ಶಿವಮೊಗ್ಗ ಜಿಲ್ಲೆಯ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್(39) ಇಂದು ಸಂಜೆ ನಿಧನರಾಗಿದ್ದಾರೆ.
ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಂದು 5.45ರ ವೇಳೆಗೆ ನಿಧನರಾಗಿದ್ದು.
ಕಳೆದ ಎರಡು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ಬ್ರೈನ್ ಆಮ್ರೇಜ್ ಗೆ ಒಳಗಾಗಿ ಮೃತರಾಗಿದ್ದು.
ಮೃತ ಶಶಿಧರ್ ಪತ್ನಿ ತಮ್ಮ ತಂದೆ ತಾಯಿಯನ್ನು ಅಗಲಿದ್ದು ಸರಳ ಸ್ನೇಹಜೀವಿಯಾಗಿದ್ದ ಶಾಂತ ಸ್ವಭಾವದ ಶಶಿಧರ್ ಅಗಲಿಕೆ ಇಡೀ ಶಿವಮೊಗ್ಗ ಜಿಲ್ಲಾ ಪತ್ರಕರ್ತ ಮಿತ್ರರಲ್ಲಿ ತೀವ್ರ ದುಃಖ ತರಿಸಿದೆ.
ಅವರ ಪತ್ನಿ ಹಾಗೂ ಅವರ ಕುಟುಂಬಕ್ಕೆ ಶಶಿಧರ್ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.