
ಶಿವಮೊಗ್ಗ >ಸೆಪ್ಟೆಂಬರ್> 19>ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ, ಸಮೀಪದ ಕೆಂದಾಳ ಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಬಳ ಎಂಬ ಊರಿನ 39 ವಯಸ್ಸಿನ ಪ್ರಕಾಶ್ ಎನ್ ವಿ, ತಂದೆ ದಿವಂಗತ ವೆಂಕಪ್ಪ ನಾಯಕ ಎಂಬ ಯುವಕ ಕೂಲಿ ಕೆಲಸ ಮಾಡುತ್ತಿದ್ದು. ನಿನ್ನೆ ಮಧ್ಯಾಹ್ನ ಸ್ಥಳೀಯರೊಬ್ಬರ ಮನೆಗೆ ಕೂಲಿ ಕೆಲಸಕ್ಕೆಂದು ತೆರಳಿದ್ದ ಯುವಕ ರಾತ್ರಿಯಾದರೂ ಮನೆಗೆ ಬರಲಿಲ್ಲ.
ಆತಂಕಗೊಂಡ ಈತನ ಹೆಂಡತಿ ಮನೆಯವರೆಲ್ಲಾ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲ ಹುಡುಕುತ್ತಾರೆ. ಎಲ್ಲೂ ಕಾಣದಿದ್ದಾಗ ಈತ ಕೆಲಸ ಮಾಡುತ್ತಿದ್ದ ಜಾಗದ ಹತ್ತಿರ ಹೋದಾಗ ಅಲ್ಲಿ ಶವವಾಗಿ ಬಿದ್ದಿರುವುದು ಕಂಡು ಬರುತ್ತದೆ.
ಈ ದುರ್ದೈವಿ ಯುವಕ 9 ವರ್ಷದ ಮಗ ಹಾಗೂ ಹೆಂಡತಿ ಪ್ರಮೀಳಾ, ತಾಯಿ , ಸಹೋದರ,ರನ್ನು ಬಿಟ್ಟು ಅನುಮಾನಸ್ಪದ ಸಾವು ಕಂಡಿದ್ದಾನೆ.
ಅಕ್ರಮ ಮಧ್ಯವೇ ಈತನ ಸಾವಿಗೆ ಕಾರಣ ಎಂದು ಸ್ಥಳೀಯರ ಆರೋಪ:
ತೀರ್ಥಹಳ್ಳಿ ತಾಲೂಕಿನಾದ್ಯಂತ ಅಕ್ರಮ ಮಧ್ಯವೂ ಎಲ್ಲೆಂದರಲ್ಲಿ ಸಿಗುತ್ತಿರುವುದರಿಂದ ಈಗಾಗಲೇ ಕುಡಿತದ ಚಟಕ್ಕೆ ಬಲಿಯಾಗಿರುವ ಜನರು ಹಗಲು ಹೊತ್ತಿನಲ್ಲಿ ಕುಡಿದು ಬಲಿಯಾಗುತ್ತಿದ್ದಾರೆ.
ಕೂಲಿ ಕಾರ್ಮಿಕರೇ ಇವರ ಟಾರ್ಗೆಟ್:
ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಕೂಲಿ ಕಾರ್ಮಿಕರೇ ಟಾರ್ಗೆಟ್ ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಇಡುವ ಇವರು ಮನೆಯಲ್ಲಿ ಹೆಂಡತಿ ಮಕ್ಕಳನ್ನು ಸಾಕಲು ಆಗದ ಪರಿಸ್ಥಿತಿಗೆ ಬಂದಿದ್ದಾರೆ.
ಸಚಿವರ ಆದೇಶಕ್ಕೆ ಕಿಮ್ಮತ್ತು ನೀಡದ ಅಧಿಕಾರಿಗಳು:
ಈ ಹಿಂದೆ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಹಾಲಿ ಗೃಹ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ಅವರು ಇಡೀ ಕ್ಷೇತ್ರದಾದ್ಯಂತ ಅಕ್ರಮ ಮದ್ಯ ಮಾರಾಟ ನಿಷೇಧವಾಗಬೇಕು. ಇಂತಹ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಕಠಿಣ ನಿರ್ಧಾರವನ್ನು ಪೊಲೀಸ್ ಮತ್ತು ಅಬಕಾರಿ ಇಲಾಖೆ ತೆಗೆದುಕೊಳ್ಳಬೇಕೆಂದು ಖಡಕ್ ಸೂಚನೆ ನೀಡಿದ್ದರು.
ಆದರೆ ಇದನ್ನು ಪಾಲಿಸದ ಅಧಿಕಾರಿಗಳು ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುವ ಹಾಗೆ ಮಾಡಿ ನಂತರ ಆ ವಿಷಯ ತಣ್ಣಗಾದನಂತರ ಮತ್ತೆ ಯಥಾಪ್ರಕಾರ ಮಾರಾಟಗಾರರು ಹಾಗೂ ಇವರಿಗೆ ದಾಸ್ತಾನು ನೀಡುವ ಅಂಗಡಿಯ ಮಾಲೀಕರು ಇಲಾಖೆಗೆ ಮಾಮೂಲಿ ನೀಡಿ ತಮ್ಮ ದಿನನಿತ್ಯದ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ.
ಗೃಹಸಚಿವರಿಗೆ ಮುಜುಗರ ಆಗುವ ಹಾಗೆ ಮಾಡಬೇಡಿ ಕೂಡಲೇ ಕಡಿವಾಣ ಹಾಕಿ ಸ್ಥಳೀಯರ ಆಗ್ರಹ:
ಇಡೀ ತೀರ್ಥಹಳ್ಳಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಿ ಆ ಮೂಲಕ ಬಡ ಕೂಲಿ ಕಾರ್ಮಿಕರನ್ನು ರಕ್ಷಿಸಿ. ಇಲ್ಲವಾದಲ್ಲಿ ಪ್ರಕಾಶ್ ನಂತವರು ಇನ್ನಷ್ಟು ಜನ ಬಲಿಯಾಗುವುದರಲ್ಲಿ ಸಂಶಯವಿಲ್ಲ .ತುಂಬಾ ವರ್ಷಗಳ ನಂತರ ಅಧಿಕಾರಕ್ಕೆ ಬಂದಿರುವ ಗೃಹಸಚಿವರಿಗೆ ಮುಜುಗರ ಆಗುವ ಹಾಗೆ ಮಾಡಬೇಡಿ.
ಅಕ್ರಮ ಮದ್ಯ ಮಾರಾಟದಲ್ಲಿ ಯಾರೇ ಇದ್ದರೂ ಯಾರ ಬೆಂಬಲವಿದ್ದರೂ ಕೂಡಲೇ ಬಂಧಿಸಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ ಎನ್ನುವುದು ಸ್ಥಳೀಯರ ಆಗ್ರಹ…
ವರದಿ.ರಘುರಾಜ್ ಹೆಚ್, ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899..