
ಶಿವಮೊಗ್ಗ >ಸೆಪ್ಟೆಂಬರ್> 19>ತೀರ್ಥಹಳ್ಳಿ>ರಾಜ್ಯದಲ್ಲಿ ಕಳೆದ 13- 14 ವರ್ಷಗಳಿಂದ ಸುಮಾರು120 ಜನ, ಶಿವಮೊಗ್ಗ ಜಿಲ್ಲೆಯಲ್ಲಿ 25 ಜನ, ನಿರಂತರವಾಗಿ ಆರೋಗ್ಯ ಇಲಾಖೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಆಗಿ ಕಾರ್ಯನಿರ್ವಹಿಸುತ್ತಿದ್ದು.
ಇವರಿಗೆ ಇವರ ವೃತ್ತಿ ಖಾಯಂ ಆಗಿಲ್ಲ, ಸಂಬಳದಲ್ಲೂ ಹೆಚ್ಚಳವಾಗಿಲ್ಲ, ಇತ್ತೀಚಿಗೆ ಬಂದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹೋಲಿಸಿದರೆ ಇವರಿಗೆ ಕೊಡುವ ಸಂಬಳ ತೀರಾ ಕಡಿಮೆ ಈ ಸಂಬಳದಲ್ಲಿ ತಮ್ಮ ಕುಟುಂಬವನ್ನು ನಿರ್ವಹಿಸುವ ಅನಿವಾರ್ಯತೆ ಇವರ ಹೆಗಲ ಮೇಲಿದೆ.
ಸದ್ಯದಲ್ಲೇ ಖಾಯಂ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಸಿಬ್ಬಂದಿಗಳು:
ತಾವು ಮಾಡುವ ವೃತ್ತಿ ಸದ್ಯದಲ್ಲೇ ಖಾಯಂ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಇಷ್ಟು ವರ್ಷಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಗೃಹಸಚಿವರ ಬಳಿ ತಮ್ಮ ನೋವು ಹೇಳಿಕೊಂಡ ಆರೋಗ್ಯ ಸಿಬ್ಬಂದಿಗಳು ಆರೋಗ್ಯ ಸಚಿವರ ಗಮನಕ್ಕೆ ತರುವಂತೆ ಮನವಿ:
ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ಬೇಟಿ ನೀಡಿದ ಆರೋಗ್ಯ ಸಿಬ್ಬಂದಿಗಳು ತಮ್ಮ ನೋವನ್ನು ಹಂಚಿಕೊಂಡರು. ಆದಷ್ಟು ಬೇಗ ನಮ್ಮ ವೃತ್ತಿಯನ್ನು ಖಾಯಂಗೊಳಿಸಬೇಕು ನಮಗೆ ಆಗುತ್ತಿರುವ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ಸಕಾರಾತ್ಮಕವಾಗಿ ಸ್ಪಂದಿಸಿರುವ ಗೃಹ ಸಚಿವರು:
ಆರೋಗ್ಯ ಸಿಬ್ಬಂದಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಗೃಹ ಸಚಿವರು ಕೂಡಲೇ ಇದನ್ನು ಆರೋಗ್ಯ ಸಚಿವರ ಗಮನಕ್ಕೆ ತರುತ್ತೇನೆ. ಆದಷ್ಟು ಬೇಗ ಈ ಸಮಸ್ಯೆಗೆ ಒಂದು ಅಂತ್ಯ ಹಾಡುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಆರೋಗ್ಯ ಸಿಬ್ಬಂದಿಗಳ ಸಂಕಷ್ಟಕ್ಕೆ ಕೈಜೋಡಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶರಧಿ ಪೂರ್ಣೇಶ್:
ಇಂದು ಮುಂಜಾನೆ ಗೃಹಸಚಿವರ ನಿವಾಸಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶರಧಿ ಪೂರ್ಣೇಶ್ ಅವರು ಆರೋಗ್ಯ ಸಿಬ್ಬಂದಿಗಳ ಜೊತೆಗೆ ತೆರಳಿ ಅವರ ಸಂಕಷ್ಟದಲ್ಲಿ ತಾವು ಜೊತೆಯಾದರು. ಈ ಸಂದರ್ಭದಲ್ಲಿ, ಆರೋಗ್ಯ ಸಿಬ್ಬಂದಿಗಳ ಜೊತೆ PHCO ಅಧ್ಯಕ್ಷರಾದ ರೂಪ ಬಾವಿ ಕೈಸೆರ, ಹಾಗೂ ಆರೋಗ್ಯ ಸಿಬ್ಬಂದಿಗಳಾದ ರೂಪಶ್ರೀ, ಸೌಮ್ಯ, ವಸಂತಿ, ಸುಪ್ರೀತಾ, ಸುಚಿತ್ರ, ದಿವ್ಯ, ಶಶಿಕಲಾ, ಪೂಜಾ, ಉಮ್ಮೆ ಸಲ್ಮಾ, ಮೊದಲಾದವರು ಹಾಜರಿದ್ದರು..
ವರದಿ.. ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ..9449553305/7892830899…