
ರಾಣೆಬೇನ್ನೂರ: ಸೆಪ್ಟೆಂಬರ್> 20> ನಗರದ ದುರ್ಗಾದೇವಿ ತರಕಾರಿ ಮಾರುಕಟ್ಟೆಗೆ ತಡ ರಾತ್ರಿ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ವಸ್ತುಗಳ ಬೆಂಕಿಗಾಹುತಿಯಾಗಿವೆ.

ಸೋಮವಾರ ತಡರಾತ್ರಿ ಬೆಂಕಿ ಬಿದ್ದಿದ್ದು, ತರಕಾರಿ ಮಾರುಕಟ್ಟೆಯ ಒಂದನೇ ಪ್ರಾಂಗಣದಲ್ಲಿ ಇರುವ 7 ಹಣ್ಣಿನ ಅಂಗಡಿ ಹಾಗೂ 10 ತರಕಾರಿ ಅಂಗಡಿಗಳು ಬಹುತೇಕ ಸುಟ್ಟು ಹೋಗಿವೆ. ಅಲ್ಲದೆ ತರಕಾರಿ ಅಂಗಡಿಗಳಲ್ಲಿದ್ದ ವಿವಿಧ ತರಕಾರಿಗಳು ಸಹ ಬೆಂಕಿಗೆ ಸುಟ್ಟು ಹೋಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ದಿನ ನಿತ್ಯ ತರಕಾರಿ ಹಾಗೂ ಹಣ್ಣುಗಳು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರು ಸದ್ಯ ಬೀದಿಗೆ ಬಿದ್ದಿದ್ದಾರೆ. ತಮ್ಮ ಅಂಗಡಿಗಳು ಸುಟ್ಟು ಹೋಗಿರುವುದನ್ನು ನೋಡಿ ಕಣ್ಣಿರು ಹಾಕುತ್ತಿರುವ ದೃಶ್ಯ ಕಂಡು ಬಂದಿತ್ತು.

ಇದೇ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಮಾನ್ಯ ಕೆ. ಬಿ. ಕೋಳಿವಾಡರವರು ಸ್ಥಳಕ್ಕೆ ಧಾವಿಸಿ ವಿಕ್ಷಿಸಿ ಮಾತನಾಡಿದ ಅವರು ಬೇಸರ ವ್ಯಕ್ತಪಡಿಸಿದ ಅವರು ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯವರು ಬಂದು ಸದ್ಯ ಬೆಂಕಿ ಆರಿಸಿದ್ದು, ಶಹರ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ…
ವರದಿ:- ಪವನ್. M C
ರಾಣೇಬೆನ್ನೂರು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899..