಾಗುತ್ತಿದೆ.ಯಾವುದೇ ಗೂಂಡಾ ಎಲಿಮೆಂಟ್ಸ್ ಗಳನ್ನು ಬಿಡಲ್ಲ. ಅವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುವುದು.
ಬಿಜೆಪಿ ಅವರ ಕಾಲದಲ್ಲಿ ಎಷ್ಟು ಕೊಲೆ ಆಗಿದೆ ಲೆಕ್ಕಾ ಕೊಡುವೆ. 460 (480) ಕೊಲೆ ಆಗಿದ್ವು.ಸೈಬರ್ ಕ್ರೈಂ- 45 ಸೆನ್ ಠಾಣೆ ತೆರೆಯಲಾಗಿದೆ.ಜನರಿಗೆ ಅವಕಾಶ ನೀಡಿದ್ದೇವೆ. ಯಾರೇ ಬಂದರೂ ಪ್ರಕರಣ ದಾಖಲಿಸುವಂತೆ ಹೇಳಲಾಗಿದೆ. ಅದಕ್ಕಾಗಿ ಕೇಸ್ ಜಾಸ್ತಿ ಆಗಿವೆ.ಚನ್ನಗಿರಿ ಕೇಸ್- ಆರೋಪಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಫ್.ಎಸ್.ಎಲ್ ರಿಪೋರ್ಟ್ ಬರುವವರೆಗೆ ಹೇಳಕ್ಕಾಗಲ್ಲ.ಬಿಜೆಪಿ ನಾಲ್ಕು ವರ್ಷ ನೇಮಕ ಮಾಡಿಲ್ಲ. ನಾವು ನೇಮಿಸಿದ್ದೇವೆ.ಪ್ರಜ್ವಲ್ ರೇವಣ್ಣ- ಬಂಧಿದ್ದೇ ಬಂಧಿಸಲಾಗುವುದು.ಕಮಿಷನರೇಟ್ ಅಗತ್ಯವಿದ್ದರೆ ಕ್ರಮ ವಹಿಸಲಾಗುವುದು ಎಂದರು.