Wednesday, April 30, 2025
Google search engine
Homeಶಿವಮೊಗ್ಗಪರಿಸರ ಪ್ರೇಮಿ,ಪ್ರಾಣಿ ಪ್ರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಇನ್ನಿಲ್ಲ..!

ಪರಿಸರ ಪ್ರೇಮಿ,ಪ್ರಾಣಿ ಪ್ರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಇನ್ನಿಲ್ಲ..!

ಶಿವಮೊಗ್ಗ ನಂದನ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಸರಿಸುಮಾರು 40 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ನಂದನ್ ಎಂದೆ ಖ್ಯಾತಿಗಳಿಸಿದ ಅಪರೂಪದ ಛಾಯಾಗ್ರಾಹಕ ಹೃದಯಾಘಾತದಿಂದ ನಮ್ಮನ್ನು ಅಗಲಿರುವುದು ಇಡೀ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ.

ನಿನ್ನೆಷ್ಟೇ ಗೆಳೆಯ ಸ್ನೇಹಜೀವಿ ಸರಳ ವ್ಯಕ್ತಿತ್ವದ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ಸಾವಿನ ನೋವಿನಲ್ಲಿದ್ದ ನಮಗೆ ಇಂದು ಇನ್ನೊಂದು ಆಘಾತ ಹಿರಿಯರು ಮಾರ್ಗದರ್ಶಕರು ಎಲ್ಲೇ ಸಿಕ್ಕರು ಆತ್ಮೀಯತೆಯಿಂದ ಮಾತನಾಡುತ್ತಾ ಒಂದಷ್ಟು ವಿಚಾರಗಳನ್ನು ಹರಟುತ್ತಾ ತಾವು ಪತ್ರಿಕಾ ರಂಗಕ್ಕೆ ಬಂದ ಪ್ರಾರಂಭದಲ್ಲಿ ಅನುಭವಿಸಿದ ನೋವುಗಳನ್ನು ನಂತರ ಎದುರಿಸಿದ ಸವಾಲುಗಳನ್ನು ವಿವರಿಸುತ್ತಾ ಯಾವುದೇ ಅಹಂ ಅಹಂಕಾರವಿಲ್ಲದೆ ಮಾತನಾಡುತ್ತಿದ್ದ ಗೆಳೆಯರಂತ ಹಿರಿಯರು ಇಂದು ಇಲ್ಲ ಎನ್ನುವುದೇ ಉಹಿಸಲು ಅಸಾಧ್ಯ ಆದರೆ ವಿಧಿಯ ಮುಂದೆ ಎಲ್ಲವೂ ಶೂನ್ಯ ರೈತ ಕುಟುಂಬದಲ್ಲಿ ಜನಿಸಿದ ನಂದನ್ 1994 ರಲ್ಲಿ ಪತ್ರಿಕೋದ್ಯಮಕ್ಕೆ ಬಂದು ವಿವಿಧ ಪತ್ರಿಕೆಗಳಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ನಂತರ ಇಂಡಿಯನ್ ಎಕ್ಸ್ಪ ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಇತ್ತೀಚಿಗೆ ಒಂದು ಕಣ್ಣಿನ ಆಪರೇಷನ್ ಕೂಡ ಆಗಿತ್ತು ಅದರಿಂದ ಕೊಂಚ ಬಳಲಿದ್ದರು ಒಂದು ಕಣ್ಣು ಅಷ್ಟಾಗಿ ಕಾಣಿಸುತ್ತಿರಲಿಲ್ಲ ಅದರ ನೋವು ಅವರಿಗೆ ಇತ್ತು ಆದರೂ ತೋರಿಸಿಕೊಳ್ಳುತ್ತಿರಲಿಲ್ಲ ಮತ್ತದೇ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಿದ್ದರು ಅಪಾರ ಪರಿಸರ ಪ್ರೇಮಿ, ಪ್ರಾಣಿ ಪ್ರಿಯರು ಆಗಿದ್ದ ನಂದನ್ ಕೋವಿಡ್ ನಂತಹ ಭೀಕರ ಸಮಯದಲ್ಲೂ ಕೂಡ ಗಿಡಗಳಿಗೆ ನೀರು ಹಾಕುವುದರ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದರು ಹಾಗೆ ಎಲ್ಲೇ ಮರ ಕಡಿದರೂ ಕೂಡ ಅದನ್ನು ವಿರೋಧಿಸುತ್ತಿದ್ದರು ಒಮ್ಮೊಮ್ಮೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ ನಮ್ಮಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಹಾಗೆ ಪ್ರಾಣಿ ಪ್ರಿಯರು ಆಗಿದ್ದ ನಂದನ್ ಯಾವುದಾದರೂ ಪ್ರಾಣಿಗಳಿಗೆ ತೊಂದರೆ ಆಗಿದ್ದರೆ ಅವುಗಳನ್ನು ಮನೆಗೆ ತಂದು ಔಷಧಿ ಹಚ್ಚಿ ಘೋಷಣೆ ಮಾಡುತ್ತಿದ್ದರು ಒಂದೆರಡು ಬಾರಿ ಮನೆಗೆ ಕರೆದುಕೊಂಡು ಹೋಗಿದ್ದ ನಂದನ್ ತಮ್ಮ ಅಮೋಘ ಕಣ್ಣಿನಲ್ಲಿ ತೆಗೆದ ಅಪರೂಪದ ಛಾಯಾ ಚಿತ್ರಗಳನ್ನು ತೋರಿಸುವುದರ ಜೊತೆಗೆ ಅವುಗಳ ಹಿಂದಿನ ವಿಷಯಗಳನ್ನು ಹಾಗೂ ಸಂದರ್ಭಗಳನ್ನು ವಿವರಿಸಿ ಹೇಳಿದ್ದರು .

ಭವಿಷ್ಯ ಅವರು ತೆಗೆದ ಛಾಯಾಚಿತ್ರಗಳ ವಿಷಯಗಳು ಹಾಗೂ ಸಂದರ್ಭಗಳನ್ನು ಇಟ್ಟುಕೊಂಡೆ ಒಂದಷ್ಟು ಸುದ್ದಿಗಳನ್ನು ಮಾಡಬಹುದು ಅಂತಹ ಅಪರೂಪದ ಛಾಯಾಗ್ರಾಹಕ ಎಂದರೆ ತಪ್ಪಾಗಲಾರದು.

ಇವರಿಗೆ ಸಾಕಷ್ಟು ಪ್ರಶಸ್ತಿಗಳು ಹರಿದು ಬಂದಿವೆ ಆದರೆ ಜನ ಪ್ರೀತಿಸುತ್ತಿದ್ದ ರೀತಿ ಪ್ರಶಸ್ತಿಗಳಿಗಿಂತ ಇವರಿಗೆ ಹೆಚ್ಚಾಗಿತ್ತು.

ಇಂದು ಅವರಿಲ್ಲ ಎನ್ನುವುದೇ ನೋವಿನ ಸಂಗತಿ ಆ ನಗು ಕಣ್ಣೆದುರಿಗೆ ಹಾಗೆ ಕಾಣುತ್ತಿದೆ ಮರೆಯಲು ಆಗುತ್ತಿಲ್ಲ ಮತ್ತೆ ಹುಟ್ಟಿ ಬನ್ನಿ ಎನ್ನಲಷ್ಟೇ ಸಾಧ್ಯ.

ಪಾರ್ಥೀವ ಶರೀರವನ್ನು ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ‌ ಅವರ ಸಾವಿನ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...