ರಾಜ್ಯದ್ಯಂತ ಸುಮಾರು 1171 ಸಿಎಲ್7 ಸನ್ನದುಗಳನ್ನು ಅಬಕಾರಿ ಇಲಾಖೆ ನೀಡಿದ್ದು ಇವುಗಳ ಬಗ್ಗೆ ಈಗ ಸದನದಲ್ಲೂ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಅಕ್ರಮವಾಗಿ ರಾಜ್ಯದ್ಯಂತ 1171 ಲೈಸೆನ್ಸ್ ಗಳನ್ನು ನೀಡಲಾಗಿದ್ದು ಎಲ್ಲಾ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಬೃಹತ್ ಭ್ರಷ್ಟಾಚಾರದಿಂದ ಲೈಸೆನ್ಸ್ ಗಳನ್ನು ಪಡೆದಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ನಿಯಮ ಮೀರಿ 1171 ಸಿಎಲ್7 ಲೈಸೆನ್ಸ್ ಗಳನ್ನು ಮಂಜೂರು ಮಾಡಿದ್ದು ಕಾನೂನು ಬಾಹಿರವಾಗಿ ಈ ಲೈಸೆನ್ಸ್ ಗಳಿಗೆ ಅನುಮತಿ ಕೊಡಲಾಗಿದೆ ಎಂದು ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಶಾಸಕ ನಾರಾಯಣಸ್ವಾಮಿ ಅಬಕಾರಿ ಇಲಾಖೆ ಅನೇಕ ನಿಯಮಗಳನ್ನು ಗಾಳಿಗೆ ತೂರಿ ಲೈಸೆನ್ಸ್ ಗಳನ್ನು ನೀಡಿದೆ ಇದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಬೇಕು ಎಂದು ವಿಷಯವನ್ನು ಪ್ರಸ್ತಾಪಿಸಿದರು.
ಈ ಬಗ್ಗೆ ಸ್ಪೀಕರ್ ಕೂಡ ಚರ್ಚೆಗೆ ಕಾಲಾವಕಾಶ ನೀಡುವುದಾಗಿ ಒಪ್ಪಿಕೊಂಡರು.
