
ಬೆಂಗಳೂರು : ಸಪ್ಟೆಂಬರ್> 20>>ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ವಿಧಾನ ಪರಿಷತ್ತಿನಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಎರಡು ತಿದ್ದುಪಡಿ ಮಸೂದೆಗಳು ಸೇರಿದಂತೆ ಪ್ರಮುಖ ಮೂರು ವಿಧೇಯಕಗಳಿಗೆ ಸದನದ ಒಪ್ಪಿಗೆ ಪಡೆದರು.
ಒಪ್ಪಿಗೆ ಪಡೆದ ವಿಧೇಯಕಗಳು ಈ ಕೆಳಗಿನಂತಿವೆ:
ನ್ಯಾಯಾಲಯದಲ್ಲಿ ಸಾಕ್ಷಿಯ ಸಾಕ್ಷ್ಯವನ್ನು ಶ್ರವ್ಯ_ ದೃಶ್ಯ ವಿದ್ಯುನ್ಮಾನ ವಿಧಾನಗಳ ಮೂಲಕ ದಾಖಲಿಸುವ ಪ್ರಕ್ರಿಯೆಗೆ, ದಂಡ ಪ್ರಕ್ರಿಯಾ ಸಂಹಿತೆ ( ಕರ್ನಾಟಕ ತಿದ್ದುಪಡಿ) ವಿಧೇಯಕ 2021, ಬಂದಿ ಗಳ ಗುರುತಿಸುವಿಕೆ ( ತಿದ್ದುಪಡಿ ವಿಧೇಯಕ) 2021 ಮತ್ತು ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021, ಗಳಿಗೆ ಚರ್ಚೆಗಳ ಮೂಲಕ ಸದನದ ಅನುಮತಿ ಪಡೆದುಕೊಳ್ಳಲಾಯಿತು.
ವಿಧೇಯಕಗಳಿಗೆ ಒಪ್ಪಿಗೆ ಸೂಚಿಸಿದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು ಗೃಹ ಸಚಿವರು:
ಇದಕ್ಕೂ ಮುನ್ನ ಈ ಮೂರು ವಿಧೇಯಕ ಗಳು ವಿಧಾನ ಸಭೆಯಲ್ಲಿ, ಚರ್ಚಿತವಾಗಿ ಅನುಮೋದನೆ ಹೊಂದಿದ್ದವು.ಈ ಎಲ್ಲಾ ಮಸೂದೆಗಳನ್ನು ಸದನದ ಸದಸ್ಯರು ಒಮ್ಮತದಿಂದ ಒಪ್ಪಿಗೆ ನೀಡಿದ್ದಕ್ಕೆ, ಸಚಿವರು ಧನ್ಯವಾದ ಸಲ್ಲಿಸಿದರು.
ವರದಿ.. ರಘುರಾಜ್ ಹೆಚ್ .ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…