
ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ಇಂದು ಎಸ್ ಪಿ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್ ಕುಮಾರ್ ಬೂಮ್ ರೆಡ್ಡಿ ಅವರ ನೇತೃತ್ವದಲ್ಲಿ, ಡಿವೈಎಸ್ಪಿ ಬಾಬು ಅಂಜನಪ್ಪ, ಡಿವೈಎಸ್ಪಿ ಡಿಎಆರ್ ವಿಭಾಗದ ಕೃಷ್ಣಮೂರ್ತಿ, ಜಯನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಿದ್ಧನಗೌಡ , ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಭರತ್, ತುಂಗಾನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಅಶ್ವತ್ ಗೌಡ, ಕುಂಸಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಹರೀಶ್ ಪಾಟೀಲ್, ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ ನಿರೀಕ್ಷಕರಾದ ಚಂದ್ರಕಲಾ ಸೇರಿ 50 ಜನ ಪೊಲೀಸರು 10 ಜನ ಪಿಎಸ್ಐ ಒಳಗೊಂಡ ಸಿಬ್ಬಂದಿಗಳ ತಂಡ ಧಿಡೀರ್ ದಾಳಿ ನಡೆಸಿ, ಮಹಿಳಾ ಬ್ಯಾರಾಕ್ ಸೇರಿದಂತೆ ಕೇಂದ್ರ ಕಾರಾಗೃಹವನ್ನು ಪರಿಶೀಲನೆ ನಡೆಸಿದರು.